ಬ್ರೇಕಿಂಗ್ ನ್ಯೂಸ್
26-03-23 11:03 pm Mangalore Correspondent ಕರಾವಳಿ
ಮಂಗಳೂರು, ಮಾ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಬಿಲ್ಲವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಆದರೆ, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಲ್ಲವರೇ ಅತಿ ಹೆಚ್ಚಿದ್ದಾರೆ. ಹೀಗಾಗಿ ಮತ್ತೆರಡು ಕ್ಷೇತ್ರಗಳಿಗೆ ಬಿಲ್ಲವರಿಗೆ ಟಿಕೆಟ್ ಕೊಡಬೇಕೆಂದು ಕಲಬುರ್ಗಿಯ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ನಾಮಧಾರಿ, ಬಿಲ್ಲವರು, ಈಡಿಗರ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿಯೂ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಒಟ್ಟು 124 ಕ್ಷೇತ್ರಗಳಲ್ಲಿ ನಮ್ಮ ಸಮುದಾಯಕ್ಕೆ ಸಿಕ್ಕಿರುವುದು ಕೇವಲ ಆರು ಸೀಟು ಮಾತ್ರ. ಆದರೆ ಲಿಂಗಾಯತ, ಒಕ್ಕಲಿಗರಿಗೆ ಅತಿ ಹೆಚ್ಚು ಸೀಟು ಕೊಟ್ಟಿದ್ದಾರೆ. ಮಂಡ್ಯದಲ್ಲಿ ಒಂಬತ್ತು ಸೀಟುಗಳಿಗೂ ಒಕ್ಕಲಿಗರಿಗೇ ಟಿಕೆಟ್ ಕೊಡುತ್ತಾರೆ. ಬಿಲ್ಲವರ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲೂ ಯಾಕೆ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಮುಂದೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದು, ಸಮುದಾಯಕ್ಕೆ ಅವಕಾಶ ನೀಡಲು ಬೇಡಿಕೆ ಇಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಮತ್ತೆರಡು ಸೀಟು ನೀಡದೇ ಇದ್ದಲ್ಲಿ ನಾವು ರಾಜ್ಯ ಮಟ್ಟದಲ್ಲಿ ಬಿಲ್ಲವ, ಈಡಿಗರ ಸಭೆ ಕರೆದು ಮುಂದಿನ ನಿರ್ಧಾರ ಮಾಡುತ್ತೇವೆ. ಟಿಕೆಟ್ ಸಿಗದೇ ಇದ್ದಲ್ಲಿ ಬಿಲ್ಲವರ ಸಂಖ್ಯೆ ಹೆಚ್ಚಿರುವ ಕಡೆ ನಾವು ಪಕ್ಷೇತರ ಅಭ್ಯರ್ಥಿ ಹಾಕುತ್ತೇವೆ, ನಮ್ಮ ಬಲವನ್ನು ತೋರಿಸುತ್ತೇವೆ ಎಂದು ಪ್ರಣವಾನಂದ ಹೇಳಿದರು. ಪಕ್ಷ ರಹಿತವಾಗಿ ಬಿಲ್ಲವ ಅಭ್ಯರ್ಥಿಗೆ ಮತ ಹಾಕುವಂತೆ ಸಮುದಾಯದ ಮತದಾರರಲ್ಲಿ ಮನವಿ ಮಾಡುತ್ತೇನೆ. ಪಕ್ಷ ಮುಖ್ಯ ಅಲ್ಲ, ನಮಗೆ ರಾಜಕೀಯ ಅಧಿಕಾರ ಮುಖ್ಯ. ನಮ್ಮ ಅಭ್ಯರ್ಥಿ ಯಾರಿದ್ದಾರೆ, ಅವರಿಗೆ ಮತ ಹಾಕುವಂತೆ ಹೇಳುತ್ತೇನೆ ಎಂದರು.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಗೂ ಕೇಳಿಕೊಳ್ಳುವುದು ಒಂದನ್ನೇ. ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿರುವಲ್ಲಿ ನಮ್ಮವರಿಗೆ ಟಿಕೆಟ್ ಕೊಡಿ. ನಮ್ಮ ಸಮುದಾಯದ ಮಂದಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೀಟು ಬೇಕೆಂದು 11 ಮಂದಿ ಎರಡು ಲಕ್ಷ ತೆತ್ತು ಅರ್ಜಿ ಹಾಕಿದ್ದಾರೆ. ಅವರೆಲ್ಲರನ್ನೂ ಭೇಟಿಯಾಗಿ ಅಹವಾಲು ಕೇಳುತ್ತೇನೆ ಎಂದು ಸ್ವಾಮೀಜಿ ಹೇಳಿದರು. ಬಿಜೆಪಿ ಸರಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದರೂ, ಅದಕ್ಕೆ ಯಾವುದೇ ಅನುದಾನ ಘೋಷಿಸಿಲ್ಲ. ಇದರಿಂದ ಸಮುದಾಯಕ್ಕೇನು ಪ್ರಯೋಜನ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Mangalore Swamiji Pranavananda to contest independent.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm