ಬ್ರೇಕಿಂಗ್ ನ್ಯೂಸ್
10-02-23 04:58 pm Mangalore Correspondent ಕರಾವಳಿ
ಮಂಗಳೂರು, ಫೆ.10: ಪೊಲೀಸರ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಲು ಬಂದಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಎದುರಲ್ಲೇ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ತರಾಟೆಗೆತ್ತಿಕೊಂಡಿದ್ದಾರೆ.
ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ಹಿಡಿದು ಹೋದರೂ ಹಣ ಕೇಳುತ್ತಾರೆ. ದೂರು ಪಡೆಯೋದಕ್ಕೂ ಹಣ ಕೇಳುವ ಸ್ಥಿತಿಯಿದೆ. ಮಂಗಳೂರಿನಲ್ಲಿ ಒಂದು ಮಹಿಳಾ ಠಾಣೆ ಇರುವುದು. ಇಲ್ಲಿನ ದುರವಸ್ಥೆಯೇ ಹೀಗಾದರೆ ಗತಿಯೇನು. ಸಂತ್ರಸ್ತ ಯುವತಿಯೊಬ್ಬಳು ನನ್ನಲ್ಲಿ ಅಳಲು ಹೇಳಿಕೊಂಡಿದ್ದಾರೆ. ಆ ಕುರಿತ ದಾಖಲೆಯೂ ನನ್ನಲ್ಲಿದೆ ಎಂದು ಮಾಧ್ಯಮದ ಮುಂದೆಯೇ ಎಡಿಜಿಪಿ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಇದಲ್ಲದೆ, ಯಾವುದೇ ಪ್ರಕರಣದಲ್ಲಿ ನಾವು ದನಿ ಎತ್ತಿ ಪೊಲೀಸರನ್ನು ಪ್ರಶ್ನಿಸಿದರೆ ನಮ್ಮ ವಿರುದ್ಧವೇ ಕೇಸು ದಾಖಲಿಸುತ್ತಾರೆ. ನಾವು ಸಮಾಜದ ಪರವಾಗಿ ದನಿ ಎತ್ತಿದರೆ, ಇನ್ನೊಬ್ಬರ ಮೂಲಕ ಮಾನನಷ್ಟ ಕೇಸು ಹಾಕಿಸುತ್ತಾರೆ. ಕೆಎಂಎಫ್ ನಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಹಣ ಪಡೆದ ವ್ಯಕ್ತಿಯ ವಿರುದ್ಧ ಆರೋಪ ಇದ್ದರೂ, ಸಿಸಿಬಿಯವರು ಅದನ್ನು ಸರಿಯಾಗಿ ತನಿಖೆ ನಡೆಸಿಲ್ಲ. ಆ ಬಗ್ಗೆ ನಾವು ಸಂತ್ರಸ್ತರನ್ನು ಒಂದೆಡೆ ಸೇರಿಸಿದ್ದರೂ, ಮರುದಿನ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಪೊಲೀಸರ ವಿರುದ್ಧ ಹೋಗದಂತೆ ತಡೆಯುತ್ತಾರೆ. ಆರೋಪಿ ವಿರುದ್ಧ ಬಜ್ಪೆ, ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆ ಪ್ರಕರಣದಲ್ಲಿ ಸಂತ್ರಸ್ತರನ್ನೇ ಬೆದರಿಸಲಾಗಿತ್ತು. ಎಸಿಪಿ ಬಂಡಾರು ಎಂಬವರು ಈ ಹಿಂದೆ ನನ್ನನ್ನೂ ಬೆದರಿಸಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ಮುಂದೆ ಪ್ರಸನ್ನ ರವಿ ಅಳಲು ತೋಡಿಕೊಂಡಿದ್ದಾರೆ.
ಮಹಿಳಾ ಠಾಣೆಯಲ್ಲಿ ಹಣ ಕೇಳಿರುವ ವಿಚಾರದ ಬಗ್ಗೆ ನನಗೆ ಯಾವ ಪ್ರಕರಣ ಎಂದು ಮಾಹಿತಿ ಕೊಡಿ, ಕ್ರಮ ಕೈಗೊಳ್ಳುತ್ತೇನೆ ಎಂದು ಎಡಿಜಿಪಿ ಹೇಳಿದರು. ಯಾವುದೇ ಆರೋಪ ಮಾಡಿದರೆ ಸಾಲದು. ಅದಕ್ಕೆ ಸೂಕ್ತ ದಾಖಲೆ ಕೊಟ್ಟರೆ ಮಾತ್ರ ನಮ್ಮ ಸಿಬಂದಿ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಸಿಬಂದಿಯ ಪರವಾಗಿಯೇ ಎಡಿಜಪಿ ಮಾತನಾಡಿದರು.
Mangalore city police corruption, Activist Ravi prasanna slams about Woman police station to ADGP Alok Kumar during the grivences meeting. She alleged that anytime you go to the station they only demand money. She partially complained about Police Inspector Manjula. She also raised about how police have become corrupted and take bribes from all illegal centres in the city.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm