ಬ್ರೇಕಿಂಗ್ ನ್ಯೂಸ್
23-02-23 01:04 pm Mangalore Correspondent ಕರಾವಳಿ
ಮಂಗಳೂರು, ಫೆ.23: ಪೊಲೀಸ್ ಅಧಿಕಾರಿಯೇ ತನ್ನನ್ನು ಸೆಕ್ಸ್ ಗೆ ಆಹ್ವಾನಿಸ್ತಾರೆಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ಅಚ್ಚರಿಗೆ ಕಾರಣವಾಗಿದ್ದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ. ಸೆಕ್ಸ್ ಗೆ ಕರೆದಿರುವ ಅಧಿಕಾರಿ ಯಾರು, ಅವರ ಹೆಸರೇನು ಎಂದು ಕೇಳಿದ್ದಾರೆ.
ಸಿಸಿಬಿ ಎಸಿಪಿ ಪರಮೇಶ್ವರ ಹೆಗಡೆ ಮತ್ತು ಸಿಸಿಆರ್ ಬಿ ಎಸಿಪಿ ರವೀಶ್ ನಾಯ್ಕ್ ನೇತೃತ್ವದಲ್ಲಿ ನಿಖಿಲಾ ಅಲಿಯಾಸ್ ಪ್ರವೀಣ್ ಎನ್ನುವ ವ್ಯಕ್ತಿಯನ್ನು ಕರೆದು ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಅವರೂ ಇದ್ದರು. ಪೊಲೀಸರ ಪ್ರಶ್ನೆಗಳಿಗೆ ಆ ವ್ಯಕ್ತಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ನಾನು ಆ ಒಂದು ವಿಚಾರ ಮಾತ್ರ ಹೇಳಿದ್ದಲ್ಲ. ಬೇರೆಲ್ಲ ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದೆವು. ಪೊಲೀಸ್ ಅಧಿಕಾರಿಯೂ ಕೇಳಿಕೊಂಡು ಬಂದಿದ್ದರು. ಇದು ನಮ್ಮ ದೈನೇಸಿ ಪರಿಸ್ಥಿತಿ ಎಂದು ಹೇಳಿದ್ದಷ್ಟೇ. ಮಾಧ್ಯಮದಲ್ಲಿ ಅದನ್ನೇ ಯಾಕೆ ಹೈಲೈಟ್ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪೊಲೀಸ್ ಅಧಿಕಾರಿ ಯಾರು, ನಿರ್ದಿಷ್ಟವಾಗಿ ಹೇಳಿ ಎಂದಿದ್ದಕ್ಕೆ, ಒಬ್ಬರು ಸಿಂಗಲ್ ಸ್ಟಾರ್ ಇರುವ ವ್ಯಕ್ತಿ ನಮ್ಮ ಬಳಿ ಬಂದಿದ್ದರು. ಪಣಂಬೂರು- ಕುಳೂರು ಮಧ್ಯೆ ರಸ್ತೆಯಲ್ಲಿ ಅಧಿಕಾರಿ ಸೆಕ್ಸ್ ಗೆ ಕರೆದಿದ್ದರು. ಅವರ ಹೆಸರು ಗೊತ್ತಿಲ್ಲ ಎಂದು ತಿಳಿಸಿದ್ದಾಗಿ ಮಾಹಿತಿ ಲಭಿಸಿದೆ. ಈ ಮಾತಿನ ಪ್ರಕಾರ, ಯಾರೋ ಎಎಸ್ಐ ಆಗಿರಬೇಕೆಂದು ಶಂಕೆ ಪಡಲಾಗಿದೆ. ಆ ವ್ಯಕ್ತಿಯನ್ನು ಪೊಲೀಸರು ಕಮಿಷನರ್ ಕಚೇರಿಗೆ ಕರೆದು ವಿಚಾರಣೆ ನಡೆಸಿದ್ದು, ಈ ಬಗ್ಗೆ ದೂರು ಕೊಡುವಂತೆ ಸೂಚಿಸಿದ್ದಾರೆ. ಆದರೆ ದೂರು ಕೊಡಲು ನಿರಾಕರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳವಾರ ಉರ್ವಾ ಸ್ಟೋರ್ ಬಳಿಯ ಜಿಪಂ ಕಚೇರಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಅರಿವು ಕಾರ್ಯಾಗಾರದಲ್ಲಿ ಮಂಗಳಮುಖಿಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ವೇಳೆ, ಹಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ತಮಗೆ ಕೆಲಸ ಕೊಡಿ, ನಾವು ಅನಿವಾರ್ಯವಾಗಿ ಈ ವೃತ್ತಿಗೆ ಇಳಿದಿದ್ದೇವೆ. ಬದುಕುವುದಕ್ಕೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದರು. ಪೊಲೀಸರೇ ಸೆಕ್ಸ್ ಗೆ ಆಹ್ವಾನಿಸಿದ್ದರು ಅನ್ನುವ ಅಂಶ ಮಾಧ್ಯಮದಲ್ಲಿ ಹೈಲೈಟ್ ಆಗಿತ್ತು.
Mangalore Police who sought sexual favours from transgender was a one star rank officer reveals investigation. City police have launched a probe into the allegations levelled by a transgender, that a police officer sought sexual favours from her. The complaint was raised by the transgender, during a legal awareness programme organised for transgenders, at the zilla panchayat on Tuesday.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 11:00 pm
HK News Staffer
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm