ಬ್ರೇಕಿಂಗ್ ನ್ಯೂಸ್
02-01-23 01:38 pm Mangalore Correspondent ಕರಾವಳಿ
ಮಂಗಳೂರು, ಜ.2: ಬಿಜೆಪಿಯವರು ಕದಡಿದ ಕೆರೆಯಲ್ಲಿ ಮೀನು ಹಿಡಿಯಲು ನೋಡುತ್ತಾರೆ. ದೇಶದಲ್ಲಿ ಗಲಭೆ ಎಬ್ಬಿಸಿ, ಕೋಮುಗಳ ನಡುವೆ ದ್ವೇಷ ಹಬ್ಬಿಸಿ ಮತ ಗಳಿಸಲು ಹುನ್ನಾರ ನಡೆಸುತ್ತಾರೆ. ಬಿಜೆಪಿ ನಾಯಕರ ಈ ರೀತಿಯ ದಾಳಕ್ಕೆ ಕಾಂಗ್ರೆಸ್ ನಾಯಕರು ಬಲಿ ಬೀಳಬಾರದು. ತಮ್ಮ ಜಾತ್ಯತೀತ ಸಿದ್ಧಾಂತ ನಂಬಿಕೊಂಡು ಜನರ ಮುಂದೆ ಹೋದಲ್ಲಿ ಖಂಡಿತ ಚುನಾವಣೆ ಗೆಲ್ಲಬಹುದು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮೊಯ್ಲಿ, ಬಿಜೆಪಿ ನಾಯಕರು ಏನೇನೋ ಹೇಳಿಕೆ ಕೊಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ಕೊಟ್ಟು ಬಲಿ ಬೀಳೋಕೆ ಹೋಗಬಾರದು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ತಂತ್ರಕ್ಕೆ ಬಲಿ ಬೀಳದೆ ಸಂಯಮ ಕಾಯ್ದುಕೊಂಡು ಬಹುಮತ ಗಳಿಸಿದ್ದನ್ನು ಕಾಣಬಹುದು. ಅದೇ ರೀತಿ ಹೋದರೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಬಹುಮತದ ಸಾಧನೆ ಮಾಡಬಹುದು ಎಂದರು.
ಅಮುಲ್ ಮತ್ತು ನಂದಿನಿ ವಿಲೀನಗೊಳಿಸುವ ಅಮಿತ್ ಷಾ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ಮನುಷ್ಯ ತನ್ನ ಪಾಪದ ಕೃತ್ಯದಿಂದಾಗಿ ಗುಜರಾತಿನಿಂದಲೇ ಎರಡೂವರೆ ವರ್ಷ ಕಾಲ ಗಡೀಪಾರು ಶಿಕ್ಷೆಗೆ ಒಳಗಾಗಿದ್ದವರು. ಅಂಥ ಮನುಷ್ಯ ಕಾಂಗ್ರೆಸ್ ನಾಯಕರಿಗೆ ಪಾಠ ಹೇಳುತ್ತಾರೆ. ಈಗ ನಂದಿನಿ ವಿಲೀನಗೊಳಿಸುವ ಪ್ರಸ್ತಾಪ ಮಾಡಿದ್ದು ಅತ್ಯಂತ ಅವಿವೇಕತನದ ಹೇಳಿಕೆ. ಇಡೀ ಸಹಕಾರಿ ಕ್ಷೇತ್ರವನ್ನೇ ಹಳಿ ತಪ್ಪಿಸುವ ಹುನ್ನಾರ. ಸಹಕಾರಿ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಯತ್ನಿಸುತ್ತಿದ್ದಾರೆ. ಫೆಡರಲ್ ಸಿಸ್ಟಮ್ ಬಗ್ಗೆ ಅರಿವು ಹೊಂದಿಲ್ಲದ, ಆ ಬಗ್ಗೆ ನಂಬಿಕೆ ಇಲ್ಲದ ವ್ಯಕ್ತಿ ಗೃಹ ಸಚಿವನಾಗಿದ್ದು ನಮ್ಮ ದುರಂತ. ಇವರೆಲ್ಲ ಕಪ್ಪು ಹಣದಲ್ಲಿ ಮುಳುಗಿ ಹೋಗಿದ್ದಾರೆ. ಜನರು ಇದಕ್ಕೆಲ್ಲ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ದೇಶ ಇಷ್ಟೊಂದು ದುಸ್ಥಿತಿಗೆ ಯಾವತ್ತೂ ಬಂದಿರಲಿಲ್ಲ. ಕ್ರೈಮ್ ರೇಟಲ್ಲಿ ಕರ್ನಾಟಕ, ದೇಶದ ಸ್ಥಾನ ಹೆಚ್ಚಿದೆ. ಆದರೆ ಸಂತುಷ್ಟಿ ವಿಚಾರದಲ್ಲಿ ಭಾರತದ ಸ್ಥಾನ 146ಕ್ಕೆ ಕುಸಿದಿದೆ. ರಾಜ್ಯಕ್ಕೆ ಇವರ ಕೊಡುಗೆ ಏನಿದೆ ಹೇಳಿ. ಟೊಯೊಟಾ, ವಿಜಯನಗರ ಸ್ಟೀಲ್ ಸೇರಿದಂತೆ ದೊಡ್ಡ ಸಂಸ್ಥೆಗಳನ್ನು ಹುಟ್ಟುಹಾಕಿದ್ದು ಕಾಂಗ್ರೆಸ್ ಪಕ್ಷ. ಬೆಂಗಳೂರು, ಮಂಗಳೂರು ಏರ್ಪೋರ್ಟ್ ಕೊಟ್ಟಿದ್ದು ಕಾಂಗ್ರೆಸ್. ಮಂಗಳೂರಿನಲ್ಲಿ ಪರ್ಯಾಯವಾಗಿ ಪಡುಬಿದ್ರಿಯ ನಡ್ಸಾಲು ಬಳಿ ಏರ್ಪೋರ್ಟ್ ಆಗಬೇಕಿತ್ತು. ಆದರೆ ಅದನ್ನು ಸಾಧಿಸಲು ಇವರಿಂದ ಆಗಿಲ್ಲ. ಇದ್ದ ವಿಮಾನ ನಿಲ್ದಾಣವನ್ನೇ ಖಾಸಗೀಕರಣ ಮಾಡುತ್ತಿದ್ದಾರೆ. ಬಿಜೆಪಿಯವರು ಏನಾದ್ರೂ ಒಂದು ಹೇಳಿಕೊಳ್ಳುವ ಸಾಧನೆ ಮಾಡಿದ್ದಾರೆಯೇ, ಒಂದು ಕಂಪನಿ ಸ್ಥಾಪನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮೃದು ಹಿಂದುತ್ವದ ಹಿಂದೆ ಹೋಗುತ್ತಿದೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸಿಗೆ ಯಾವುದೇ ಮೃದು, ಹಾರ್ಡ್ ಕೋರ್ ಅನ್ನುವ ವಿಚಾರ ಇಲ್ಲ. ಎಲ್ಲರನ್ನೂ ಜೊತೆಗೆ ಒಯ್ಯುವುದೇ ಕಾಂಗ್ರೆಸ್ ಪಕ್ಷ ಎಂದರು. ದೇಶದಲ್ಲೀಗ 12 ರಾಜ್ಯಗಳಲ್ಲಿ ಬಿಜೆಪಿ ಜನಾದೇಶ ಇಲ್ಲದಿದ್ದರೂ ಅಧಿಕಾರ ನಡೆಸುತ್ತಿದ್ದರೆ, ಅದಕ್ಕೆ ಕಾರಣ ಅಮಿತ್ ಷಾ. ಕಪ್ಪು ಹಣದಿಂದ ಶಾಸಕರನ್ನು ಖರೀದಿಸಿ ಅಧಿಕಾರ ನಡೆಸುತ್ತಿದ್ದಾರೆ ಎಂದರು. ಕಾರ್ಕಳದಲ್ಲಿ ನೀವು ಅಭ್ಯರ್ಥಿಯಾಗುತ್ತೀರಾ ಎಂಬ ಪ್ರಶ್ನೆಗೆ, ಕಾರ್ಕಳದಲ್ಲಿ ನಾನೂ ನಿಲ್ಲುವುದಿಲ್ಲ. ನನ್ನ ಮಗನೂ ಚುನಾವಣೆಗೆ ನಿಲ್ಲುವುದಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.
Former union minister Veerappa M Moily has clarified that neither he nor his son Harsha Moily will contest in the upcoming elections from Karkala or from any other constituency. Talking to media persons here on Sunday, January 1, Veerappa Moily said, "in the forthcoming elections, I myself or my son Harsha Moily will not contest from Karkala constituency or in any other constituency. The Karkala seat will be given to a deserving Congress candidate.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm