ಬ್ರೇಕಿಂಗ್ ನ್ಯೂಸ್
13-03-23 10:51 pm Mangalore Correspondent ಕರಾವಳಿ
ಮಂಗಳೂರು, ಮಾ.13: ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಬಂದಿದೆ. ರಾಜಮೌಲ್ವಿ ನಿರ್ದೇಶನದ ಚಿತ್ರದ ಹಾಡಿಗೆ ಪ್ರಶಸ್ತಿ ಬಂದಿರುವುದು ಭಾರತದಲ್ಲಿ ಭಾರೀ ಸುದ್ದಿಯೂ ಆಗಿದೆ. ಇದೇ ವೇಳೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಮಂಗಳೂರು ಮೂಲದ ಕೆಥೋಲಿಕ್ ಮಹಿಳೆಯೊಬ್ಬರು ನಿರ್ದೇಶಿಸಿರುವ ತಮಿಳು ಕಿರುಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ.
ಆನೆ ಮತ್ತು ಮಾನವನ ಸಂಬಂಧ ಕುರಿತಾಗಿ ಕಾರ್ತಿಕಿ ಗೊನ್ಸಾಲ್ವಿಸ್ ಎಂಬ ಮಹಿಳೆ 'ದಿ ಎಲಿಫೆಂಟ್ ವಿಸ್ಪರರ್ ' ಎನ್ನುವ ಕಿರುಚಿತ್ರ ತಯಾರಿಸಿದ್ದಾರೆ. ಗುನೀತ್ ಮೋಂಗಾ 39 ನಿಮಿಷದ ಕಿರುಚಿತ್ರದ ನಿರ್ಮಾಪಕರು. ಈ ಚಿತ್ರ ಜಗತ್ತಿನ ಹೆಸರಾಂತ ಚಿತ್ರಗಳೊಂದಿಗೆ ಸ್ಪರ್ಧಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮೂಲತಃ ವನ್ಯಜೀವಿ ಫೋಟೋಗ್ರಾಫರ್ ಆಗಿದ್ದ ಕಾರ್ತಿಕಿ ಮೊದಲ ಬಾರಿಗೆ ಕಿರುಚಿತ್ರ ತಯಾರಿಸಿದ್ದರು. ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವ ದಂಪತಿ ಎರಡು ಮರಿಯಾನೆಗಳನ್ನು ದತ್ತು ಪಡೆದು ಸಾಕುವುದು ಮತ್ತು ಅವರ ನಡುವಿನ ಬಾಂಧವ್ಯದ ಕತೆಯಿರುವ ಚಿತ್ರ ಅದಾಗಿದ್ದು, ಶ್ರೇಷ್ಠ ನಿರೂಪಣೆ ಮತ್ತು ವಿಭಿನ್ನ ಕತೆಯ ಕಾರಣಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಂದಹಾಗೆ, ಕಾರ್ತಿಕಿ ಗೊನ್ಸಾಲ್ವಿಸ್ ಮಂಗಳೂರು ಮೂಲದವರು. ಅವರ ಮುತ್ತಜ್ಜ ಮಂಗಳೂರಿನ ಪ್ರತಿಷ್ಠಿತ ಕೆಥೋಲಿಕ್ ಕೋಪರೇಟಿವ್ ಬ್ಯಾಂಕ್ (ಎಂಸಿಸಿ) ಸಂಸ್ಥಾಪಕ ಪಿಎಫ್ಎಕ್ಸ್ ಸಲ್ದಾನ. ಕಾರ್ತಿಕಿ ಅವರ ತಂದೆ ತಿಮೋತಿ ಸಲ್ದಾನ ಆಗಿದ್ದು, ಐಐಟಿ ಮಾಂಡಿಯ ಸ್ಥಾಪಕರು. ತಿಮೋತಿ ಅವರು ಅಲಾನ್ ಗೊನ್ಸಾಲ್ವಿಸ್ ಅವರ ಮಗ. ಅಲಾನ್ ಅವರು ಪಿಎಫ್ಎಕ್ಸ್ ಸಲ್ದಾನ ಅವರ ಪುತ್ರಿ ಮೋನಿಕಾ ಗೊನ್ಸಾಲ್ವಿಸ್ ಅವರ ಪುತ್ರ. ಮಂಗಳೂರು ಮೂಲದ ಪ್ರತಿಷ್ಠಿತ ಕುಟುಂಬದ ಸದಸ್ಯೆಯಾದ ಕಾರ್ತಿಕಿ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ. ಇವರ ಕುಟುಂಬ ಈ ಹಿಂದೆ ಊಟಿಯಲ್ಲಿ ನೆಲೆಸಿದ್ದರಿಂದ ಕಾರ್ತಿಕಿ ತಮಿಳು ಭಾಷಿಗಳಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಕಾರ್ತಿಕಿ ಗೊನ್ಸಾಲ್ವಿಸ್ ಪ್ರಶಸ್ತಿಯನ್ನು ತನ್ನ ತಾಯ್ನಾಡಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಸ್ಲಮ್ ಡಾಗ್ ಮಿಲಿಯನೇರ್ ಅನ್ನುವ ಕಿರುಚಿತ್ರ ಹಲವು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ ಪ್ರಮುಖ ಪಾತ್ರ ಮಾಡಿದ್ದ ಫ್ರೀಡಾ ಪಿಂಟೋ ಮಂಗಳೂರು ಮೂಲದವರು ಆಗಿದ್ದರು. ಇದೀಗ ಮಂಗಳೂರು ಮೂಲದ ಮತ್ತೊಬ್ಬ ಕೆಥೋಲಿಕ್ ಮಹಿಳೆ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಗೆದ್ದಿದ್ದಾರೆ.
March 12 evening was a significant and magnificent one for India in so many ways. RRR’s Naatu Naatu won Best Original Song and The Elephant Whisperers won Best Documentary Short at the 95th Oscars, making it a historic double win for India. Both films showcased the beauty of India and its diverse culture in such dramatically different ways.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm