ಬ್ರೇಕಿಂಗ್ ನ್ಯೂಸ್
14-06-23 11:58 am Mangalore Correspondent ಕರಾವಳಿ
ಉಳ್ಳಾಲ, ಜೂ.14: ವಾರದ ಹಿಂದೆ ಕುಂಪಲದಲ್ಲಿ ಯುವತಿಯೋರ್ವಳು ತನ್ನ ಹೊಸ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದು ತಲ್ಲಣ ಮೂಡಿಸಿತ್ತು. ಇದೀಗ ವಾರ ಕಳೆಯುವಷ್ಟರಲ್ಲೇ ಇದೇ ಪ್ರದೇಶದ ಮತ್ತೋರ್ವ ಅವಿವಾಹಿತ ಯುವಕ ಕಿನ್ನಿಗೋಳಿಯ ಅಕ್ಕನ ಮನೆಗೆ ತೆರಳಿದ್ದ ವೇಳೆ ಅಕಾಲಿಕ ಸಾವಿಗೀಡಾಗಿದ್ದು ಕುಂಪಲದ ನಿವಾಸಿಗಳನ್ನ ಆತಂಕಕ್ಕೀಡು ಮಾಡಿದೆ. ಕುಂಪಲದ ಸರಣಿ ಸಾವಿಗೆ ಯಾವುದೋ ಅತಿಮಾನುಷ ಶಕ್ತಿ ಕಾರಣವೆಂದು ಹೇಳಲಾಗುತ್ತಿದೆ.
ಕುಂಪಲ ವಿದ್ಯಾನಗರ ನಿವಾಸಿ ಚಂದ್ರಕಾಂತ್(42) ಯಾನೆ ಸಂತು ಮೃತ ವ್ಯಕ್ತಿ. ಚಂದ್ರಕಾಂತ್ ಅವರು ಸ್ಟಿಕ್ಕರ್ ಕಟ್ಟಿಂಗ್, ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದು ತಾಯಿಯೊಂದಿಗೆ ವಿದ್ಯಾನಗರದಲ್ಲಿ ನೆಲೆಸಿದ್ದರು. ಮೂರು ತಿಂಗಳ ಹಿಂದಷ್ಟೆ ಚಂದ್ರಕಾಂತ್ ಅವರ ಭಾವ (ಅಕ್ಕನ ಗಂಡ) ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ್ದರು. ಭಾವನ ಸಾವಿನಿಂದ ಚಂದ್ರಕಾಂತ್ ಅವರು ತೀವ್ರವಾಗಿ ಮನನೊಂದು ಖಿನ್ನತೆಗೊಳಗಾಗಿದ್ದರು.
ಎರಡು ದಿನಗಳ ಹಿಂದೆ ತಾಯಿಯೊಂದಿಗೆ ಚಂದ್ರಕಾಂತ್ ಕಿನ್ನಿಗೋಳಿಯ ಅಕ್ಕನ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ನಿದ್ದೆಯಿಂದ ಎದ್ದ ಅವರು ಚಾಪೆಯನ್ನೂ ಮಡಚದೆ ಬರ್ಮುಡಾದಲ್ಲಿ ತೆರಳಿ ನಾಪತ್ತೆಯಾಗಿದ್ದರು. ಮನೆ ಮಂದಿ ಊರವರು ಸೇರಿ ಹುಡುಕಿದರೂ ಚಂದ್ರಕಾಂತ್ ಸುಳಿವಿರಲಿಲ್ಲ. ಮಂಗಳವಾರ ಮಧ್ಯಾಹ್ನ ವೇಳೆ ಕಿನ್ನಿಗೋಳಿಯ ಹೊಸಕಾವೇರಿಯ ಕಪ್ಪು ಕಲ್ಲಿನ ಕ್ವಾರಿಯ ನೀರಲ್ಲಿ ಚಂದ್ರಕಾಂತ್ ಮೃತದೇಹ ದೊರಕಿದೆ. ಹಳೆಯ ಕ್ವಾರಿಗೆ ಯಾರೂ ತೆರಳದಂತೆ ಸುತ್ತಲು ಬೇಲಿ ಹಾಕಿದ್ದರೂ ಅದನ್ನ ಹಾರಿ ಒಳನುಗ್ಗಿದ ಚಂದ್ರಕಾಂತ್ ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ.
ಸರಣಿ ಸಾವಿನ ಹಿಂದೆ ಬ್ರಹ್ಮರಾಕ್ಷಸನ ಕರಿಛಾಯೆ ?
ಜೂನ್ 8ರಂದು ಕುಂಪಲದ ಚಿತ್ರಾಂಜಲಿ ನಗರದಲ್ಲಿ ನೂತನ ಮನೆ ಖರೀದಿಸಿದ್ದ ಅಶ್ವಿನಿ ಬಂಗೇರ(25) ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಳು. ಸ್ನೇಹಿತೆಯಿಂದಲೇ ಲೋನ್ ಇದ್ದ ಮನೆ ಖರೀದಿಸಿ ಮೋಸ ಹೋದೆ ಎಂಬ ಕ್ಷುಲ್ಲಕ ಕಾರಣಕ್ಕೆ ಯುವತಿ ಸಾವಿಗೆ ಶರಣಾಗಿದ್ದಳು. ಎರಡು ವರ್ಷಗಳ ಕುಂಪಲದಲ್ಲಿ ನಿಗೂಢ ಸಾವನ್ನಪ್ಪಿದ್ದ ರೂಪದರ್ಶಿ ಪ್ರೇಕ್ಷಾ ಸಾವಿನ ನಂತರ ಈ ಪ್ರದೇಶದಲ್ಲಿ ಅನೇಕ ಅಕಾಲಿಕ ಸಾವುಗಳು ನಡೆದಿವೆ. ಹದಿಹರೆಯದ ಯುವಕ, ಯುವತಿಯರು ಆತ್ಮಹತ್ಯೆಗೈಯುತ್ತಿದ್ದು, ಇನ್ನು ಕೆಲವರು ಅಪಘಾತ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕುಂಪಲ ಪ್ರದೇಶದಲ್ಲಿ ಬ್ರಹ್ಮರಾಕ್ಷಸನ ಛಾಯೆ ಇರುವುದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅಮಾನುಷ ಶಕ್ತಿಯ ನಿರ್ಮೂಲನೆಗಾಗಿ ಚಿತ್ರಾಂಜಲಿ ನಗರದಲ್ಲಿ ಶಕ್ತಿ ದೇವತೆಯ ಕ್ಷೇತ್ರವನ್ನ ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.
Kumpala Missing Mans body found in Stone Quarry at Kinnigoli in Mangalore, rise of suicide increase in Kumpala. Recently a young girl committeed suicide just days after the inauguration of the new house.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm