ಬ್ರೇಕಿಂಗ್ ನ್ಯೂಸ್
10-04-23 09:47 pm Mangalore Correspondent ಕರಾವಳಿ
ಸುಳ್ಯ, ಎ.10: ಸುಳ್ಯ ಕ್ಷೇತ್ರದ ಆರು ಬಾರಿಯ ಬಿಜೆಪಿ ಶಾಸಕ ಎಸ್.ಅಂಗಾರ ಅವರನ್ನು ಈ ಬಾರಿ ಬದಲಿಸಬೇಕು ಎನ್ನುವ ಆಗ್ರಹ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇದೀಗ ಅಂಗಾರ ಅವರ ಹುಟ್ಟೂರಿನಲ್ಲೇ ಮತದಾನದ ಬಹಿಷ್ಕಾರದ ಬ್ಯಾನರ್ ಕಂಡುಬಂದಿದೆ. ಅರಂತೋಡು ಗ್ರಾಮದ ಅರಮನೆಗಯ ಮತ್ತಿತರ ಆಸುಪಾಸಿನ ಪರಿಶಿಷ್ಟ ಜಾತಿಯ ಕೇರಿಗಳಲ್ಲೇ ಮತದಾನ ಬಹಿಷ್ಕರಿಸುವುದಾಗಿ ಹೇಳಿ ಮನೆ ಮನೆಗಳಲ್ಲಿ ಬ್ಯಾನರ್, ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.
ಅರಮನೆಗಯ ಅನ್ನುವ ಪ್ರದೇಶ ಅಂಗಾರ ಅವರ ಸ್ವಂತ ಊರು. ಆದರೆ, ಈ ಊರಿನಲ್ಲೇ ನಡುವೆ ಹರಿಯುವ ಹೊಳೆಗೆ ಸೇತುವೆ ಇಲ್ಲ. ಅಲ್ಲೊಂದು ಸೇತುವೆ ಆಗಬೇಕೆಂದು ಪರಿಸರದ ನಿವಾಸಿಗಳು 30 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ. ಆದರೂ ಕ್ಷೇತ್ರದ ನಾಯಕರು ಎನಿಸಿಕೊಂಡವರು ಜನರಿಗೆ ಭರವಸೆ ನೀಡಿದ್ದು ಬಿಟ್ಟರೆ, ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಆಸುಪಾಸಿನ ಜನರು ಪ್ರತಿ ವರ್ಷ ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಾರೆ. ಇಲ್ಲಿಂದ ಅರಂತೋಡು ಪೇಟೆಗೆ ಸಾಗಲು 5 ಕಿಮೀ ಸುತ್ತು ಬಳಸಿ ಹೋಗಬೇಕು. ಹೊಳೆಯನ್ನು ದಾಟಲಾಗದೇ ಜನರು, ಶಾಲೆಗೆ ಹೋಗುವ ಮಕ್ಕಳು ಪರಿತಪಿಸುವ ಸ್ಥಿತಿ ಇದೆ.




ಹೊಳೆಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಅಲ್ಲಿನ ಜನರೇ ಮಾಡಿಕೊಂಡಿರುವ ಅಡಿಕೆ ಮರದ ಸಲಾಕೆಯ ಸೇತುವೆಯಲ್ಲಿ ಜನರು ನೇತಾಡಿಕೊಂಡು ಹೋಗುವುದು, ರಭಸಕ್ಕೆ ಹರಿವ ನೀರಿನ ಮೇಲಿನಿಂದ ಸರ್ಕಸ್ ಮಾಡೋದು ಮಾಮೂಲಿ ಅನ್ನುವಂತಾಗಿದೆ. ಇದೀಗ ಚುನಾವಣೆ ಸಂದರ್ಭದಲ್ಲಿಯೇ ಕ್ಷೇತ್ರದ ಆರು ಬಾರಿಯ ಶಾಸಕ ಎಸ್. ಅಂಗಾರ ಅವರ ಕಿವಿಗೆ ಅಪ್ಪಳಿಸುವ ರೀತಿ ಮನೆ ಮನೆಯಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಬೇಡಿಕೆ ಈಡೇರದ ಕಾರಣ ಬೇಸತ್ತ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಅರಮನೆಗಯದ ಸೇತುವೆ ಬೇಡಿಕೆ ಈಡೇರುವ ತನಕ ಮುಂದಿನೆಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಭಿತ್ತಿಪತ್ರದಲ್ಲಿ ಬರೆದು ಮನೆಯ ಮುಂದೆ ಅಂಟಿಸಿದ್ದಾರೆ. ಚುನಾವಣೆ ವೇಳೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಈ ರೀತಿಯ ಪತ್ರಗಳು ಅಣಕಿಸಲಿವೆ. ಇದೇ ವೇಳೆಗೆ, ಮತದಾನಕ್ಕೆ ಪ್ರೇರಣೆ ನೀಡುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲಿನ ನಿವಾಸಿಗಳನ್ನು ಹೇಗೆ ಮನವರಿಕೆ ಮಾಡುತ್ತಾರೆ ಅನ್ನುವುದು ಕುತೂಹಲ ಮೂಡಿದೆ.
The residents of Aramanegaya and surrounding villages have decided to boycott the upcoming legislative assembly elections due to the lack of a bridge to cross the rivulet in Aranthodu village, Sullia Taluk. The village, which is represented by six-time MLA and minister S Angara, has been demanding a bridge for over 30 years.
01-04-26 12:28 pm
HK News Staffer
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
01-04-26 12:46 pm
HK News Staffer
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm