ಬ್ರೇಕಿಂಗ್ ನ್ಯೂಸ್
18-05-23 11:53 am Mangalore Correspondent ಕರಾವಳಿ
ಪುತ್ತೂರು, ಮೇ 18: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಸೇರಿದಂತೆ ಮೂವರು ಪೊಲೀಸರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ, ಗ್ರಾಮಾಂತರ ಸಂಪ್ಯ ಠಾಣೆ ಎಸ್ಐ ಶ್ರೀನಾಥ ರೆಡ್ಡಿ ಮತ್ತು ಇನ್ನೊಬ್ಬ ಸಿಬಂದಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಏಳು ಮಂದಿ ಕಾರ್ಯಕರ್ತರ ಮೇಲೆ ಪೊಲೀಸರು ಯತ್ವಾತದ್ವಾ ಥಳಿಸಿ, ಹಲ್ಲೆ ನಡೆಸಿದ್ದರು. ತೀವ್ರ ಹಲ್ಲೆಗೊಳಗಾದ ಅವಿನಾಶ್ ಮತ್ತು ಗುರುಪ್ರಸಾದ್ ಎಂಬವರು ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸ್ಥಳದಿಂದಲೇ ಎಸ್ಪಿ ವಿಕ್ರಂ ಅಮಟೆ ಅವರಿಗೆ ಫೋನಾಯಿಸಿ ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದರು. ಪೊಲೀಸರ ವಿರುದ್ಧ ಕ್ರಮ ಜರುಗಿಸದಿದ್ದರೆ, ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು. ಅವರೊಂದಿಗೆ ಅರುಣ್ ಪುತ್ತಿಲ ಮತ್ತಿತರರು ಕೂಡ ಜೊತೆಗಿದ್ದರು.
ಅರುಣ್ ಪುತ್ತಿಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ರೀತಿಯ ದೌರ್ಜನ್ಯ ಸಹಿಸುವಂತಿಲ್ಲ. ಕಾಂಗ್ರೆಸ್ ಸರಕಾರ ಬಂತೆಂದು ಪೊಲೀಸರು ಈ ರೀತಿ ವರ್ತಿಸಿದರೆ, ಹಿಂದು ಸಮಾಜ ಸುಮ್ಮನುಳಿಯಲ್ಲ. ಯಾರು ತಪ್ಪು ಮಾಡಿದ್ದಾರೋ, ಅಂಥವರ ವಿರುದ್ಧ ಕ್ರಮ ಜರುಗಿಸಬೇಕು. ಚಪ್ಪಲಿ ಹಾರ ಹಾಕಿದ ನೆಪದಲ್ಲಿ ಕಾರ್ಯಕರ್ತರನ್ನು ಪೊಲೀಸರ ಮೂಲಕ ತುಳಿಯುವುದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದ್ದಾರೆ.
ಅಮಾನತು ಮಾಡುತ್ತೇವೆ- ಎಸ್ಪಿ ಹೇಳಿಕೆ
ಇಂದು ಬೆಳಗ್ಗೆಯೇ ಎಸ್ಪಿ ವಿಕ್ರಂ ಅಮಟೆ ಪುತ್ತೂರಿಗೆ ಬಂದಿದ್ದು, ತನಿಖೆಯ ನೇತೃತ್ವ ವಹಿಸಿದ್ದಾರೆ. ಎಎಸ್ಪಿ ಧರ್ಮಪ್ಪ ಅವರು ಆರೋಪಕ್ಕೀಡಾದ ಡಿವೈಎಸ್ಪಿ ವೀರಯ್ಯ ಹಿರೇಮಠ, ಸಂಪ್ಯ ಎಸ್ಐ ಶ್ರೀನಾಥ ರೆಡ್ಡಿ ಮತ್ತಿತರರನ್ನು ಸಂಚಾರಿ ಠಾಣೆಯಲ್ಲಿರಿಸಿ ಇಲಾಖಾ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಪ್ರತಿಕ್ರಿಯೆ ನೀಡಿರುವ ಎಸ್ಪಿ ವಿಕ್ರಂ ಅಮಟೆ, ಇಲಾಖಾ ತನಿಖೆ ನಡೆಸುತ್ತಿದ್ದೇವೆ, ತಪ್ಪು ಕಂಡುಬಂದಲ್ಲಿ ಅಮಾನತು ಮಾಡುತ್ತೇವೆ. ಅವಿನಾಶ್ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲು ಮಾಡಿದ್ದೇವೆ. ಡಿವೈಎಸ್ಪಿ ಸೇರಿ ಮೂವರ ಹೆಸರನ್ನು ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ಅರುಣಣ್ಣ ಬರದಿರುತ್ತಿದ್ದರೆ ಸಾಯಿಸುತ್ತಿದ್ದರು !
ಹಲ್ಲೆಗೊಳಗಾದ ಅವಿನಾಶ್ ಹೇಳಿಕೆ ನೀಡಿದ್ದು, ನಮ್ಮನ್ನು ಡಿವೈಎಸ್ಪಿ ಕಚೇರಿಗೆ ಒಯ್ದು ಹಲ್ಲೆ ನಡೆಸಿದ್ದಾರೆ, ನಾವು ಅಲ್ಲ ಎಂದು ಹೇಳಿದರೂ, ಒಪ್ಪಿಕೊಳ್ಳುವಂತೆ ಹೇಳಿ ನಮ್ಮ ಬಟ್ಟೆ ತೆಗದು ಕಾಲನ್ನು ತುಳಿದು ಒತ್ತಿ ಇಟ್ಟು ತೊಡೆಯ ಭಾಗಕ್ಕೆ, ಕಾಲಿನ ಅಡಿ ಭಾಗಕ್ಕೆ ಹೊಡೆದಿದ್ದಾರೆ. ಉಳಿದವರು ಹೊಟ್ಟೆಯ ಭಾಗಕ್ಕೆ ತುಳಿಯುತ್ತಿದ್ದರು. ತಲೆ, ಕೆನ್ನೆಯ ಭಾಗಕ್ಕೆ ಹೊಡೆದಿದ್ದಾರೆ. ಡಿವೈಎಸ್ಪಿ ಮತ್ತು ಸಂಪ್ಯ ಎಸ್ಐ ಅವರೇ ಹೆಚ್ಚು ಹಲ್ಲೆ ನಡೆಸಿದ್ದು. ರಾತ್ರಿ ವೇಳೆ ಅರುಣಣ್ಣ ಠಾಣೆಗೆ ಬರದೇ ಇರುತ್ತಿದ್ದರೆ ನಮ್ಮನ್ನು ಹೊಡೆದು ಸಾಯಿಸುತ್ತಿದ್ದರು. ಲಾಕಪ್ ಡೆತ್ ಅಂತ ತೋರಿಸುತ್ತಿದ್ದರು. 200-300 ಕರೆ ಬರ್ತಾ ಇದೆ, ಊಟ ಮಾಡೋದಕ್ಕು ಪುರುಸೊತ್ತು ಇಲ್ಲ. ನೀವು ಚಪ್ಪಲಿ ಹಾರ ಹಾಕಿದ್ದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ ಗೊತ್ತಾ ಎಂದು ಹೇಳಿ ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ. ಸೋಮವಾರ ರಾತ್ರಿ ಅರುಣ್ ಪುತ್ತಿಲ ಠಾಣೆಗೆ ತೆರಳಿ, ಕಾರ್ಯಕರ್ತರನ್ನು ಬಿಡಿಸಿ ಕರೆತಂದಿದ್ದರು.
Footwear on BJP Banner in Puttur, FIR registered on DYSP puttur for third degree torture to the seven arrested. SP had alos ordered for Inquiry. MLA Harish Poonja visited the victims in the hospital last night. FIR has been registered against Puttur Police station staffs for thier brutal act.
18-04-25 03:38 pm
HK News Desk
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
18-04-25 03:41 pm
Bangalore Correspondent
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm