ಬ್ರೇಕಿಂಗ್ ನ್ಯೂಸ್
23-02-23 11:13 pm Mangaluru Correspondent ಕರಾವಳಿ
ಪುತ್ತೂರು, ಫೆ.23: ಕಾಡಾನೆ ಸೆರೆಹಿಡಿದು ಬೇರೆ ಕಡೆಗೆ ಒಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿರುವ ವೇಳೆಯಲ್ಲೇ ಸ್ಥಳೀಯರು ನೂರಾರು ಜನ ಸೇರಿ ಕಲ್ಲು ತೂರಾಟ ನಡೆಸಿದ್ದಾರೆ. ಅರಣ್ಯಾಧಿಕಾರಿಗಳ ಕಾರನ್ನು ಪುಡಿಗಟ್ಟಿದ ಘಟನೆ ನಡೆದಿದೆ.
ಗುರುವಾರ ಸಂಜೆ ಒಂದು ಕಾಡಾನೆಯನ್ನು ಪ್ರಯಾಸದಿಂದ ಸೆರೆಹಿಡಿದು ಕಟ್ಟಿ ಹಾಕಲಾಗಿತ್ತು. ಬಳಿಕ ಅದನ್ನು ಬೇರೆ ಕಡೆಗೆ ಒಯ್ಯಲು ಪ್ರಯತ್ನ ಪಡುತ್ತಿದ್ದಾಗಲೇ ಜನರ ಆಕ್ರೋಶ ಅಧಿಕಾರಿಗಳತ್ತ ತಿರುಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಸ್ಥಳೀಯರು ಆಕ್ರೋಶಕ್ಕೀಡಾಗಿ ದಾಳಿ ನಡೆಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಹಾಗು ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಿ ವಾಹನಗಳನ್ನು ಜಖಂಗೊಳಿಸಿದ್ದು ಘೆರಾವ್ ಹಾಕಿದ್ದಾರೆ. ಕಾಡಾನೆ ಉಪಟಳದ ಬಗ್ಗೆ ಈ ಮೊದಲೇ ಮಾಹಿತಿ ನೀಡಿದ್ದರೂ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಇವರ ನಿರ್ಲಕ್ಷ್ಯದಿಂದಲೇ ಎರಡು ಜೀವ ಹೋಗುವಂತಾಗಿದೆ ಎಂದು ಜನ ಒಮ್ಮಿಂದೊಮ್ಮೆಲೇ ಜನ ತಿರುಗಿ ಬಿದ್ದಿದ್ದಾರೆ. ಅರಣ್ಯ ಪ್ರದೇಶದಿಂದ ಅಧಿಕಾರಿಗಳು ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದಾಗ ದಾಳಿ ನಡೆದಿದ್ದು ಎರಡು ಪೋಲಿಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬ್ರೀಝಾ ಕಾರುಗಳು ಜಖಂ ಆಗಿವೆ.
ಗುರುವಾರ ಸಂಜೆ ಕಾಡಾನೆ ಸೆರೆಹಿಡಿದ ಸುಬ್ರಹ್ಮಣ್ಯ ಬಳಿಯ ಕೊಂಬಾರು ಎಂಬಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟದ ಘಟನೆಯಲ್ಲಿ ಕೆಲವು ಅಧಿಕಾರಿಗಳಿಗೂ ಗಾಯಗಳಾಗಿವೆ.
Elephant that killed two in Kadaba taluk captured, Villagers Pelt Stones on police vans, attack forest officals. Totally 4 Vehicles have been damaged. Few forest perosonel have got Minor injures in the incident. The incident took place when the officals where going back capturing the wild elephant.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm