ಬ್ರೇಕಿಂಗ್ ನ್ಯೂಸ್
21-02-23 03:38 pm Mangalore Correspondent ಕರಾವಳಿ
ಉಳ್ಳಾಲ, ಫೆ.21 : ಉಳ್ಳಾಲ ನಗರಸಭೆಯ 2023- 24ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದ್ದು ಬಜೆಟನ್ನ ವಿರೋಧಿಸಿದ ಜೆಡಿಎಸ್ ಕೌನ್ಸಿಲರ್ ಗಳು ಕಿವಿಗೆ ಹೂವಿಟ್ಟು ಆಡಳಿತಾರೂಢ ಕಾಂಗ್ರೆಸ್ ನಾಯಕರನ್ನು ಅಣಕಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಅಸ್ತ್ರವನ್ನೇ ಇದೀಗ ಜೆಡಿಎಸ್ ಉಳ್ಳಾಲ ನಗರ ಸದಸ್ಯರು ಬಳಸಿ ಆಡಳಿತಾರೂಢ ಕಾಂಗ್ರೆಸನ್ನ ಅಣಕಿಸಿದ್ದಾರೆ.
ಮಂಗಳವಾರ ಉಳ್ಳಾಲ ನಗರಸಭೆ ಆಡಳಿತ ಸೌಧದಲ್ಲಿ ಬಜೆಟ್ ಮಂಡನೆ ವೇಳೆ ಜೆಡಿಎಸ್ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್, ಖಲೀಲ್, ಜಬ್ಬಾರ್, ಮುಶ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಬಿಜೆಪಿ ನಾಮನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ಜೆಡಿಎಸ್ ನವರು ಬಜೆಟ್ ಬಗ್ಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಹಿರಿಯ ಸದಸ್ಯ ದಿನಕರ್ ಉಳ್ಳಾಲ್ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿದ್ದು ನೀವಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳೆಂದು ಆಕ್ಷೇಪಿಸಿದ್ದಾರೆ. ಮತ್ತೆ ಸದನದಲ್ಲಿ ಆಡಳಿತ ವಿರೋಧ ಪಕ್ಷಗಳ ನಡುವೆ ಗದ್ದಲ ಎಬ್ಬಿದ್ದು ಸಭಾದ್ಯಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗದ್ದಲ, ಗಲಾಟೆ ಮಧ್ಯೆಯೇ ರಾಷ್ಟ್ರಗೀತೆ ಹಾಡುವುದರೊಂದಿಗೆ ಸಭೆಯನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಎಸ್ ಡಿಪಿಐ ಸದಸ್ಯ ಅಝ್ಗರ್ ಆಲಿ ನಗರಸಭೆ ಪ್ರಬಂಧಕರಲ್ಲಿ ಅಜೆಂಡಾದಲ್ಲಿ ಸಭೆ ಸಂಪೂರ್ಣಗೊಂಡಿಲ್ಲವೆಂದು ದಾಖಲಿಸಲು ಸೂಚಿಸಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನಗರ ಸದಸ್ಯರಾದ ಭಾರತಿ ಮತ್ತು ವೀಣಾ ಶಾಂತಿ ಡಿಸೋಜ ಪ್ರಬಂಧಕರಲ್ಲಿ ಅಝ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದ್ದು ಇದರಿಂದ ಕೆರಳಿದ ಅಝ್ಗರ್ ಕೈ ಸದಸ್ಯೆಯರ ವಿರುದ್ಧ ಗಲಾಟೆ ನಡೆಸಿದ್ದು ಮಾತಿನ ಚಕಮಕಿ, ತಳ್ಳಾಟ ನಡೆಸಿದ್ದಾರೆ.
Mangalore JDS leaders with flowers on ear during Ullal municipality Budget, slam Congress leaders by pushing and fighting.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm