ಬ್ರೇಕಿಂಗ್ ನ್ಯೂಸ್
18-03-23 06:40 pm Udupi Correspondent ಕರಾವಳಿ
ಉಡುಪಿ, ಮಾ.18: ಇತ್ತ ಕೋಟ್ಯಂತರ ರಾಮನ ಭಕ್ತರು ಅಯೋಧ್ಯೆಯಲ್ಲಿ ಭವ್ಯ ಮಂದಿರಕ್ಕಾಗಿ ಕಾತುರದಲ್ಲಿದ್ದಾರೆ. 2024ರ ವೇಳೆಗೆ ರಾಮನ ಜನ್ಮಭೂಮಿಯಲ್ಲಿ ಶ್ರೀರಾಮಚಂದ್ರನ ಮಂದಿರ ತಲೆಯೆತ್ತಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ರಾಮ ಮಂದಿರದಲ್ಲಿ ಬೃಹತ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಂಕಲ್ಪಿಸಿದ್ದು, ಕಲ್ಲಿನ ಮೂರ್ತಿ ಕೆತ್ತನೆಗೆ ಕಾರ್ಕಳದಿಂದ ಕಪ್ಪು ಶಿಲೆಯೊಂದನ್ನು ಆಯ್ಕೆ ಮಾಡಲಾಗಿದೆ.
ಕಾರ್ಕಳದ ಈದು ಗ್ರಾಮದ ಗುಡ್ಡದಲ್ಲಿದ್ದ ಬೃಹತ್ ಏಕಶಿಲೆಯನ್ನು ಅಗೆದು ತೆಗೆಯಲಾಗಿದ್ದು, ಅದನ್ನು ಸದ್ದಿಲ್ಲದೆ ಬೃಹತ್ ಲಾರಿಯಲ್ಲಿ ಅಯೋಧ್ಯೆಗೆ ಒಯ್ಯಲಾಗಿದೆ. ಆಸ್ತಿಕ ಭಕ್ತರು ರಾಮ ಜಪ ಮಾಡುತ್ತಲೇ ಭವ್ಯಮೂರ್ತಿಯ ಕಲ್ಪನೆ ಇಟ್ಟುಕೊಂಡು ಕಪ್ಪು ಶಿಲೆಯನ್ನು ಪೂಜಿಸಿ ಅಯೋಧ್ಯೆಗೆ ಕಳಿಸಿಕೊಟ್ಟಿದ್ದಾರೆ. ಮಾ.16ರಂದು ರಾತ್ರಿ ಲಾರಿಯಲ್ಲಿ ಕಾರ್ಕಳದಿಂದ ಕಪ್ಪು ಶಿಲೆಯನ್ನು ಒಯ್ಯಲಾಗಿದ್ದು ಒಂದೆರಡು ದಿನದಲ್ಲಿ ಅಯೋಧ್ಯೆ ತಲುಪಲಿದೆ.


ಇಷ್ಟಕ್ಕೂ ಅಯೋಧ್ಯೆ ಶ್ರೀರಾಮನಿಗೂ ಉಡುಪಿಗೂ ನಂಟು ಇರುವುದೇ ಸೋಜಿಗ. ರಾಮ ಮಂದಿರ ನಿರ್ಮಾಣ ಸಮಿತಿಯಲ್ಲಿ ಉಡುಪಿ ಪೇಜಾವರ ಮಠದ ಸ್ವಾಮೀಜಿಗೆ ಪ್ರಮುಖ ಸ್ಥಾನ ಇದೆ. ಅದು ಬಿಟ್ಟರೆ ಉಡುಪಿಗೂ ಅಯೋಧ್ಯೆಗೂ ಬೇರೇನು ನಂಟು ಇಲ್ಲ. ಆದರೆ ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತನೆಗೆ ಕೃಷ್ಣನೂರಿನ ಕೃಷ್ಣ ಶಿಲೆಯನ್ನೇ ಆಯ್ಕೆ ಮಾಡಿರುವುದು ಕಾಕತಾಳೀಯ. ಸಾಮಾನ್ಯವಾಗಿ ದೇವರ ಮೂರ್ತಿಗಳನ್ನು ಕಪ್ಪು ಶಿಲೆಯಿಂದಲೇ ನಿರ್ಮಿಸಲಾಗುತ್ತದೆ. ಅಭಿಷೇಕ ಮಾಡುವ ಸಂದರ್ಭದಲ್ಲಿ ಕಲ್ಲು ಕರಗಬಾರದು ಅನ್ನುವುದು ಇದರ ಉದ್ದೇಶ. ಮೊದಲಿಗೆ ರಾಮನ ಮೂರ್ತಿ ಕೆತ್ತಲು ನೇಪಾಳದಿಂದ ಸಾಲಿಗ್ರಾಮ ಶಿಲೆಯನ್ನು ಅಯೋಧ್ಯೆಗೆ ತರಲಾಗಿತ್ತು. ಆದರೆ ಅದು ಸೂಕ್ತವಾಗಿಲ್ಲವೆಂದು ಇದೀಗ ಕರಿ ಕಲ್ಲ ಊರು, ಗೊಮ್ಮಟನ ಊರು ಎಂದು ಖ್ಯಾತಿ ಪಡೆದಿರುವ ಕಾರ್ಕಳದಿಂದಲೇ ಶ್ರೀರಾಮನ ಮೂರ್ತಿಗೆ ಕಪ್ಪು ಶಿಲೆಯನ್ನು ಆಯ್ಕೆ ಮಾಡಲಾಗಿದೆ.



ಕಾರ್ಕಳ ಎಂದರೆ ಇತಿಹಾಸ ಕಾಲದಿಂದಲೂ ಶಿಲ್ಪಿಗಳಿಗೆ ಪ್ರಸಿದ್ಧಿ ಪಡೆದಿದೆ. ಹಿಂದೆ ಭೈರವರಸರ ಕಾಲದಲ್ಲಿ ಕಾರ್ಕಳದ ಬೃಹತ್ ಗೊಮ್ಮಟ ಮೂರ್ತಿಯನ್ನು ಕಲ್ಕುಡ ಎಂಬ ಒಬ್ಬನೇ ವ್ಯಕ್ತಿ ಕೈಯಲ್ಲೇ ಕೆತ್ತಿದ್ದು ಇತಿಹಾಸದಲ್ಲಿದೆ. ಅದಕ್ಕಾಗಿ ಅಂದಿನ ಜೈನ ರಾಜ ಭೈರವರಸು, ನೀನು ಬೇರೆಲ್ಲೂ ಇಂಥ ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಕೈ, ಕಾಲನ್ನೇ ಕತ್ತರಿಸಿ ಇನಾಮು ಕೊಟ್ಟಿದ್ದನೆಂಬ ಐತಿಹ್ಯ ಇದೆ. ಅಂಥ ಪರಂಪರೆ ಇರುವ ಕಾರ್ಕಳದ ಶಿಲ್ಪಿಗಳೇ ಈಗ ಜಗತ್ತಿನ ಕೋಟ್ಯಂತರ ರಾಮ ಭಕ್ತರ ಕನಸುಗಳನ್ನು ಈಡೇರಿಸಬಲ್ಲ ಅಯೋಧ್ಯಾ ಶ್ರೀರಾಮನ ಮೂರ್ತಿಯನ್ನೂ ಕೈಯಿಂದಲೇ ಕೆತ್ತಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಕಾರ್ಕಳದ ಕರಿಕಲ್ಲ ಶಿಲೆಯಲ್ಲಿ ಶ್ರೀರಾಮನ ಮೂರ್ತಿ ಅರಳಲಿದೆಯಂತೆ.
A huge rock has been sent from Karnataka's Karkala to Ayodhya in Uttar Pradesh for the construction of the idol of Lord Ram in the under-construction Ram Mandir. The visuals of the rock being taken from Karkala in Karnataka to Ayodhya were accessed by Headline Karnataka.
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
12-12-25 10:28 pm
Mangalore Correspondent
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm