ಬ್ರೇಕಿಂಗ್ ನ್ಯೂಸ್
04-02-23 06:52 pm Mangalore Correspondent ಕರಾವಳಿ
ಉಳ್ಳಾಲ, ಫೆ.4: ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣ ಮಾತ್ರವಲ್ಲದೆ ಜೀಟಿಗೆ ಹಿಡಿದು ಪೋರ್ಚುಗೀಸರನ್ನ ಸೋಲಿಸಿದ ವೀರರಾಣಿಯ ಚರಿತ್ರೆ ದೇಶಕ್ಕೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣವಾಗಬೇಕು. ಮಂಗಳೂರಿನ ಏರ್ಪೋರ್ಟಿಗೂ ರಾಣಿ ಅಬ್ಬಕ್ಕಳ ಹೆಸರಿಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನೆರಳಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ಶನಿವಾರ ನಡೆದ "ವೀರ ರಾಣಿ ಅಬ್ಬಕ್ಕ ಉತ್ಸವ"ದಲ್ಲಿ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಣಿ ಅಬ್ಬಕ್ಕನಂತಹ ವೀರ ವನಿತೆಯರು ಬರೀ ಚರಿತ್ರೆ ಅಲ್ಲ ಪ್ರಸ್ತುತ. ಆಕೆಯ ಹೆಸರು ದೇಶದಾದ್ಯಂತ ವ್ಯಾಪಿಸಲು ರಾಜ್ಯ ಮಟ್ಟದ ಅಬ್ಬಕ್ಕ ಉತ್ಸವ ನಡೆಯುವಂತಾಗಬೇಕು. ತೊಕ್ಕೊಟ್ಟಿನಲ್ಲಿ 5 ಕೋಟಿ ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಿಸಲು ಡಿಪಿಆರ್ ಆಗಿದೆ. ಭವನದೊಳಗಡೆ ಅಬ್ಬಕ್ಕಳಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸಿನೆಮಾಗಳನ್ನ ನಮ್ಮ ಭವಿಷ್ಯದ ಪೀಳಿಗೆಗೆ ತೋರಿಸಲು ಸುಸಜ್ಜಿತ ಥಿಯೇಟರ್ ಜೊತೆ ಅಬ್ಬಕ್ಕನ ಇತಿಹಾಸ ಹೇಳುವ ಥೀಮ್ ಪಾರ್ಕ್ ಕೂಡ ನಿರ್ಮಾಣವಾಗಬೇಕೆಂದು ಹೇಳಿದರು.
ಅಬ್ಬಕ್ಕ ಚರಿತ್ರೆ ಪಠ್ಯದಲ್ಲಿ ಬರಬೇಕು
ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ ರಾಣಿ ಅಬ್ಬಕ್ಕ ದೇಶದ ಪ್ರಥಮ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಆಕೆಯ ಚರಿತ್ರೆಯನ್ನ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತಾಗಬೇಕು. ಅಬ್ಬಕ್ಕಳ ಹೆಸರಲ್ಲಿ ಇನ್ನೂ ಒಂದು ಭವನ ಕಟ್ಟಲು ಸಾಧ್ಯ ಆಗಿಲ್ಲ ಅನ್ನೋದೆ ಬೇಸರದ ವಿಚಾರ. ರಾಜ್ಯದ ಎಲ್ಲಾ ಕಡೆಗಳಿಗೆ ಭರಪೂರ ಅನುದಾನ ಸಿಗುತ್ತೆ. ಅಬ್ಬಕ್ಕ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಇನ್ನೂ ಯಾಕೆ ಬಿಡುಗಡೆ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದರು.
ಸಾಹಿತಿ ಡಾ.ಪಾರ್ವತಿ ಜಿ. ಐತಾಳ್ ಮತ್ತು ತುಳು ಪಾಡ್ದನ ಕ್ಷೇತ್ರದ ಪ್ರತಿಭೆ ಶ್ರೀಮತಿ ಭವಾನಿ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಉತ್ಸವ ಉದ್ಘಾಟಿಸಿದರು. ಕಾಂತಾರ ಚಲನಚಿತ್ರದ ಖ್ಯಾತಿಯ ನಟಿ ವಿದುಷಿ ಮಾನಸಿ ಸುಧೀರ್ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳನ್ನ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
Theme park in the name of Abbakka, Mangalore airport also to be named as Abbakka letter to Modi says Shobha Karandlaje.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm