ಬ್ರೇಕಿಂಗ್ ನ್ಯೂಸ್
19-02-23 04:43 pm Mangalore Correspondent ಕರಾವಳಿ
ಬಂಟ್ವಾಳ, ಫೆ.19 : ಶೈಕ್ಷಣಿಕ ಕಾರ್ಯಾಗಾರ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಕರೆಸಿ ಇಸ್ಲಾಂ ಬಗ್ಗೆ ಬೋಧನೆ ಮಾಡಿದ್ದಾರೆಂದು ಆರೋಪಿಸಿ ಹಿಂದು ಸಂಘಟನೆ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಹಿಂದು ಮಕ್ಕಳನ್ನು ಹೊರಕ್ಕೆ ತೆರಳುವಂತೆ ಒತ್ತಾಯ ಪಡಿಸಿದ ಘಟನೆ ವಿಟ್ಲ ಬಳಿಯ ಅಡ್ಯನಡ್ಕ ಎಂಬಲ್ಲಿ ನಡೆದಿದೆ.
ನುಸ್ರತುಲ್ ಯಂಗ್ ಮೆನ್ಸ್ ಅಸೋಸಿಯೇಷನ್ ಸಂಸ್ಥೆ ವತಿಯಿಂದ ಕೇಪು ಗ್ರಾಮದ ಅಡ್ಯನಡ್ಕದ ರಾಜಕಮಲ್ ಎಂಬ ಖಾಸಗಿ ಸಭಾಂಗಣದಲ್ಲಿ ಶನಿವಾರ ಸಂಜೆ ಶೈಕ್ಷಣಿಕ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರಕ್ಕೆ ಸ್ಥಳೀಯ ಜನತಾ ವಿದ್ಯಾಸಂಸ್ಥೆಯ ಶಾಲಾ ವಿದ್ಯಾರ್ಥಿಗಳನ್ನು ಕರೆಸಿದ್ದು ಅಲ್ಲಿ ಪ್ರವಾದಿ, ಇಸ್ಲಾಂ ಬಗ್ಗೆ ಬೋಧನೆ ಮಾಡಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಕೋಮು ಪ್ರಚೋದನೆ ರೀತಿ ಮತ ಪ್ರಚಾರ ನಡೆಸುತ್ತಿದ್ದಾರೆಂದು ಹೇಳಿ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ನಿಲ್ಲಿಸಿದ್ದಾರೆ.
ಅಲ್ಲದೆ, ಶಿವರಾತ್ರಿಯ ದಿನ ಶಾಲೆಗೆ ರಜೆ ಇದ್ದರೂ ಸಂಜೆ ವೇಳೆಗೆ ಮುಸ್ಲಿಂ ಸಂಘಟನೆಯ ಕಾರ್ಯಾಗಾರಕ್ಕೆ ಕಳುಹಿಸಿದ್ದ ಶಿಕ್ಷಕರ ಬಗ್ಗೆ ಹಿಂಜಾವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮಕ್ಕೆ ಬಂದು ಕುಳಿತಿದ್ದ ಹಿಂದು ವಿದ್ಯಾರ್ಥಿಗಳನ್ನು ಸ್ಥಳದಿಂದ ಎಬ್ಬಿಸಿ ಹೊರಕ್ಕೆ ಕಳಿಸಿದ್ದಾರೆ. ವಿಟ್ಲ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಈ ರೀತಿಯ ಕಾರ್ಯಕ್ರಮಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅನಂತರ, ಕಾರ್ಯಾಗಾರ ಅರ್ಧಕ್ಕೆ ರದ್ದಾಗಿದೆ.
ಈ ಬಗ್ಗೆ ವಿಟ್ಲ ಠಾಣೆಗೆ ಮಾಧವ ಮೂಲ್ಯ ಎಂಬವರು ದೂರು ನೀಡಿದ್ದು, ಶೈಕ್ಷಣಿಕ ಕಾರ್ಯಾಗಾರ ನೆಪದಲ್ಲಿ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿ ಪ್ರಚೋದನಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಶಾಲಾ ಮುಖ್ಯೋಪಾಧ್ಯಾಯ ಟಿ.ಆರ್.ನಾಯಕ್, ರಫೀಕ್ ಮಾಸ್ಟರ್ ಆತೂರು ಹಾಗೂ ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ವಿರುದ್ಧ ದೂರು ದಾಖಲಿಸಿದ್ದಾರೆ.
Islam teaching in the name of Educational program at school in Vittal Dakshina Kannada, Hindu activists object and stop the program sending Hindu student's out of the school. A case has been registered at the Vittal police station.
15-02-25 12:52 pm
HK News Desk
Bangalore ACP Govardhan Gopal, Love story: ಎಸ...
15-02-25 12:26 pm
Solider assisted, Athani, Belagavi: ಅಥಣಿ ಪಟ್ಟ...
14-02-25 10:48 pm
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
15-02-25 12:32 pm
HK News Desk
ಉಚಿತ ಯೋಜನೆಗಳ ಕಾರಣದಿಂದಾಗಿ ಕಾರ್ಮಿಕರು ಕೆಲಸಕ್ಕೆ ಹ...
13-02-25 02:45 pm
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm