ಬ್ರೇಕಿಂಗ್ ನ್ಯೂಸ್
04-01-23 10:05 pm Mangalore Correspondent ಕರಾವಳಿ
ಮಂಗಳೂರು, ಜ.4: ರಾಮ ಜನ್ಮಭೂಮಿ, ತ್ರಿಪಲ್ ತಲಾಖ್ ಮತ್ತಿತರ ದೇಶದ ಅತ್ಯಂತ ಪ್ರಮುಖ ವಿವಾದಗಳ ಬಗ್ಗೆ ತೀರ್ಪು ನೀಡಿದ್ದ ಮೂಡುಬಿದ್ರೆ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್ ಜನವರಿ 4ರಂದು ನಿವೃತ್ತಿಯಾಗಿದ್ದಾರೆ.
ಅಯೋಧ್ಯಾ ರಾಮ ಜನ್ಮಭೂಮಿ ಬಗ್ಗೆ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರಲ್ಲಿ ಎಸ್.ಎ. ನಜೀರ್ ಒಬ್ಬರೇ ಮುಸ್ಲಿಂ ನ್ಯಾಯಾಧೀಶರಾಗಿದ್ದರು. ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರಿದ್ದ ಸಾಂವಿಧಾನಿಕ ಪೀಠವು ಕೇಂದ್ರ ಸರಕಾರದ ನೋಟು ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರಕರಣದಲ್ಲಿಯೂ ತೀರ್ಪು ನೀಡಿದ್ದರು. ಆ ಪೀಠದಲ್ಲಿ ಎಸ್.ಎ ನಜೀರ್ ಹಿರಿಯ ನ್ಯಾಯಾಧೀಶರಾಗಿದ್ದು, ಅವರ ನೇತೃತ್ವದಲ್ಲಿಯೇ ಪೀಠ ರಚನೆಯಾಗಿತ್ತು.
1956 ಜನವರಿ 5ರಂದು ಮೂಡುಬಿದ್ರೆಯಲ್ಲಿ ಜನಿಸಿದ್ದ ನಜೀರ್ ಅವರು ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮೂಡುಬಿದ್ರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಗಳಿಸಿದ್ದರು. ಆನಂತರ, ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದರು. 1983ರಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದ್ದ ನಜೀರ್ ಅವರು ನ್ಯಾಯಾಧೀಶರ ಪರೀಕ್ಷೆ ಬರೆದು 2003ರಲ್ಲಿ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೇರಿದ್ದರು. 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ಪಡೆದಿದ್ದರು.
ತುಳು, ಕನ್ನಡ, ಬ್ಯಾರಿ ಭಾಷೆಯನ್ನೂ ತಿಳಿದಿರುವ ನಜೀರ್ ಅವರು, ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲದಿಂದ ಈ ಹುದ್ದೆಗೇರಿದ ಏಕೈಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು. ಇಂಗ್ಲಿಷ್ ಅಲ್ಲದೆ, ಸ್ಥಳೀಯ ಭಾಷೆಗಳಲ್ಲಿಯೂ ಭಾಷಣ ಮಾಡುತ್ತಿದ್ದುದು ಅವರ ಹೆಗ್ಗಳಿಕೆ. ಇತ್ತೀಚೆಗಷ್ಟೇ ಮೂಡುಬಿದ್ರೆಯ ವಕೀಲರ ಭವನದ ಉದ್ಘಾಟನೆಗೂ ಆಗಮಿಸಿದ್ದರು. ಆನಂತರ, ತಮ್ಮ ಸೇವೆಯ ಕೊನೆಯ ದಿನಗಳಿಗಾಗಿ ವೃತ್ತಿಗೆ ಮರಳಿದ್ದ ನಜೀರ್ ಅತ್ಯಂತ ಮಹತ್ವದ ನೋಟು ಅಮಾನ್ಯ ಪ್ರಕರಣದಲ್ಲಿ ತೀರ್ಪು ನೀಡಿ ಈಗ ನಿವೃತ್ತಿಯಾಗಿದ್ದಾರೆ.
Supreme Court judge, Justice S Abdul Nazeer, hailing from Moodbidri who was one among those who gave historic verdicts on Ayodhya Ram Janmabhoomi Babri Masjid, triple talaq and demonetisation issues, retired on Wednesday, January 4. He was the only Muslim among the five-judge bench who announced the Ayodhya verdict.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm