ಬ್ರೇಕಿಂಗ್ ನ್ಯೂಸ್
06-03-23 12:05 pm Mangalore Correspondent ಕರಾವಳಿ
ಪುತ್ತೂರು, ಮಾ.6: ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮಾಣಿ - ಮೈಸೂರು ಹೆದ್ದಾರಿಯ ಸಂಪ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ, ಬಿಹಾರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳ ತಂಡ ಪುತ್ತೂರು, ಬಂಟ್ವಾಳದಲ್ಲಿ ತಿರುಗಾಡುತ್ತಿದ್ದು ಈ ವೇಳೆ ಅಪಘಾತ ನಡೆದಿದೆ. ಬೈಕಿನಲ್ಲಿ ತೆರಳುತ್ತಿದ್ದ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮ್ಯಾನೇಜರ್ ಲಕ್ಷ್ಮಣ ನಾಯ್ಕ ಬಿ. (50) ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತಕ್ಕೊಳಗಾದ ಪೊಲೀಸ್ ವಾಹನ ಜಿಲ್ಲೆಯ ಡಿ. ಆರ್. ವಿಭಾಗಕ್ಕೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಡಿಕ್ಕಿಯಾಗಿದೆ. ಲಕ್ಷ್ಮಣ ನಾಯ್ಕ ಪುತ್ತೂರಿನಿಂದ ಆರ್ಲಪದವು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳ ತಂಡ ಪುತ್ತೂರಿಗೆ ಬರುವ ಸಂದರ್ಭದಲ್ಲಿ ಹೆಚ್ಚಾಗಿ ಜಿಲ್ಲೆಯ ಡಿಆರ್ ವಿಭಾಗದ ಪೊಲೀಸ್ ವಾಹನವನ್ನು ಬಳಸಿಕೊಳ್ಳುತ್ತಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Mangalore NIA police jeep rams bike, 50 year old man dies on spot near sampya, the deceased has been identified as Lakshman Naik. He was said to be working as a society manager. Conspiracy to attack PM’s rally at Bihar in 2022, five from Bantwal in Mangalore arrested by NIA officers.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm