ಬ್ರೇಕಿಂಗ್ ನ್ಯೂಸ್
25-03-23 10:40 pm Mangalore Correspondent ಕರಾವಳಿ
ಬಂಟ್ವಾಳ, ಮಾ.25 : ಗುಜರಾತಿನ ನ್ಯಾಯಾಲಯ ರಾಹುಲ್ ಗಾಂಧಿಯನ್ನು ಜೈಲಿಗಟ್ಟಿದ್ದರಲ್ಲಿ ಅಚ್ಚರಿ ಇಲ್ಲ. ಇಡೀ ದೇಶದಲ್ಲಿ ನ್ಯಾಯಾಂಗ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ಬಿಜೆಪಿಯ ಶೇ.75 ರಷ್ಟು ಸಂಸದರು ಜೈಲಲ್ಲಿರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗಡೆ ಹೇಳಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ 14 ದಿನಗಳ ಕಾಲ ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ರಾಯಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಎಂ. ಜಿ. ಹೆಗಡೆ, ಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ, ಪ್ರಶ್ನೆ ಮಾಡಿದವರನ್ನು ಹೊಸಕಿ ಹಾಕುವ ಪ್ರವೃತ್ತಿ ಬಿಜೆಪಿಯಿಂದ ನಡೆಯುತ್ತಿದೆ ಎಂದರು.
ಭಾವನಾತ್ಮಕವಾಗಿ ಜನರನ್ನು ಹಾದಿ ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿತ್ತು. ಈಗ ಅದೇ ಹಿನ್ನಡೆಯಾಗುತ್ತಿದೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ. ಬಿಜೆಪಿಗೆ ಅಭಿವೃದ್ಧಿಯ ಕತೆ ಬೇಡ. ಇಡಿ, ಸಿಡಿ, ಬೀಡಿ ಸೂತ್ರದಲ್ಲಿ ಬಿಜೆಪಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ ಅವರು ಅಭಿವೃದ್ಧಿಯೇ ರಾಜಕಾರಣದ ಚುನಾವಣೆಯ ಮಂತ್ರವಾಗಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರಿಂದ ಬಡವರಿಗೆ ಕೊಡುವುದು ಕಾಂಗ್ರೆಸ್ ಕಾರ್ಯಕ್ರಮವಾದರೆ, ಬಡವರಿಂದ ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ವಿರೋಧ ಪಕ್ಷದ ಶಾಸಕನಾಗಿದ್ದಾಗಲೂ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ವಿರೋಧ ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ, ಕೊಲೆ ಗಡುಕರನ್ನು ವೈಭವೀಕರಣ ಮಾಡುವವರಿಂದ ನೈತಿಕತೆಯ ಮಾತುಗಳನ್ನು ಕೇಳುವ ಅಗತ್ಯ ಇಲ್ಲ ಎಂದರು.
ಯಾತ್ರೆಯ ಸಂಚಾಲಕ ಪಿಯೂಷ್ ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಕ್ಷ ಪ್ರಮುಖರಾದ ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಕೆ.ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್ ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಸುರೇಶ್ ಜೋರಾ, ಐಡಾ ಸುರೇಶ್, ಸಿದ್ದಿಕ್ ಗುಡ್ಡೆಯಂಗಡಿ, ಅಬ್ದುಲ್ ರಝಾಕ್ ಕುಕ್ಕಾಜೆ, ಪದ್ಮನಾಭ ಸಾಮಂತ, ಚಿತ್ತರಂಜನ್ ಶೆಟ್ಟಿ, ಉಮೇಶ್ ಬೋಳಂತೂರು,ಚಂದ್ರಶೇಖರ ಪೂಜಾರಿ, ಪದ್ಮನಾಭ ರೈ, ವಾಸು ಪೂಜಾರಿ, ಉಮೇಶ್ ಕುಲಾಲ್, ಮನೋಹರ ನೇರಂಬೋಳು, ದೇವಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
75 percent of BJP leaders in India will be in jail if justice system was followed in case of Rahul Gandhi, MG Hedge in Mangalore holding press meet at Bantwal.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm