ಬ್ರೇಕಿಂಗ್ ನ್ಯೂಸ್
04-04-23 01:05 pm Mangalore Correspondent ಕರಾವಳಿ
ಮಂಗಳೂರು, ಎ.4: ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು - ಬೆಂಗಳೂರು ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುವ ಹರೇಕಳ- ಅಡ್ಯಾರ್ ಸೇತುವೆಗೆ ಹಾಕಿದ್ದ ತಡೆಬೇಲಿಯನ್ನು ಡಿವೈಎಫ್ಐ ಕಾರ್ಯಕರ್ತರು ಸಾರ್ವಜನಿಕರ ಸಹಕಾರದಲ್ಲಿ ಕಿತ್ತೆಸೆದು ಸಂಚಾರ ಮುಕ್ತಗೊಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆಯೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ ಒಂದರಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸಣ್ಣ ನೀರಾವರಿ ಇಲಾಖೆಯಿಂದ ಅಧಿಕೃತ ಆದೇಶ ಸಿಗದೇ ಇದ್ದುದರಿಂದ ಸಂಚಾರಕ್ಕೆ ಬಿಟ್ಟುಕೊಟ್ಟಿರಲಿಲ್ಲ.
ಈ ನಡುವೆ ಎಪ್ರಿಲ್ 3ರ ಸೋಮವಾರ ಅಧಿಕಾರಿಗಳು ಕುಂಬಳಕಾಯಿ ಒಡೆದು ಸೇತುವೆ ಸಂಚಾರಕ್ಕೆ ಬಿಟ್ಟು ಕೊಡಲು ಹರೇಕಳಕ್ಕೆ ಬಂದಿದ್ದರೂ ಸೇತುವೆ ಉದ್ಘಾಟನೆಗೆ ನೀತಿ ಸಂಹಿತೆಯ ನೆಪದಲ್ಲಿ ಹಿಂದೆ ಸರಿದಿದ್ದಾರೆ. ಇದರಿಂದ ಸ್ಥಳೀಯರು ಅದರಲ್ಲೂ ಹರೇಕಳ, ಕೊಣಾಜೆ ಭಾಗದ ನಿವಾಸಿಗಳು ಆಕ್ರೋಶಗೊಂಡಿದ್ದರು.
ಇದರಿಂದ ಬೇಸತ್ತ ಹರೇಕಳ ಡಿವೈಎಫ್ಐ ಘಟಕದ ವತಿಯಿಂದ ನಿನ್ನೆಯೇ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಡಿವೈಎಫ್ಐ ಮುಖಂಡರು, ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸಾರ್ವಜನಿಕರ ಸಹಕಾರದಲ್ಲಿ ಸೇತುವೆಯ ಎರಡೂ ಕಡೆಗಳಲ್ಲಿ ಅಳವಡಿಸಲಾಗಿದ್ದ ಗೇಟುಗಳನ್ನು ತೆರವುಗೊಳಿಸಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಹರೇಕಳಕ್ಕೆ ಇನ್ನು ಮಂಗಳೂರು ಹತ್ತಿರ !
ಹರೇಕಳ- ಅಡ್ಯಾರ್ ನಡುವೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಕಿಂಡಿ ಅಣೆಕಟ್ಟು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು ಸೇತುವೆಯನ್ನು ಚುನಾವಣೆ ಘೋಷಣೆಗೂ ಮುನ್ನ ಉದ್ಘಾಟಿಸಲು ಶಾಸಕ ಯುಟಿ ಖಾದರ್ ಯೋಜನೆ ಹಾಕಿದ್ದರು. ಆದರೆ ಅದು ತಾಂತ್ರಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ಸೇತುವೆಯಿಂದಾಗಿ ಹರೇಕಳ, ಕೊಣಾಜೆ ಭಾಗದ ನಿವಾಸಿಗಳು ತೊಕ್ಕೊಟ್ಟು, ಉಳ್ಳಾಲ ಸೇತುವೆ, ಜಪ್ಪಿನಮೊಗರು ಮೂಲಕ ಮಂಗಳೂರಿಗೆ ಬರಬೇಕಾದ ಪ್ರಮೇಯ ಇಲ್ಲ. ಹರೇಕಳ ಸೇತುವೆಯ ಮೂಲಕ ಬಂದಲ್ಲಿ ಕಡಿಮೆ ಸಮಯದಲ್ಲಿ ನೇರವಾಗಿ ಮಂಗಳೂರು ತಲುಪಬಹುದು. ಹಾಗೆಯೇ ತುರ್ತಾಗಿ ಪಡೀಲ್, ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಯಿಂದ ಸೇತುವೆ ಮೂಲಕ ದೇರಳಕಟ್ಟೆ ತಲುಪಬಹುದು. ಬಸ್, ಲಾರಿ, ಟೆಂಪೋ ಹೊರತುಪಡಿಸಿ ಇತರೆಲ್ಲ ಕಾರು, ಆಟೋ ಮತ್ತಿತರ ಲಘು ವಾಹನಗಳು ಸಂಚಾರ ನಡೆಸಬಹುದು.
Though officials had come to the bridge on Monday with ash gourd to open it for commuting, they did not do the same due to election code of conduct. Harekala DYFI unit, which got frustrated over these developments, had submitted an appeal to DC on Monday. On the morning of Tuesday, DYFI activists along with general public, threw the gates that were kept as block to the bridge and made the bridge open for vehicle movement.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm