ಬ್ರೇಕಿಂಗ್ ನ್ಯೂಸ್
25-01-23 08:26 pm Mangalore Correspondent ಕರಾವಳಿ
ಮಂಗಳೂರು, ಜ.25: ಮುಂದಿನ ಬಾರಿ ಗೆಲ್ಲುವುದಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹಾಗಾಗಿ ಮತದಾರರಿಗೆ ಆರು ಸಾವಿರ ಲಂಚ ಕೊಡಲು ಮುಂದಾಗಿದ್ದಾರೆ. ಬಿಜೆಪಿ ಸರಕಾರದಲ್ಲಿಯೇ ರಮೇಶ್ ಜಾರಕಿಹೊಳಿಯನ್ನು ಹೊರಕ್ಕಿಟ್ಟಿದ್ದಾರೆ. ಪಕ್ಷ, ಸರಕಾರದಲ್ಲಿ ಹೊರಗೆ ಇರುವ ಜಾರಕಿಹೊಳಿ ಮತದಾರರಿಗೆ ಲಂಚದ ಹೇಳಿಕೆ ಕೊಟ್ಟು ಜನಸಾಮಾನ್ಯರನ್ನು ಅವಮಾನಿಸಿದ್ದಾರೆ. ಇಂಥ ಹೇಳಿಕೆಯ ಹಿಂದೆ ಬಿಜೆಪಿಯ ಅಜೆಂಡಾ ಇದೆ, ಈ ಬಗ್ಗೆ ಕಾಂಗ್ರೆಸ್ ಹೈಗ್ರೌಂಡ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಜೆಪಿ ನಡ್ಡಾ, ನಳಿನ್ ಕಟೀಲ್, ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಪಿಎಸ್ಐ ಹಗರಣವೇ ಭ್ರಷ್ಟಾಚಾರಕ್ಕೆ ಸಾಕ್ಷಿ
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು. ಬಿಜೆಪಿ ಸರಕಾರದ ಭ್ರಷ್ಟಾಚಾರದಿಂದ ಇಡೀ ರಾಜ್ಯ ಅರಾಜಕತೆಗೆ ಹೋಗಿದೆ. ಪಿಎಸ್ಐ ಪರೀಕ್ಷೆಯ ಹಗರಣ ಇವರ ಭ್ರಷ್ಟಾಚಾರಕ್ಕೆ ಸಾಕ್ಷಿ. ಒಬ್ಬ ಎಡಿಜಿಪಿ ದರ್ಜೆಯ ಅಧಿಕಾರಿ ಸೇರಿ ನೂರಕ್ಕೂ ಹೆಚ್ಚು ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಆದರೆ ಡೀಲ್ ಮಾಡಿರುವ ಒಬ್ಬ ಬಿಜೆಪಿ ಶಾಸಕನನ್ನೂ ಬಂಧಿಸಿಲ್ಲ ಯಾಕೆ. ಪಿಎಸ್ಐ ಅಭ್ಯರ್ಥಿಯನ್ನು ಪಾಸ್ ಮಾಡಿಸಲು ಶಾಸಕರು ಡೀಲ್ ಮಾಡಿಲ್ಲವೇ ಎಂದು ಪ್ರಶ್ನೆ ಮಾಡಿದರು. ಎಂಟಿಬಿ ನಾಗರಾಜ್, ಎಸ್ಐ ನಂದೀಶ್ ಸಾವು ಪ್ರಕರಣದಿಂದ ಹಿಡಿದು ಯತ್ನಾಳ್ ಸಿಎಂ ಹುದ್ದೆಗೆ 2500 ಕೋಟಿ ಕೊಡಬೇಕೆಂಬ ಹೇಳಿಕೆ ಇವರ ಭ್ರಷ್ಟಾಚಾರವನ್ನು ತೋರಿಸಿದೆ. ಪಿಎಸ್ಐ ಪ್ರಕರಣದಲ್ಲಿ ಆರೋಪಿ ಆರ್.ಡಿ ಪಾಟೀಲ ಫೇಸ್ಬುಕ್ ಲೈವಲ್ಲಿ ಬಂದು ತನಿಖಾಧಿಕಾರಿಗೆ ಲಂಚ ಕೊಟ್ಟಿದ್ದಾಗಿ ತಿಳಿಸಿದ್ದಾರೆ. 2.24 ಕೋಟಿ ಲಂಚ ಕೇಳಿದ್ದಾಗಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಇದೇ ಆರ್.ಡಿ ಪಾಟೀಲ ಮುಂದಿನ ಬಾರಿ ಬಿಜೆಪಿಯಲ್ಲಿ ಚುನಾವಣೆ ನಿಂತರೂ ಅಚ್ಚರಿಯಿಲ್ಲ ಎಂದರು.
ಕಲರ್ ನೋಡುವ ಗೃಹ ಸಚಿವ, ದುರ್ಬಲ ಮುಖ್ಯಮಂತ್ರಿ
ಬಿಜೆಪಿ ಕರಾವಳಿಯನ್ನು ಕೋಮುವಾದದ ಫ್ಯಾಕ್ಟರಿ ಮಾಡಿಕೊಂಡಿದೆ. ಕಲರ್ ನೋಡಿ ಆಡಳಿತ ಮಾಡುವ ಗೃಹ ಸಚಿವರಿದ್ದರೆ, ರಾಜ್ಯದಲ್ಲಿ ಸಾಮರಸ್ಯ ನೆಲೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಸುರ್ಜೇವಾಲ, ಬಸವರಾಜ ಬೊಮ್ಮಾಯಿ ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದ ಅತೀ ದುರ್ಬಲ ಮುಖ್ಯಮಂತ್ರಿ. ರಾಜ್ಯದಲ್ಲಿ ಕೋಮು ವಿಷ ಬೀಜ ಬಿತ್ತಿ ಜನರನ್ನು ವಿಭಜಿಸುವುದು, ಸಾಮರಸ್ಯದ ನಾಡನ್ನು ಒಡೆಯುವುದು ಮಾಡುತ್ತಿದ್ದಾರೆ. ಸಾಮರಸ್ಯ ಹಾಳುಗೆಡವಿದರೆ ಶಾಂತಿ, ಅಭಿವೃದ್ಧಿ ನೆಲೆಸಲು ಅಸಾಧ್ಯ. ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕಾಗಿ ಬಿಜೆಪಿ ಕರಾವಳಿಯನ್ನು ಕೋಮುವಾದದ ಫ್ಯಾಕ್ಟರಿ ಮಾಡಿದೆ, ಆದರೆ ನಾವು ಸಾಮರಸ್ಯ ಬಿತ್ತಿ ಇದೇ ನೆಲದಲ್ಲಿ ಕೋಮು ಕಳೆ ಕೀಳುತ್ತೇವೆ ಎಂದರು.
ಐಟಿ ಹಬ್ ಅಲ್ಲ, ಕೋಮು ವಿಷ ತುಂಬಿದ್ದಾರೆ
ಕಳೆದ ಚುನಾವಣೆಯಲ್ಲಿ ಬಿಜೆಪಿ ಕೋಮು ದ್ವೇಷದ ರಾಜಕಾರಣದಲ್ಲಿ ಜನರನ್ನು ವಿಭಜಿಸಿತ್ತು. ಪರೇಶ್ ಮೇಸ್ತ ಪ್ರಕರಣ ಮುಂದಿಟ್ಟು ಧ್ರುವೀಕರಣ ರಾಜಕೀಯ ಮಾಡಿದ್ದರು. ಆದರೆ ಸಿಬಿಐ ತನಿಖೆ ನಡೆಸಿ, ಸತ್ಯ ವಿಚಾರವನ್ನು ಸಮಾಜಕ್ಕೆ ತೋರಿಸಿದೆ. ಆದರೆ ಬೊಮ್ಮಾಯಿ ಆಗಲೀ, ಮೋದಿ, ಕಟೀಲ್ ಆಗಲೀ ಈ ಬಗ್ಗೆ ಮಾತಾಡಿಲ್ಲ ಯಾಕೆ. ಕರಾವಳಿ ಮಲೆನಾಡಿನಲ್ಲಿ 26 ಬಿಜೆಪಿ ಶಾಸಕರಿದ್ದರೂ, ಜನರು ನಿರಾಶೆಗೊಂಡಿದ್ದಾರೆ. ಶಿರಾಡಿ ಘಾಟ್ ಹೆದ್ದಾರಿಯಿಂದ ಹಿಡಿದು ಯಾವುದೇ ಅಭಿವೃದ್ಧಿ ಆಗಿಲ್ಲ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇರುವ ಮಂಗಳೂರಲ್ಲಿ ಕೋಮು ವಿಷವನ್ನಷ್ಟೇ ತುಂಬಿದ್ದಾರೆ. ಮಂಗಳೂರು ಬೆಂಗಳೂರಿಗಿಂತ ಹೆಚ್ಚು ಬೆಳೆಯಬಹುದು. ಪಾಣಿಪತ್ ಗಾರ್ಮೆಂಟ್ ಹಬ್ ಆದ ರೀತಿ ಮಂಗಳೂರು ಐಟಿ, ಗಾರ್ಮೆಂಟ್ ಹಬ್ ಆಗಬಹುದಿತ್ತು. ನಾವು ಅಧಿಕಾರಕ್ಕೆ ಬಂದರೆ, ಕರಾವಳಿ ಅಭಿವೃದ್ಧಿಗೆ 2500 ಕೋಟಿ ಕೊಟ್ಟು ಸಮಗ್ರ ಬೆಳವಣಿಗೆ ಮಾಡುತ್ತೇವೆ ಎಂದು ಹೇಳಿದರು.
ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಮಂಡಳಿ
ಇದಲ್ಲದೆ, ಮೊದಲ ಬಾರಿಗೆ ಅತೀ ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿಯನ್ನು ರಚಿಸುತ್ತೇವೆ. ಕುಲಾಲ, ಆಚಾರ್ಯ, ಗಾಣಿಗ, ಶೆಟ್ಟಿಗಾರ್, ಕುಡುಬಿ, ದೇವಾಡಿಗ, ಕುಡುಬಿ, ಭಂಡಾರಿ, ಕೊಟ್ಟಾರಿ ಹೀಗೆ ಹಿಂದುಳಿದ ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಡಿಸಿ ಮನ್ನಾ ಭೂಮಿಯನ್ನು ಪುನರ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಜಾಧ್ವನಿ ರೀತಿಯಲ್ಲೇ ಫೆ.5ರಿಂದ ಮಾರ್ಚ್ 10ರ ವರೆಗೆ ಕರಾವಳಿಯ ಐದು ಜಿಲ್ಲೆಗಳ ಪ್ರತೀ 26 ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿ ದಿನವೂ ಕಾರ್ಯಕ್ರಮ ನಡೆಸಲಿದ್ದೇವೆ. ಇದರ ನಡುವೆ, ಫೆ.9ರಿಂದ 16ರ ವರೆಗೆ ಅಧಿವೇಶನ ಇರುವುದರಿಂದ ವಿರಾಮ ಇರಲಿದೆ. ಪ್ರತೀ ದಿನವೂ ರಾಜ್ಯದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
Mangalore Bjp offering bribes over 6 thousand crores to appease voters, Randeep Surjewala demands arrest of and Nalin. Mangalore Bjp offering bribes over 6 thousand crores to appease voters, Randeep Surjewala demands arrest of CM and Nalin. The Congress in Karnataka on Wednesday lodged a complaint with the police against BJP national President J P Nadda, Chief Minister Basavaraj Bommai, and MLA Ramesh Jarkiholi levelling allegations of offering bribes to appease voters in the ensuing assembly polls in the state.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm