ಬ್ರೇಕಿಂಗ್ ನ್ಯೂಸ್
24-01-23 08:26 pm Mangalore Correspondent ಕರಾವಳಿ
ಮಂಗಳೂರು, ಜ.24 : ಕೊಂಕಣಿ ರಂಗಭೂಮಿಗೆ ನೀಡಿರುವ ಆಜೀವ ಕೊಡುಗೆ ಪರಿಗಣಿಸಿ 2022ನೇ ಸಾಲಿನ ಡಾಕ್ಟರ್ ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ಪ್ರಕಟಿಸಲಾಗಿದೆ. ಗೋವಾದ ಹೆಸರಾಂತ ರಂಗಕರ್ಮಿ ಅಜಿತ್ ಗಣಪತಿ ಶೇಣ್ವ ಹಾಗೂ ಅನೇಕ ಕೊಂಕಣಿ ಸಾಹಿತ್ಯ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿರುವ ಕೊಲ್ಕತ್ತದ ವಿದ್ಯಾ ಪೈ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಈ ವರ್ಷದಿಂದ ಎರಡು ಹೊಸ ಪ್ರಶಸ್ತಿಗಳನ್ನು ದಾನಿ ಡಾಕ್ಟರ್ ಬಿ ದಯಾನಂದ ಪೈ ಹೆಸರಿನಲ್ಲಿ ಸ್ಥಾಪಿಸಿದೆ. ಸಾರ್ವಜನಿಕರಿಂದ ಆನ್ಲೈನ್ ಮೂಲಕ ಅಹ್ವಾನಿಸಲಾದ ನಾಮನಿರ್ದೇಶನಗಳ ಆಧಾರದಲ್ಲಿ ತೀರ್ಪುಗಾರರ ಸಮಿತಿ ಸದಸ್ಯರ ಮೌಲ್ಯಮಾಪನದ ಬಳಿಕ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಲಾಗಿದೆ.
1 ಲಕ್ಷ ರೂ. ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದ್ದು ಫೆ. 9ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ದಾನಿ ಡಾಕ್ಟರ್ ಪಿ ದಯಾನಂದ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುವುದು ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ತಿಳಿಸಿದ್ದಾರೆ.
ಕೊಂಕಣಿ ರಂಗಭೂಮಿಗೆ 54 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಅಜಿತ್ ಗೋವಾದಲ್ಲಿ ವಾಸವಾಗಿದ್ದಾರೆ. 72ರ ಹರೆಯದಲ್ಲೂ ನಟನೆ, ನಿರ್ದೇಶನ ಮತ್ತು ರಂಗ ವಿನ್ಯಾಸದ ಕೆಲಸಗಳಲ್ಲಿ ಸಕ್ರಿಯ ತೊಡಗಿಸಿಕೊಂಡಿದ್ದಾರೆ. ನಟನೆ, 35 ನಾಟಕ ನಿರ್ದೇಶನ ಹಾಗೂ ರಂಗ ವಿನ್ಯಾಸಕ್ಕಾಗಿ ವಿಶೇಷ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಕೊಲ್ಕತದಲ್ಲಿ ನೆಲೆಸಿರುವ ವಿದ್ಯಾ ಪೈ 68 ಕೊಂಕಣಿ ಸಣ್ಣ ಕಥೆ ಹಾಗೂ ಏಳು ಕೊಂಕಣಿ ಕಾದಂಬರಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದು, ವಿಶ್ವಾದ್ಯಂತ ಪ್ರತಿಷ್ಠಿತ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರ ಅನುವಾದಗಳ ಮೇಲೆ ಸಂಶೋಧನಾ ಪ್ರಬಂಧವೂ ಮಂಡನೆಯಾಗಿದೆ.
Ajit Ganapat Shenvi Kerkar and Vidya Pai have been chosen for the newly instituted awards by the World Konkani Centre this year in the name of its chief Patron Dr P Dayananda Pai Vishwa Konkani Puraskar 2022.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm