ಬ್ರೇಕಿಂಗ್ ನ್ಯೂಸ್
12-04-23 11:55 am Udupi Correspondent ಕರಾವಳಿ
ಉಡುಪಿ, ಎ.12: ಪಕ್ಷ ನಡೆಸಿಕೊಂಡ ರೀತಿ ಬಗ್ಗೆ ನನಗೆ ಬೇಸರ ಇದೆ. ಸೌಜನ್ಯಕ್ಕೂ ಯಾವುದೇ ನಾಯಕರು ಕರೆ ಮಾಡಿಲ್ಲ. ನನ್ನ ಅಭಿಪ್ರಾಯ ಕೇಳಿಲ್ಲ. ಅಮಿತ್ ಷಾ ಬೇಡ, ಜಿಲ್ಲಾಧ್ಯಕ್ಷರು ಹೇಳುತ್ತಿದ್ದರೂ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ನೋವು ಹೇಳಿಕೊಂಡಿದ್ದಾರೆ.
ಉಡುಪಿ ಕ್ಷೇತ್ರದಲ್ಲಿ ತನಗೆ ಟಿಕೆಟ್ ಮಿಸ್ ಆಗಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಭಟ್, ತನಗೆ ಯಾಕೆ ಟಿಕೆಟ್ ತಪ್ಪಿದೆ ಎಂಬ ಬಗ್ಗೆ ಕಾರಣ ಕೊಟ್ಟಿಲ್ಲ. ಟಿಕೆಟ್ ಸಿಗುವ ಭರವಸೆ ಹೊಂದಿದ್ದೆ. ಜಾತಿಯ ಕಾರಣಕ್ಕೆ ಟಿಕೆಟ್ ತಪ್ಪಿರಬಹುದು. ಆದರೆ ನಾಯಕರು ನನ್ನನ್ನು ಈ ರೀತಿ ನಡೆಸಿಕೊಂಡದ್ದು ಬೇಸರ ತಂದಿದೆ. ಜಿಲ್ಲಾಧ್ಯಕ್ಷ ಒಂದು ಮಾತು ಹೇಳುತ್ತಿದ್ದರೂ, ನಿವೃತ್ತಿ ಹೇಳ್ತಾ ಇದ್ದೆ. ದಿಢೀರ್ ಆಗಿ ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ಉಡುಪಿಯಲ್ಲಿ ಯಾರು ನಿಂತರೂ ಗೆಲ್ಲುವಷ್ಟರ ಮಟ್ಟಿಗೆ ಕ್ಷೇತ್ರವನ್ನು ತಂದು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಬೇರೆ ಪಕ್ಷಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ಬೇರೆ ಪಕ್ಷಕ್ಕೆ ಹೋಗಲ್ಲ. ಆದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಆಪ್ತರ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ. ಪಕ್ಷ ಈ ರೀತಿ ಮಾಡಿದ್ದು ನನಗೆ ನೋವು ತರಿಸಿದೆ ಎಂದಿದ್ದಾರೆ. ಉಡುಪಿಯಲ್ಲಿ ಹಾಲಿ ಶಾಸಕ ರಘುಪತಿ ಭಟ್ ಬದಲು ಮೀನುಗಾರ ಸಮುದಾಯದ ಯಶಪಾಲ್ ಸುವರ್ಣಗೆ ಟಿಕೆಟ್ ನೀಡಲಾಗಿದೆ. ಕುಂದಾಪುರದಲ್ಲಿ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಟಿಕೆಟ್ ಪಡೆದಲ್ಲಿ ರಘುಪತಿ ಭಟ್ ಸ್ಥಾನ ಕಳಕೊಳ್ಳುತ್ತಾರೆ ಎಂಬ ವದಂತಿ ಈ ಹಿಂದೆಯೇ ಹರಡಿತ್ತು.
Udupi MLA Raghupati Bhat disappointed after BJP announce udupi ticket to Yashpal Suvarna says i would have rather resigned from party.Following the announcement of BJP candidates for Udupi and other constituencies in the state, sources close to Bhat say that he may consider contesting the upcoming assembly election as an independent candidate.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm