ಬ್ರೇಕಿಂಗ್ ನ್ಯೂಸ್
21-01-23 07:15 pm Mangalore Correspondent ಕರಾವಳಿ
ಮಂಗಳೂರು, ಜ.21: ಇತ್ತೀಚೆಗೆ ಉಪ್ಪಿನಂಗಡಿ ಮೂಲದ ವ್ಯಕ್ತಿಯನ್ನು ಅಪಹರಿಸಿ ಮಂಗಳೂರು ಬಳಿಯ ಉಳಾಯಿಬೆಟ್ಟಿನ ಮಲ್ಲೂರು ಎಂಬಲ್ಲಿ ಕೂಡಿಹಾಕಿ ಹಲ್ಲೆ ನಡೆಸಲಾಗಿತ್ತು. ಕೃತ್ಯದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಅದರ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಜಾಲ ಇರುವುದು ಪತ್ತೆಯಾಗಿದೆ. ಅಪಹರಣ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕರ್ವೇಲ್ ಸಿದ್ದಿಕ್(39), ಕಲಂದರ್ ಶಾಫಿ(22), ಮಹಮ್ಮದ್ ಇರ್ಶಾದ್(28), ಇರ್ಫಾನ್ (38) ಬಂಧಿತರು.
ಕೊಯ್ಲ ನಿವಾಸಿ ಶಾರೂಕ್ ಮತ್ತು ಆತನ ಸೋದರ ಸಂಬಂಧಿ ನಿಜಾಮುದ್ದೀನ್ ಎಂಬವರನ್ನು ಅಪಹರಿಸಿ ಹಲ್ಲೆ ನಡೆಸಿದ್ದಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಎರಡು ದಿನಗಳ ಹಿಂದೆ ದೂರು ನೀಡಲಾಗಿತ್ತು. ಜನವರಿ 19ರಂದು ಘಟನೆ ನಡೆದಿದ್ದು, ಸೋದರರಿಗೆ ಪರಿಚಯದ ಜೆಸಿಬಿ ಸಿದ್ದಿಕ್ ಎಂಬಾತ ಉಪ್ಪಿನಂಗಡಿಗೆ ಬರಹೇಳಿ ಅಲ್ಲಿಂದ ಆಲ್ಟೋ ಕಾರಿನಲ್ಲಿ ಕರೆದೊಯ್ದಿದ್ದ. ಆನಂತರ, ಬಂಟ್ವಾಳದಲ್ಲಿ ಇನ್ನಿಬ್ಬರು ಸೇರಿಕೊಂಡು ಮಲ್ಲೂರಿಗೆ ಕರೆದೊಯ್ದು ಅಲ್ಲಿನ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು.
ಈ ವೇಳೆ, ಅವರಲ್ಲಿದ್ದ 22 ಸಾವಿರ ರೂಪಾಯಿ ಹಣ ಮತ್ತು ಮೊಬೈಲನ್ನು ದೋಚಿದ್ದರು. ಅಲ್ಲದೆ, ನಿಜಾಮುದ್ದೀನನ್ನು ಬಿಟ್ಟುಕೊಡಲು ನಾಲ್ಕು ಲಕ್ಷ ರೂಪಾಯಿ ನೀಡುವಂತೆ ಡಿಮಾಂಡ್ ಇಟ್ಟಿದ್ದಾಗಿ ಶಾರೂಕ್ ದೂರಿನಲ್ಲಿ ತಿಳಿಸಿದ್ದ. ಪೊಲೀಸರ ತನಿಖೆಯಲ್ಲಿ ಇದರ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಜಾಲ ಇರುವುದು ಬೆಳಕಿಗೆ ಬಂದಿದೆ. ನಿಜಾಮುದ್ದೀನ್ ಸೋದರ ಶಫೀಕ್ ಎನ್ನುವಾತ ದುಬೈನಲ್ಲಿದ್ದು, ಆತ ಗೋಲ್ಡ್ ಸ್ಮಗ್ಲಿಂಗ್ ಜಾಲದ ಚಿನ್ನದ ಬಿಸ್ಕತ್ತುಗಳನ್ನು ಮುಂಬೈಗೆ ತಲುಪಿಸಿದ್ದ. ಆದರೆ, ಆ ಚಿನ್ನ ತಲುಪಬೇಕಾದ ವ್ಯಕ್ತಿಗಳಿಗೆ ತಲುಪಿರಲಿಲ್ಲ ಎನ್ನಲಾಗಿದ್ದು, ಇದಕ್ಕಾಗಿ ನಟೋರಿಯಸ್ ರೌಡಿ ಫೈಸಲ್ ನಗರದ ತಲ್ಲತ್ ತನ್ನ ಸಹಚರರಿಗೆ ಹೇಳಿ ಶಫೀಕ್ ಸೋದರರನ್ನು ಅಹರಿಸಿದ್ದಾನೆ.
ಪೊಲೀಸರ ಪ್ರಕಾರ, 40 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮೂಲಕ ತರಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಈ ವಿಚಾರವನ್ನು ನಿಜಾಮುದ್ದೀನ್ ಒಪ್ಪಿಲ್ಲ. ತಮಗೇನೂ ಗೋಲ್ಡ್ ಸ್ಮಗ್ಲಿಂಗ್ ವಿಚಾರ ಗೊತ್ತಿಲ್ಲ. ತನ್ನ ಸೋದರ ಚಿನ್ನ ತಂದಿರುವ ಬಗ್ಗೆಯೂ ಗೊತ್ತಿಲ್ಲ. ನಮ್ಮನ್ನು ತಂಡವೊಂದು ಅಪಹರಿಸಿ, ನಾಲ್ಕು ಲಕ್ಷ ರೂಪಾಯಿ ನೀಡುವಂತೆ ಒತ್ತಾಯ ಮಾಡಿತ್ತು ಎಂದು ತಿಳಿಸಿದ್ದಾರೆ. ಇಬ್ಬರು ಯುವಕರನ್ನು ಅಪಹರಿಸಿ ಮಲ್ಲೂರಿನಲ್ಲಿ ಕೂಡಿಹಾಕಿದ್ದ ವೇಳೆ ಮಂಗಳೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿತ್ತು. ಪೊಲೀಸರು ಬೀಟ್ ಕರ್ತವ್ಯದಲ್ಲಿದ್ದಾಗ ಇವರ ಮೇಲೆ ಕಾರು ಹಾಯಿಸಿ, ಕಲ್ಲೆಸೆದು ಹಲ್ಲೆಗೆ ಯತ್ನಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರದಲ್ಲಿ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದು, ಸೂತ್ರಧಾರ ಫೈಸಲ್ ಪತ್ತೆಗೆ ಬಲೆ ಬೀಸಲಾಗಿದೆ.
Puttur kidnap of cousin case, Youth rescued, five of Talat gang arrested, gold smuggling traced. A youth was rescued and five arrested in the case of abduction. Two cousins were kidnapped for ransom earlier. One was released while the other was held as a hostage.Sharukh is the youth who was rescued by the police. The arrested are identified as Aboobakar Siddique (39) from Uppinangady, Kalandhar Shafi Gadiyara (22) from Bantwal, Irfan (38) from Maripalla, Mohammed Riyaz (33) from Pandeshwar and Mohammed Irshad (28) from Beltangady.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm