ಬ್ರೇಕಿಂಗ್ ನ್ಯೂಸ್
15-04-23 12:15 pm Mangalore Correspondent ಕರಾವಳಿ
ಸುಳ್ಯ, ಎ.15: ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ವಿರುದ್ಧ ಕಾರ್ಯಕರ್ತರ ಬಂಡಾಯ ಅತಿರೇಕಕ್ಕೆ ಮುಟ್ಟಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯಪ್ರವೇಶ ಮಾಡಿದ್ದಾರೆ. ಇದಲ್ಲದೆ, ಕಾರ್ಯಕರ್ತರ ವಿರೋಧ ಹಿನ್ನೆಲೆಯಲ್ಲಿ ಘೋಷಿತ ಅಭ್ಯರ್ಥಿಗೆ ಬಿ ಫಾರಂ ಹಂಚಿಕೆಯನ್ನು ಡಿಕೆಶಿ ಮುಂದೂಡಿದ್ದಾರೆ.
ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಕೃಷ್ಣಪ್ಪ ಜಿಗಣಿ ವಿರುದ್ಧ ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರೇ ಬಂಡಾಯ ಸಾರಿದ್ದಾರೆ. ಟಿಕೆಟ್ ವಂಚಿತ ಎಚ್.ಎಂ. ನಂದಕುಮಾರ್ ಅವರನ್ನು ಪಕ್ಷೇತರ ಕಣಕ್ಕಿಳಿಸಲು ಮುಂದಾಗಿದ್ದರು. ಬಿ ಫಾರಂ ಸಿಗದಿದ್ದರೂ ಕಾಂಗ್ರೆಸ್ ಪಕ್ಷದಿಂದಲೇ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದರು. ಈ ಬಗ್ಗೆ ಸುಳ್ಯದ ಕಾಂಗ್ರೆಸ್ ಮುಖಂಡರು ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.
ಸಾವಿರಾರು ಅಭಿಮಾನಿಗಳು ಸೇರಿ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ಪಕ್ಷ ಮುಜುಗರ ಅನುಭವಿಸುವುದನ್ನು ತಪ್ಪಿಸಲು ಡಿಕೆಶಿ ಕ್ಷೇತ್ರದಲ್ಲಿ ಪಕ್ಷದ ಗೊಂದಲ ನಿವಾರಣೆಗೆ ಸಭೆ ನಡೆಸಿ ವರದಿ ನೀಡುವಂತೆ ಮಾಜಿ ಸಚಿವ ಬಿ. ರಮಾನಾಥ ರೈಗೆ ಸೂಚನೆ ನೀಡಿದ್ದಾರೆ. ಬಂಡಾಯ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಿಂತ ನಂದಕುಮಾರ್ ಅವರೇ ಪ್ರಭಾವಿ ಅಭ್ಯರ್ಥಿ ಆಗುತ್ತಿದ್ದರು. ಹೀಗಾಗಿ ಪಕ್ಷಕ್ಕೆ ಆಗುವ ಡ್ಯಾಮೇಜ್ ತಪ್ಪಿಸಲು ಕಾಂಗ್ರೆಸ್ ನಾಯಕರ ವರದಿ ಬರುವವರೆಗೆ ಘೋಷಿತ ಅಭ್ಯರ್ಥಿ ಕೃಷ್ಣಪ್ಪಗೆ ಬಿ ಫಾರಂ ನೀಡದಿರಲು ಡಿಕೆಶಿ ನಿರ್ಧರಿಸಿದ್ದಾರೆ.
ಸುಳ್ಯದಲ್ಲಿ ಯಾರ ಪರ ಒಲವಿದೆ, ಯಾರು ಸ್ಪರ್ಧಿಸಿದಲ್ಲಿ ಗೆಲುವು ಸಾಧ್ಯ ಎನ್ನುವ ಬಗ್ಗೆ ಮತ್ತೊಮ್ಮೆ ಕಾರ್ಯಕರ್ತರ ಅಭಿಪ್ರಾಯ ಪಡೆದು ವರದಿ ಸಲ್ಲಿಕೆಗೆ ಡಿಕೆಶಿ ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಜಿಗಣಿ ಕೃಷ್ಣಪ್ಪ, ಅದೇ ಆಧಾರದಲ್ಲಿ ಟಿಕೆಟ್ ಪಡೆದಿದ್ದರು ಎನ್ನಲಾಗಿದೆ. ಆದರೆ ಮಡಿಕೇರಿ ಮೂಲದ ನಂದಕುಮಾರ್ ಸುಳ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಳಮಟ್ಟದಲ್ಲಿ ಕೆಲಸ ಮಾಡಿದ್ದ ಡಿಕೆಶಿ ಮೂಲಕ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದರು. ಟಿಕೆಟ್ ದೊರೆಯದ ಕಾರಣ ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರೇ ಬಂಡಾಯ ಎದ್ದಿದ್ದರು. ನಮ್ಮ ಅಭ್ಯರ್ಥಿ ನಂದಕುಮಾರ್ ಎಂದು ಬಹಿರಂಗ ಸಮಾವೇಶ ನಡೆಸಿದ್ದರು.
ಸಾಮಾನ್ಯವಾಗಿ ಕಾಂಗ್ರೆಸ್ ಸಭೆಯಲ್ಲಿ ಸುಳ್ಯದಲ್ಲಿ ನೂರಾರು ಕಾರ್ಯಕರ್ತರು ಸೇರುತ್ತಿದ್ದರೆ, ಈ ಬಾರಿ ಬಂಡಾಯದ ಸಭೆಯಲ್ಲಿ ನಂದಕುಮಾರ್ ಪರವಾಗಿ ಸಾವಿರಾರು ಕಾರ್ಯಕರ್ತರು ತೊಡೆ ತಟ್ಟಿದ್ದರು. ಇದರಿಂದಾಗಿ ಸುಳ್ಯ ಕಾಂಗ್ರೆಸ್ ಘಟಕವೇ ಒಡೆದ ಮನೆಯಾಗಿತ್ತು. ಕೃಷ್ಣಪ್ಪ ಪ್ರಚಾರ ಆರಂಭಿಸಿದ್ದರೂ ಅವರ ಪರವಾಗಿ ಬೆರಳೆಣಿಕೆ ಮಂದಿಯಷ್ಟೇ ಜೊತೆಗಿದ್ದರು. ಇದೀಗ ರಮಾನಾಥ ರೈ ಮೂಲಕ ಅಭಿಪ್ರಾಯ ಸಂಗ್ರಹ ಮತ್ತು ವರದಿ ಸಲ್ಲಿಕೆಗೆ ಸೂಚನೆ ನೀಡಿರುವುದರಿಂದ ಯಥಾವತ್ ವರದಿ ಸಲ್ಲಿಕೆಯಾದಲ್ಲಿ ನಂದಕುಮಾರ್ ಟಿಕೆಟ್ ಗಿಟ್ಟಿಸುವ ಸಾಧ್ಯತೆ ಇದೆ.
Nandakumar vs Krishnappa Congress fight in sullia, Dk Shivakumar intervenes, mostly Nandakumar to get ticket. The dissidence in the Sullia unit of the Congress over the allocation of party ticket has refused to die down, with H.M. Nandakumar, a member of the Karnataka Pradesh Congress Committee (KPCC) and a rebel, deciding to file his nomination papers as an Independent candidate on April 15.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm