ಬ್ರೇಕಿಂಗ್ ನ್ಯೂಸ್
11-01-23 10:53 pm Mangalore Correspondent ಕರಾವಳಿ
ಮಂಗಳೂರು, ಜ.11 : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚವುದಕ್ಕೂ ಕೆಯುಐಡಿಎಫ್ ಸಿಯಿಂದ ಸಾಲ ಮಾಡುತ್ತಿದ್ದಾರೆ. ಪಾಲಿಕೆಯ ಆರ್ಥಿಕ ದುಸ್ಥಿತಿ ಏನಾಗಿದೆ. ಫ್ಲೆಕ್ಸ್, ಬೋರ್ಡ್ ಗಳನ್ನು ಹಾಕಲು ಮಾತ್ರ ಇವರು ಕಾಮಗಾರಿ ಮಾಡುವುದೋ.. ಪಾಲಿಕೆಯ ಸದಸ್ಯರು ಡಮ್ಮಿ, ಶಾಸಕರು ಮಾತ್ರ ಆಕ್ಟಿವ್. ಹೀಗಾಗಿ ನಾಲ್ಕುವರೆ ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್, ರಾಜ್ಯ ಸರ್ಕಾರದಿಂದ ಎಷ್ಟು ದುಡ್ಡು ತಂದಿದ್ದಾರೆ. ಯಾವೆಲ್ಲ ಕಾಮಗಾರಿ ಮಾಡಿದ್ದಾರೆಂದು ಶ್ವೇತ ಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್ಸಿ ಐವಾನ್ ಡಿಸೋಜ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮಂಗಳೂರಿನಲ್ಲಿ ಏನಾದ್ರೂ ಕಾಮಗಾರಿ ಆಗಿದ್ದರೆ ಅದು ಹಿಂದಿನ ಸರಕಾರದ್ದು. ಬಿಜೆಪಿ ಅವಧಿಯಲ್ಲಿ ಯಾವುದೇ ಕಾಮಗಾರಿ ಆಗಿಲ್ಲ. ಸ್ಮಾರ್ಟ್ ಸಿಟಿಗೆ ಅನುದಾನ ಕೊಟ್ಟಿರುವುದು ವಾಟರ್ ಫ್ರಂಟ್, ಬಂದರು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ. ಆದರೆ ಉದ್ದೇಶಿತ ಕಾಮಗಾರಿ ಬಿಟ್ಟು ಮಂಗಳೂರಿನಲ್ಲಿ ಬೇರೆಲ್ಲ ಕಾಮಗಾರಿ ಮಾಡಿದ್ದಾರೆ. ಕದ್ರಿ ಪಾರ್ಕ್ ಹೊರಗಡೆ ಪಾರ್ಕಿಂಗ್ ಇಲ್ಲ. ಎರಡು ಕಾರು ಬಂದಲ್ಲಿ ನಿಲ್ಲಿಸಲು ಜಾಗ ಇಲ್ಲದೆ ಪರದಾಡುವ ಸ್ಥಿತಿಯಾಗಿದೆ. ಅಲ್ಲಿಗೆ 28 ಕೋಟಿ ಹಾಕಿದ್ದಾರಂತೆ. ಪಾರ್ಕ್ ಒಳಗಡೆ ಯಾವುದೇ ಕೆಲಸ ಆಗಿಲ್ಲ.
ಲೋಬೊ ಶಾಸಕರಾಗಿದ್ದಾಗ ಮಾಡಿದ್ದ ಸಂಗೀತ ಕಾರಂಜಿ ಈಗ ತುಕ್ಕು ಹಿಡಿದಿದೆ, ಅದನ್ನು ಕನಿಷ್ಠ ನಿರ್ವಹಣೆ ಮಾಡುವುದಕ್ಕೂ ಬಿಜೆಪಿ ಆಡಳಿತಕ್ಕೆ ಆಗಿಲ್ಲ. ಕದ್ರಿ ಪಾರ್ಕ್ ಕಾಮಗಾರಿ ಜಾಗಕ್ಕೆ ಶಾಸಕರು ಹೋಗಿ ಕೆಲಸ ನೋಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಮೀನುಗಾರಿಕಾ ಧಕ್ಕೆ ಒಂದು ಭಾಗದಲ್ಲಿ ಬಿರುಕು ಬಿಟ್ಟಿದೆ, ಅಪಾಯಕಾರಿ ಜಾಗದಲ್ಲಿ ಮೀನುಗಾರರು ಕೆಲಸ ಮಾಡುತ್ತಿದ್ದಾರೆ. ಯಾವಾಗ ಬೇಕಾದರೂ ಧಕ್ಕೆ ಕುಸಿದು ಬಿದ್ದು ಹೋಗಬಹುದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಂದರು ಅಭಿವೃದ್ಧಿ ಮಾಡಬೇಕಿತ್ತು. ಅದನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಎಲ್ಲಿ ಪರ್ಸೆಂಟ್ ಜಾಸ್ತಿ ಸಿಗುತ್ತೋ ಅದನ್ನು ಮಾತ್ರ ಮಾಡಿದ್ದೀರಿ. ಎಲ್ಲಿ ಜನರಿಗೆ ಅಗತ್ಯವಿದೆಯೋ ಅದನ್ನು ಮಾಡಿಲ್ಲ.
ಸುರತ್ಕಲ್ ಮಾರುಕಟ್ಟೆಯನ್ನು ಈ ಹಿಂದಿನ ಸರಕಾರ ಇದ್ದಾಗ 50 ಕೋಟಿ ರಾಜ್ಯ ಸರ್ಕಾರ ಮತ್ತು ಪಾಲಿಕೆಯಿಂದ 11 ಕೋಟಿ ಹಾಕಿದ್ದರು. ಅದನ್ನು ಐದು ವರ್ಷಗಳ ತನಕವೂ ಶಾಸಕರು ಹತ್ತಿರ ಹೋಗಿಲ್ಲ. ಈಗ ಮತ್ತೆ 20 ಕೋಟಿ ಸೇರಿಸಿ 80 ಕೋಟಿಯ ಟೆಂಡರ್ ಮಾಡುತ್ತಿದ್ದಾರೆ, ನಾಚಿಕೆಯಾಗಬೇಕು.
ನಾವು ಈಗ ಪಾಲಿಕೆಯ ಕಮಿಷನರ್ ಬಳಿ ಕೇಳುವುದು ಏನಂದ್ರೆ, ಯಾವುದಕ್ಕೆ ಏನೆಲ್ಲ ಖರ್ಚು ಆಗಿದೆಯೋ ಅದನ್ನು ಲೆಕ್ಕಪತ್ರ ಕೊಡಿ. ಸಾಮಾನ್ಯ ನಿಧಿಯಿಂದ ಬಿಡುಗಡೆ ಮಾಡಿರುವ ಹಣ ಎಷ್ಟು ? ಡಬಲ್ ಇಂಜಿನ್ ಸರ್ಕಾರದಲ್ಲಿ ಎಷ್ಟು ಅನುದಾನ ಕೊಟ್ಟಿದ್ರಿ ಎನ್ನುವುದರ ಲೆಕ್ಕ ಹೇಳಿ. ಶಾಸಸಕರು ತಮ್ಮ ಅವಧಿಯಲ್ಲಿ ಎಷ್ಟು ಮನೆಗಳನ್ನು ಕೊಟ್ಟಿದ್ದಾರೆ ಹೇಳಿ. ನಾಲ್ಕುವರೆ ವರ್ಷದಲ್ಲಿ ಒಂದು ಮನೆ ಕೊಡಲು ಇವರಿಗೆ ಆಗಿಲ್ಲ. ನಾವು 950 ಮನೆಗಳಿಗೆ ಹಕ್ಕುಪತ್ರ ಕೊಟ್ಟಿದ್ದೆವು. ಇವರು ಬಂದು ಒಂದು ಮನೆಯನ್ನೂ ಕೊಡಲು ಆಗಿಲ್ಲ. ಇದು ಶಾಸಕರ ದೊಡ್ಡ ವೈಫಲ್ಯ ಅಲ್ಲವೇ ಎಂದು ಐವಾನ್ ಡಿಸೋಜ ಪ್ರಶ್ನೆ ಮಾಡಿದರು.
KuIDFC is also taking loans to close potholes in the Mcc limits. What is the financial condition of the corporation? Do they work only for putting up flexes and boards? Corporators are dummy, only MLAs are active. Vedavyas Kamath, who has been an MLA for four-and-a-half years, has brought so much money from the state government? Congress leader and former MLC Ivan D'Souza demanded that a white paper be issued on what works have been done.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm