ಬ್ರೇಕಿಂಗ್ ನ್ಯೂಸ್
18-03-23 09:02 pm Mangalore Correspondent ಕರಾವಳಿ
ಉಳ್ಳಾಲ, ಮಾ.18: ರಾಣಿ ಅಬ್ಬಕ್ಕಳ ಜತೆಗಿದ್ದ ಮೊಗವೀರ ಸೈನಿಕ ಕುಟುಂಬ ಸೋಮೇಶ್ವರ ಉಚ್ಚಿಲದಲ್ಲಿ ವಂಶ ಪಾರಂಪರ್ಯವಾಗಿ ಕೃಷಿ ಮತ್ತು ಮೀನುಗಾರಿಕೆ ನಡೆಸುತ್ತಿದ್ದ ಭೂಮಿಯನ್ನು ಮುಸಲ್ಮಾನರು ಅತಿಕ್ರಮಿಸಿ ಕಂಪೌಂಡ್ ವಾಲ್ ನಿರ್ಮಿಸಿದ್ದು, ಮಾ.25 ರ ಒಳಗೆ ಜಿಲ್ಲಾಧಿಕಾರಿಗಳು ಹಿಂದೂಗಳಿಗೆ ಸೂಕ್ತ ನ್ಯಾಯದ ಆದೇಶ ಹೊರಡಿಸದೇ ಇದ್ದಲ್ಲಿ ಮಾ.26 ರಂದು ಸಾವಿರಾರು ಹಿಂದು ಕಾರ್ಯಕರ್ತರನ್ನು ಸೇರಿಸಿ ಮುತ್ತಿಗೆ ಹಾಕುವ ಮೂಲಕ ಶಾಶ್ವತ ಭಗವಾಧ್ವಜವನ್ನು ಹಾರಿಸಲಾಗುವುದು ಎಂದು ಅಖಿಲ ಭಾರತ ಹಿಂದು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಗಿರೀಶ್ ಎಚ್ಚರಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 40 ವರ್ಷಗಳಿಂದ ಉಳ್ಳಾಲದಲ್ಲಿ ಅಧಿಕಾರ ಅನುಭವಿಸುತ್ತಿರುವ ಯು.ಟಿ ಖಾದರ್ ಮತ್ತು ಕುಟುಂಬ ಅಭಿವೃದ್ಧಿಯಲ್ಲಿ ಶೂನ್ಯರಾಗಿ, ಧರ್ಮದ ಆಧಾರದಲ್ಲಿ ಮತಗಳಿಸಿ, ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ. ಮುಂದಿನ 10-15 ವರ್ಷಗಳಲ್ಲಿ ಉಳ್ಳಾಲ ಕ್ಷೇತ್ರ ಸಂಪೂರ್ಣ ಮುಸ್ಲಿಂ ಮಯವಾಗಿ ಮಿನಿ ಪಾಕಿಸ್ತಾನ ಆಗಲಿದೆ. ಇದರಿಂದ ಕ್ಷೇತ್ರದ ಹಿಂದೂಗಳು ಸಾಮೂಹಿಕವಾಗಿ ಕ್ಷೇತ್ರ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪೋರ್ಚುಗೀಸರ ವಿರುದ್ಧ ಹೋರಾಡಿ ಉಳ್ಳಾಲವನ್ನು ಆಳಿದ್ದ ವೀರರಾಣಿ ಅಬ್ಬಕ್ಕಳ ಜತೆಗಿದ್ದ ಮೊಗವೀರ ಸೈನಿಕ ಕುಟುಂಬ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಕೃಷಿ ನಡೆಸುತ್ತಿದ್ದ ಸೋಮೇಶ್ವರ ಉಚ್ಚಿಲದ 10 ಎಕ್ರೆ ಜಾಗ ಇದೀಗ ಮುಸ್ಲಿಮರ ಪಾಲಾಗಿದೆ. ಈ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಿ ಕಾಲಕ್ರಮೇಣ ಪ್ರದೇಶದ 4 ಎಕರೆ ಜಮೀನು ಮಸೀದಿಗೆ ಕಾರ್ಯಕ್ರಮ ಮಾಡಲು ನೀಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರು. ಸರಕಾರ ನಿಬಂಧನೆಗಳ ಜೊತೆಗೆ ಲೀಸ್ ಗೆ ನೀಡಿತ್ತು, ನಂತರ ಸರಕಾರದ ನಿಬಂಧನೆಗಳನ್ನು ಉಲ್ಲಂಘಿಸಿ , ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ಅಕ್ರಮ ತಡೆಬೇಲಿಯನ್ನು ನಿರ್ಮಿಸಲಾಗಿದೆ. ಉಳಿದ ಜಾಗದಲ್ಲಿ ಆರ್ ಎಸ್ ಎಸ್ ನಡೆಸುತ್ತಿದ್ದ ಕ್ಯಾಂಪ್, ಹಿಂದೂಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಜಾಗಕ್ಕೂ ಸೇರಿ 10 ಎಕ್ರೆ ಜಮೀನಿಗೂ ರಾತ್ರೋ ರಾತ್ರಿ ಹಿಂದುಗಳನ್ನು ಬೆದರಿಸಿ ಕಂಪೌಂಡ್ ವಾಲ್ ಹಾಕಿ ಅತಿಕ್ರಮಣ ನಡೆಸಿದ್ದಾರೆ ಎಂದರು.
ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್ ಮೊದಲಾದವರು ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Mangalore Hindu Mahasabha alleges of Muslim Land Jihad at Uchila in Ullal.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm