ಬ್ರೇಕಿಂಗ್ ನ್ಯೂಸ್
16-10-20 12:45 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 16 : ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ತುಳು ರಾಷ್ಟ್ರ ಭಾಷೆ. ಇಲ್ಲಿ ಬಂದ ಯಾವುದೇ ಉತ್ತರ ಭಾರತೀಯನೇ ಆದರೂ ಒಂದು ತಿಂಗಳಲ್ಲಿ ತುಳು ಕಲಿಯುತ್ತಾನೆ ಎನ್ನುವ ಮಾತಿದೆ. ಇದಕ್ಕಾಗೇ ತುಳುವನ್ನು ಮಂಗಳೂರಿನ ಮಂದಿಯ ರಾಷ್ಟ್ರ ಭಾಷೆ ಅಂತ ಕೆಲವರು ಟೀಕಿಸುತ್ತಾರೆ. ಕರಾವಳಿಗರ ಪ್ರೀತಿಯ ತುಳು ಭಾಷೆಗೂ ಸಮೃದ್ಧ ಇತಿಹಾಸ ಇದೆ, ಸಾಹಿತ್ಯ, ಪರಂಪರೆ, ಸ್ವಂತ ಲಿಪಿಯೂ ಇದೆ ಎನ್ನುವುದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಆದರೆ, ತುಳು ಲಿಪಿ ಪ್ರಚಲಿತದಲ್ಲಿ ಮಾತ್ರ ಇಲ್ಲ.
ಹೀಗಾಗಿ ತುಳು ಲಿಪಿಗೆ ಸರಕಾರ ಪ್ರೋತ್ಸಾಹ ನೀಡಬೇಕು, ಭಾಷೆಯನ್ನು ಉತ್ತೇಜಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ಬೇಡಿಕೆಯೂ ಕರಾವಳಿಯಲ್ಲಿದೆ. ಇದೇ ವೇಳೆ, ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಈ ನಿಟ್ಟಿನಲ್ಲಿ ಹೊಸ ಉಪಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಮಂಗಳೂರಿನ ಕಚೇರಿಯಲ್ಲಿ ತುಳು ಲಿಪಿಯಲ್ಲಿ ನಾಮಫಲಕ ಹಾಕಿದ್ದು ತುಳುವರ ಪ್ರೀತಿಗೆ ಪಾತ್ರರಾಗಿದ್ದಾರೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇಲ್ಲಿನ ಜನರಿಗೆ ಆಡು ಭಾಷೆ ಮತ್ತು ವ್ಯಾವಹಾರಿಕ ಭಾಷೆ ತುಳುವೇ ಆಗಿದೆ. ಈಗೀಗ ತುಳು ಭಾಷೆಯ ಬಗ್ಗೆ ಬಹಳಷ್ಟು ಕೆಲಸಗಳಾಗುತ್ತಿವೆ. ಸಾಹಿತ್ಯ ರಚನೆ, ತುಳು ಸಂಘಟನೆಗಳು ಹುಟ್ಟಿಕೊಂಡಿವೆ. ಆದರೆ, ತುಳು ಲಿಪಿಯ ಬಳಕೆ ಮಾತ್ರ ತೀರಾ ಕಡಿಮೆಯಿದ್ದು, ಬೆರಳೆಣಿಕೆಯ ಜನರು ಮಾತ್ರ ತುಳು ಲಿಪಿ ಬಲ್ಲವರಿದ್ದಾರೆ. ಆದರೆ ಇತ್ತೀಚೆಗೆ ತುಳು ಲಿಪಿಯ ವಿಚಾರದಲ್ಲಿ ಯುವಜನರು ಎಚ್ಚೆತ್ತುಕೊಂಡಿದ್ದು, ತುಳು ಸಂಘಟನೆಗಳ ಜೊತೆ ಸೇರಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಇವುಗಳಲ್ಲಿ ತುಳು ಲಿಪಿ ಕಲಿಕೆ ಕೂಡ ಒಂದು.
ಇಂಥ ಕಾರ್ಯಕ್ರಮಗಳಿಗೆ ಪೂರಕವಾಗಿ ಮಂಗಳೂರು ನಗರದ ಶಾಸಕ ವೇದವ್ಯಾಸ ಕಾಮತ್, ತಮ್ಮ ಕಚೇರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವ ಲಿಪಿಯ ಬಗ್ಗೆ ಉತ್ತೇಜಿಸುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಪ್ರೊಮೋಟ್ ತುಳು ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಶಾಸಕರ ನೆಲೆಯಲ್ಲಿ ವೇದವ್ಯಾಸ ಕಾಮತ್ ಅವರ ಉತ್ತೇಜನಕಾರಿ ಕಾರ್ಯಕ್ಕೆ ತುಳುವರು ಮೆಚ್ಚಿಕೊಂಡಿದ್ದಾರೆ.
In order to promote Tulu Lipi Mangalore MLA Vedavyas kamath aspires by designing his official lettehead and Name Board in Tulu Lipi.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am