ಬ್ರೇಕಿಂಗ್ ನ್ಯೂಸ್
07-01-23 08:05 pm Mangalore Correspondent ಕರಾವಳಿ
ಉಳ್ಳಾಲ, ಜ.7 : ಕಲ್ಲಾಪು, ಬುರ್ದುಗೋಳಿಯ ಶ್ರೀ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದಲ್ಲಿ ನಿರ್ಮಾಣಗೊಂಡ ನೂತನ ಭಂಡಾರದ ಮನೆಗೆ ಭಕ್ತಾದಿಗಳು ನೀಡಿದ ಬಂಗಾರದ ಮುಟ್ಟಾಲೆಯನ್ನ ವರ್ಣರಂಜಿತ ಶೋಭಾಯಾತ್ರೆಯಲ್ಲಿ ಸಮರ್ಪಿಸಲಾಯಿತು.
ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಿಂದ ವೈಭವದ ಶೋಭಾಯಾತ್ರೆ ಹೊರಟು ಕಲ್ಲಾಪು, ಕೆರೆಬೈಲು ಬಳಿಯ ಶ್ರೀನಾಗದೇವರ ಕಟ್ಟೆಯಿಂದ ಪೂರ್ಣಕುಂಭ ಕಲಶ, ವಾದ್ಯ, ಚೆಂಡೆಗಳ ಘೋಷದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬುರ್ದುಗೋಳಿಯ ಕಾಯಂಗಳ ಬಳಿ ನೂತನವಾಗಿ ನಿರ್ಮಿಸಿರುವ ಭಂಡಾರಮನೆಗೆ ಬಂಗಾರದ ಮುಟ್ಟಾಲೆ ಸಮರ್ಪಣೆಯಾಯಿತು. ಕಲ್ಲಾಪು, ಪಟ್ಲ ಮಸೀದಿ ಬಳಿ ನೆರೆದಿದ್ದ ಮುಸಲ್ಮಾನ ಬಾಂಧವರು ಶೋಭಾಯಾತ್ರೆಯಲ್ಲಿ ಸಾಗಿ ಬಂದವರ ದನಿವರಿಸಲು ತಂಪು ಪಾನೀಯ ನೀಡಿ ಉಪಚರಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ, ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ಬೆವರು ಮತ್ತು ಕಣ್ಣೀರ ಹನಿಗಿರುವ ಶಕ್ತಿ ಬೇರೆ ಯಾವುದಕ್ಕೂ ಸಿಗದು, ಅದು ಈ ಮಣ್ಣಿನ ಗುಣ. ಶ್ರಮ ಜೀವಿಗಳಿಗೂ ಸಾಕಷ್ಟು ಗೌರವ ಸಿಕ್ಕಿದ್ದು ಅವಮಾನಕ್ಕೆ ತುತ್ತಾಗಿ ಕಣ್ಣೀರ ಹನಿ ಸುರಿಸಿದವರಿಗೂ ಶಾಶ್ವತವಾದ ಸ್ಥಾನ ಸಿಕ್ಕಿರುವುದಕ್ಕೆ ಕೊರಗ ತನಿಯನಿಗೆ ಕಲ್ಲಾಪು ಬುರ್ದುಗೋಳಿಯ ಈ ಮಣ್ಣಿನಲ್ಲಿ ಬಂಗಾರದ ಮುಟ್ಟಾಲೆ ಸಮರ್ಪಣೆ ಸಾಕ್ಷಿಯಾಗಿದೆ ಎಂದರು.
ರಾಜನ್ ದೈವಕ್ಕೆ ನ್ಯಾಯ ಕೊಟ್ಟ ಬಬ್ಬು, ಅರಸು ದೈವಗಳ ನುಗ್ಗಾಟದ ನಡುವೆ ಪಂಜಂದಾಯ ದೈವಕ್ಕೆ ನ್ಯಾಯಕೊಟ್ಟ ದೈವ ಕೊರಗಜ್ಜನ ಕಾರಣಿಕ ಹೇಳತೀರದು. ಅಜ್ಜನ ಪ್ರಸಾದ ಹಣೆಗೆ ಹಚ್ಚಿ ತೆರಳಿದರೆ ಯಾವುದೇ ಋಣಾತ್ಮಕ ಘಟನೆ ಸಂಭವಿಸದು ಎಂಬ ನಂಬಿಕೆ ನನ್ನದಾಗಿದ್ದು ನಮ್ಮ ಮಕ್ಕಳಲ್ಲೂ ಆ ನಂಬಿಕೆ ಬಲಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭ ಕ್ಷೇತ್ರಕ್ಕೆ ಸೇವೆ ನೀಡಿದ ದೈವ ನರ್ತಕರಾದ ಮಾಯಿಲ, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು, ಗೌರವಾಧ್ಯಕ್ಷ ಸಂಜೀವ ಭಂಡಾರಿ ತೋಡ್ದಲ, ಸ್ವರ್ಣಶಿಲ್ಪಿ ಸತೀಶ್ ಆಚಾರ್ಯ ಕುಪ್ಪೆಪದವು ಹಾಗೂ ಕ್ಷೇತ್ರದ ಸೇವಕ ರಾಘವ ಕುಲಾಲ್ ತೋಡ್ದಲ ಇವರನ್ನು ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರದ ಭಂಡಾರಮನೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಗಂಗಾಧರ್ ಉಳ್ಳಾಲ್, ಸಮಿತಿ ಉಪಾಧ್ಯಕ್ಷ ಹಾಗೂ ಮಧ್ಯಸ್ಥ ದೇವದಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗಟ್ಟಿ ಕಾಯಂಗಳ, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ನಾಯಕ್ ಕಲ್ಲಾಪು, ಪ್ರವೀಣ್ ಕುಂಪಲ, ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.
Golden mutale donated by the devotees to the new bhandara house constructed at the adisthalam of Sri Guliga-Koragajja Udbhava Shila at Burdugoli, Kallapu, Burdugoli, was offered in a colourful shobha yatra. The procession started from Someshwara Sri Somanatha Temple and proceeded on foot from Sri Nagadevara Katte near Kallapu, Kerebailu on foot with the chanting of Poorna Kumbha Kalash, instruments and balls.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm