ಬ್ರೇಕಿಂಗ್ ನ್ಯೂಸ್
18-03-23 07:41 pm Mangalore Correspondent ಕರಾವಳಿ
ಮಂಗಳೂರು, ಮಾ.18: ಗುಳಿಗ ದೈವಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಮಾನಿಸಿದ್ದನ್ನು ಖಂಡಿಸಿ ತೀರ್ಥಹಳ್ಳಿಯಿಂದ ಕಾಂಗ್ರೆಸ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿಗಳು 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಂಗಳೂರಿಗೆ ವಾಹನ ಜಾಥಾ ಆಗಮಿಸಿದ್ದಾರೆ.
ಮಂಗಳೂರಿನ ಪಚ್ಚನಾಡಿ ಬಳಿಯ ಬಂದಲೆಯ ಶ್ರೀಮಂತ ರಾಜಗುಳಿಗ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದ್ದಾರೆ. ದೈವಸ್ಥಾನದ ಎದುರು ಹರಿಕೆ ಮಾಡಿದ ಭಕ್ತರು, ಆರಗ ಜ್ಞಾನೇಂದ್ರ ಅವರು ಗುಳಿಗ ದೈವಕ್ಕೆ ಅವಮಾನ ಮಾಡಿದ್ದಾರೆ. ಆಮೂಲಕ ತೀರ್ಥಹಳ್ಳಿಯ ಜನತೆಗೆ ಮತ್ತು ಕರಾವಳಿಯ ದೈವದ ಆರಾಧಕರಿಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಗುಳಿಗ ದೈವವೇ ತನ್ನ ಕಾರಣಿಕ ತೋರಿಸಬೇಕು. ಶಿಕ್ಷೆ ಕೊಡು ಎಂದು ಬೇಡುವುದಿಲ್ಲ. ಅವರಿಗೆ ಒಳ್ಳೆಯ ಬುದ್ಧಿ ಕೊಡು ಎಂದು ಹೇಳುತ್ತೇವೆ. ಅಲ್ಲದೆ, ತನ್ನ ಶಕ್ತಿಯ ಮೂಲಕ ಪರಿಣಾಮ ತೋರಿಸಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.
ಅಲ್ಲದೆ, ನಾವು ಕಾಂಗ್ರೆಸ್ ಕಾರ್ಯಕರ್ತರೆಂದು ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ದೈವದ ಬಗ್ಗೆ ಭಕ್ತಿಯಿಟ್ಟು ಬಂದಿದ್ದೇವೆ. ತೀರ್ಥಹಳ್ಳಿಯ ಜನರ ಪರವಾಗಿ ಬಂದಿದ್ದೇವೆ. ನಾವು ಶಿವದೂತೆ ಗುಳಿಗೆ ನಾಟಕವನ್ನು ಮಾಡಿಸಿದ್ದೆವು. ಮೊನ್ನೆ 16 ಸಾವಿರ ಜನ ಸೇರಿದ್ದರು. ನಾಟಕವನ್ನು ನೋಡಿ ಆನಂದಿಸಿದ್ದಾರೆ, ದೈವದ ಕಾರಣಿಕ ನೋಡಿದ್ದಾರೆ. ಮುಂದೆ ಗುಳಿಗ ದೈವ ಅನುಗ್ರಹಿಸಿದರೆ ಇದಕ್ಕಿಂತ ದೊಡ್ಡ ರೀತಿಯಲ್ಲಿ ಅದೇ ನಾಟಕ ಆಯೋಜಿಸುತ್ತೇವೆ. 32 ಸಾವಿರ ಜನರನ್ನು ಸೇರಿಸುತ್ತೇವೆ. ಆದರೆ ಗುಳಿಗ ದೈವಕ್ಕೆ ಅಪಮಾನ ಮಾಡಿದ, ಗುಳಿಗನಿಗೆ ಜಾಪಾಳ ಗುಳಿಗೆ ಎಂದು ಅಣಕಿಸಿದ ಆರಗ ಜ್ಞಾನೇಂದ್ರ ತುಳುನಾಡಿನ ಯಾವುದಾದ್ರೂ ಗುಳಿಗನ ಕ್ಷೇತ್ರಕ್ಕೆ ಬಂದು ತಪ್ಪು ಯಾಚನೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದ ಜೊತೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೂಡ ಈ ಸಂದರ್ಭದಲ್ಲಿ ಜೊತೆಗಿದ್ದರು.
Insult to #Daiva, #Congress leaders pray to Daiva in Mangalore to punish #homeminister #AragaJnanendra by holding a rally from #Thirthahalli to #Mangalore. Jnanendra recently insulted ‘Guliga daiva’ during a programme organised at #Thirthahalli. pic.twitter.com/uHa5RQK6i5
— Headline Karnataka (@hknewsonline) March 18, 2023
Insult to Daiva, Congress leaders pray to Daiva in Mangalore to punish home minister Araga Jnanendra by holding a rally from Thirthahalli to Mangalore. Jnanendra recently insulted ‘Guliga daiva’ during a programme organised at Thirthahalli.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm