ಬ್ರೇಕಿಂಗ್ ನ್ಯೂಸ್
09-02-23 10:46 pm Mangalore Correspondent ಕರಾವಳಿ
ಮಂಗಳೂರು, ಫೆ.9 : ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಆಗಮಿಸಿದ್ದು ಸಾರ್ವಜನಿಕರ ದೂರು, ಅಹವಾಲು ಆಲಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿರುವ ಬಗ್ಗೆ ಮಾಧ್ಯಮದಿಂದ ಗಮನ ಸೆಳೆದಾಗ, ಯಾವುದೇ ಆರೋಪಗಳಿದ್ದರೂ ನಿಖರ ಮತ್ತು ನಿರ್ದಿಷ್ಟ ದೂರುಗಳನ್ನು ನೀಡಬೇಕು. ಭ್ರಷ್ಟಾಚಾರ ಆರೋಪದ ಬಗ್ಗೆ ನಿಖರ ದಾಖಲೆ ನೀಡಿದರೆ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ. ಫೆ.10ರ ಸಭೆಗೆ ಬಂದು ಅಹವಾಲು ನೀಡಿದ್ರೆ ಕ್ರಮ ಕೈಗೊಳ್ತೇವೆ. ಕೇವಲ ಆರೋಪ ಮಾಡಿದ್ರೆ ಆ ಬಗ್ಗೆ ಕ್ರಮ ಕೈಗೊಳ್ಳಲು ಆಗಲ್ಲ. ನಿಖರ, ನಿರ್ದಿಷ್ಟ ಪ್ರಕರಣವನ್ನು ಸೂಚಿಸಿ ದಾಖಲೆ ತಂದುಕೊಡಲಿ ಎಂದಿದ್ದಾರೆ.
ಆರೋಪಗಳನ್ನು ಅನೇಕರು ಮಾಡಿದ್ದಾರೆ, ಅದು ಪ್ರಚಾರಕ್ಕೂ ಇರಬಹುದು. ಯಾರೋ ಸಾಮಾಜಿಕ ಜಾಲತಾಣದಲ್ಲಿ ಬರೀತಾರೆ ಅಂತ ಆ ಬಗ್ಗೆ ಕ್ರಮ ಕೈಗೊಳ್ಳಲು ಆಗಲ್ಲ. ನಿಖರ ನಿರ್ದಿಷ್ಟ ದೂರು ನೀಡಲಿ. ನಿರ್ದಿಷ್ಟ ದೂರು, ನಿಖರ ಮಾಹಿತಿ, ಭ್ರಷ್ಟಾಚಾರವನ್ನು ತೋರಿಸಿ ದೂರು ನೀಡಲಿ. ಯಾರೇ ಇದ್ದರೂ ಕ್ರಮ ತಗೊತೀವಿ ಎಂದು ಹೇಳಿದ್ದಾರೆ.
ಪೊಲೀಸ್ ಆಯುಕ್ತರು ಮತ್ತು ಉಳ್ಳಾಲ ಇನ್ಸ್‌ಪೆಕ್ಟರ್ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದ್ದಕ್ಕೆ, ಈ ಬಗ್ಗೆ ಲೋಕಾಯುಕ್ತ ತನಿಖೆ ಮಾಡ್ತಾ ಇದೆ. ಅವರು ಯಾವ ನಿರ್ದೇಶನ ನೀಡ್ತಾರೋ, ಆ ಪ್ರಕಾರ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕ ಅಹವಾಲು ಸ್ವೀಕರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸಾರ್ವಜನಿಕರು ದೂರುಗಳನ್ನು ನೀಡಿದ್ದಾರೆ. ಬಂಟ್ವಾಳ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಒಬ್ಬರು ದೂರು ನೀಡಿದ್ದಾರೆ. ಠಾಣೆಗೆ ದೂರು ನೀಡಿದ್ರೆ ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಬರಲು ತಡ ಮಾಡ್ತಾರೆ. ಪೊಲೀಸರು ವಾಹನ ಸಮಸ್ಯೆ ಇದೆ, ವಾಹನ ಸರಿಯಿಲ್ಲ ಎಂದು ಕಾರಣ ನೀಡ್ತಾರೆ ಎಂದು ದಲಿತ ದೌರ್ಜನ್ಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಆರೋಪ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಲೋಕ್ ಕುಮಾರ್, ಈ ಬಗ್ಗೆ ಪೊಲೀಸ್ ಇಲಾಖೆಗೆ ಮೊಹಲ್ಲಾ ಕಮಿಟಿ ಸಭೆ ನಡೆಸಲು ಸೂಚಿಸಲಾಗಿದೆ. ಆದ್ರೆ ಆ ಕೆಲಸ ಸಮರ್ಪಕ ಜಾರಿ ಆಗ್ತಾ ಇಲ್ಲ. ಇದರಲ್ಲಿ ಸಂಪೂರ್ಣ ಪರಿಹಾರ ಆಗದಿದ್ದರೂ ಅಲ್ಪ ಪ್ರಮಾಣದ ಕ್ರಮಕ್ಕೆ ಸಹಕಾರಿ. ಈ ಬಗ್ಗೆ ಮತ್ತೆ ಸೂಚನೆ ನೀಡುತ್ತೇನೆ. ಹೆಚ್ಚಿನ ರಾತ್ರಿ ಪಾಳಿ ಕರ್ತವ್ಯ ನಡೆಸಲು ಸೂಚಿಸುತ್ತೇನೆ ಎಂದರು.
Mangalore Police corruption, Action only if there is proof or document ADGP Alok Kumar in Mangalore. Mangalore Police Commissioner Shahi Kumar, Ullal Police Inspector and Inspectors were alleged of big time corruption to which ADGP Alok Kumar has stated that action can be taken provided there is clear evidence or document speaking at the SP office in Mangaluru.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm