ಬ್ರೇಕಿಂಗ್ ನ್ಯೂಸ್
21-01-23 07:59 pm Mangalore Correspondent ಕರಾವಳಿ
ಮಂಗಳೂರು, ಜ.21 : ನಗರದ ಬಂಗ್ರ ಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ನೇತೃತ್ವದ 6ನೇ ವರ್ಷದ ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳ ಈ ಬಾರಿ ಜ.22 ಮತ್ತು 23ರಂದು ನಡೆಯಲಿದೆ. ಕಂಬಳದಲ್ಲಿ ಸುಮಾರು 150 ಜತೆ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಆಧುನಿಕ ರೀತಿಯಲ್ಲಿ ಕಂಬಳ ನಡೆಯುವುದಾದರೂ ಈ ಬಾರಿ ಸಂಪ್ರದಾಯಕ್ಕೆ ಒತ್ತು ಕೊಟ್ಟು ಕಂಬಳ ಸ್ಪರ್ಧೆ ಆರಂಭಕ್ಕೂ ಮುನ್ನ ಹಿರಿಯ ಕೋಣಗಳನ್ನು ಕರೆಗೆ ಇಳಿಸಲಾಗುವುದು. 150ಕ್ಕೂ ಅಧಿಕ ಬಹುಮಾನ ಪಡೆದಿರುವ ಚೆನ್ನ ಹಾಗೂ ಬೊಳ್ಳೆ ಈ ಕಂಬಳದ ವಿಶೇಷ ಆಕರ್ಷಣೆಯಾಗಲಿದ್ದಾರೆ. ಅವನ್ನು ಕಂಬಳ ನಡೆಯುವ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲಿ ಪ್ರದರ್ಶನ ಇರಿಸಲಾಗುವುದು. ನೇಗಿಲು ಹಿರಿಯ ಹಾಗೂ ಕಿರಿಯ, ಹಗ್ಗ ಹಿರಿಯ ಹಾಗೂ ಕಿರಿಯ, ಕನಹಲಕೆ, ಅಡ್ಡಹಲಗೆ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ನಗರ ಭಾಗದ ಕಂಬಳ ಪ್ರಿಯರಿಗೆ ರಸದೌತಣ ನೀಡಲಿದೆ.
ಜ.22ರಂದು ಬೆಳಗ್ಗೆ 8.30ಕ್ಕೆ ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಗೌರವ ಅಧ್ಯಕ್ಷತೆಯಲ್ಲಿ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್ ಅವರು ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಕದ್ರಿ ಯೋಗೀಶ್ವರ ಮಠದ ನಿರ್ಮಲನಾಥ ಜಿ ಮಹಾರಾಜ್, ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 6 ಗಂಟೆಗೆ ಕಂಬಳ ಸಮಿತಿ ಗೌರವಾಧ್ಯಕ್ಷ ಹಾಗೂ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದಾರೆ. ಚಲನಚಿತ್ರ ನಟ ಅಭಿಷೇಕ್ ಅಂಬರೀಶ್, ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ, ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ವರ್ಣಚಿತ್ರ, ಛಾಯಾಚಿತ್ರ ಸ್ಪರ್ಧೆ
ಕಂಬಳದ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ‘ಕಲಂ ಕರೂಟ’ ಎಂಬ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರೀಲ್ಸ್ ಹಾಗೂ ಫೋಟೋಗ್ರಫಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ನೇತೃತ್ವ ವಹಿಸಿರುವ ಅಭಿಷೇಕ್ ತೀರ್ಥಹಳ್ಳಿ ತಿಳಿಸಿದರು. ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಂಬಳದ ಚಿತ್ರ ತೆಗೆದು ಇನ್‌ಸ್ಟ್ರಾಗ್ರಾಂನಲ್ಲಿ ಮಂಗಳೂರು ಕಂಬಳ ಸಮಿತಿಗೆ ಟ್ಯಾಗ್ ಮಾಡಬೇಕು. ಅಥವಾ 200 ಎಂಬಿಗಿಂತ ಒಳಗಿನ ಗಾತ್ರದ ಚಿತ್ರವನ್ನು ಮೇಲ್ ಮಾಡಬೇಕು. ಅದನ್ನು ತೀರ್ಪುಗಾರರು ಗಮನಿಸಿ ವಿಜೇತರನ್ನು ಆಯ್ಕೆ ಮಾಡಿ ಭಾನುವಾರ ಬೆಳಗ್ಗೆ ಬಹುಮಾನ ವಿತರಿಸಲಾಗುವುದು ಎಂದು ಸ್ಪರ್ಧೆಯ ನೇತೃತ್ವ ವಹಿಸಿರುವ ಈಶ್ವರ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರರಾದ ವಿಜಯಕುಮಾರ್ ಕಂಗಿನಮನೆ, ಪಿಆರ್ ಶೆಟ್ಟಿ ಕೂಳೂರು ಪೊಯೈಲ್, ಸುಧಕರ್ ಶೆಟ್ಟಿ ಮುಗೆರೋಡಿ, ಮಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷ ಸಂಜಯ್, ಈಶ್ವರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.
Mangalore The sixt edition of Rama-Lakshmana Jodukere Kambala will be held on Jan 22nd at the Goldfinch City, Bangra Kulur in the City.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm