ಮತ್ತೇ ಬಂದ್ ಆಗುತ್ತಾ ಚಾರ್ಮಾಡಿ ಘಾಟ್ !!

05-08-20 02:57 pm       Mangalore Reporter   ಕರಾವಳಿ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿಯುತ್ತಿದೆ. ಘಾಟ್ ನ 2 ಮತ್ತು 3 ನೇ ತಿರುವಿನಲ್ಲಿ ಬಂಡೆಕಲ್ಲು ಕುಸಿದ ಪರಿಣಾಮ ವಾಹನ ಸಂಚಾರಕ್ಕೆ  ವ್ಯತ್ಯಯ ಉಂಟಾಗಿದೆ.

ಬೆಳ್ತಂಗಡಿ ಆಗಸ್ಟ್ 05: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿಯುತ್ತಿದೆ. ಘಾಟ್ ನ 2 ಮತ್ತು 3 ನೇ ತಿರುವಿನಲ್ಲಿ ಬಂಡೆಕಲ್ಲು ಕುಸಿದ ಪರಿಣಾಮ ವಾಹನ ಸಂಚಾರಕ್ಕೆ  ವ್ಯತ್ಯಯ ಉಂಟಾಗಿದೆ.

ಕಳೆದ ಮೂರು‌ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯ ಎರಡು ಮತ್ತು ಮೂರನೇ ತಿರುವುಗಳ ಮಧ್ಯೆ ಭೂಕುಸಿತ ಆಗಿದ್ದು ರಸ್ತೆ  ಮೇಲೆ‌‌ಯೇ‌ ಬಂಡೆಕಲ್ಲೊಂದು ಬಂದುಬಿದ್ದಿದೆ.

ಇದರಿಂದಾಗಿ ಕೆಲಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು  ಕಲ್ಲನ್ನು ಅಲ್ಪ ಬದಿಗೆ ಸರಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂದರ್ಭದಲ್ಲಿ 100 ಕ್ಕಿಂತಲೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಚಲಿಸಲಾರದೇ ಸಿಲುಕಿಕೊಂಡಿದ್ದವು.

ರಾತ್ರಿ7 ಗಂಟೆಯ ನಂತರ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಆದೇಶ ಜಾರಿಯಲ್ಲಿದೆ. ಇದೇ ರೀತಿ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಘಾಟ್ ರಸ್ತೆಯನ್ನು ಮುಚ್ಚುವ ಸನ್ನಿವೇಶ ಸೃಷ್ಠಿಯಾಗಲಿದೆ.