ಬ್ರೇಕಿಂಗ್ ನ್ಯೂಸ್
15-06-23 09:03 pm Mangalore Correspondent ಕರಾವಳಿ
ಮಂಗಳೂರು, ಜೂನ್ 15: ಅತ್ತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಇತ್ತ ಸಂಸದ ಸ್ಥಾನಕ್ಕೂ ಕುತ್ತು ಬಂದಿದೆ ಎನ್ನುವಾಗ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಮತ್ತೆ ರಾಜಯೋಗ ಪಡೆಯುವುದಕ್ಕಾಗಿ ಯಾಗದ ಮೊರೆ ಹೋಗಿದ್ದಾರೆ. ನಳಿನ್ ಕುಮಾರ್ ಅವರ ಪುತ್ತೂರು ತಾಲೂಕಿನ ಸವಣೂರು ಬಳಿಯ ಕುಂಜಾಡಿ ಎಂಬಲ್ಲಿನ ತರವಾಡು ಮನೆ ಆವರಣದಲ್ಲಿ ಹೊಸತಾಗಿ ಕಟ್ಟಿಸಿರುವ ಐಷಾರಾಮಿ ಬಂಗಲೆಯಲ್ಲಿ ವಿಶೇಷ ಯಾಗ ಒಂದನ್ನು ಮಾಡುತ್ತಿದ್ದಾರೆ.
ಜೂನ್ 11ರಿಂದ ಆರಂಭಿಸಿ 18ರ ವರೆಗೆ ಈ ಯಾಗ ನಡೆಯಲಿದೆ ಎನ್ನಲಾಗುತ್ತಿದ್ದು, ವಿದ್ವಾನ್ ಬಾಲಕೃಷ್ಣ ಆಚಾರ್ಯ ಎಂಬವರು ನೇತೃತ್ವ ವಹಿಸಿದ್ದಾರೆಂದು ಪುತ್ತೂರಿನ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಯಾಗ ನಡೆಯುತ್ತಿರುವ ಜಾಗಕ್ಕೆ ಹೊರಗಿನ ವ್ಯಕ್ತಿಗಳು ಪ್ರವೇಶ ಮಾಡದಂತೆ ಪೂರ್ತಿಯಾಗಿ ಬಂದೋಬಸ್ತ್ ಮಾಡಲಾಗಿದೆ. ಬಂಗಲೆಯ ಬಳಿ ಐದಾರು ಐಷಾರಾಮಿ ಕಾರುಗಳು ನಿಂತಿದ್ದು, ನಳಿನ್ ಕುಮಾರ್ ಆಪ್ತರು ಮಾತ್ರ ಜೊತೆಗಿದ್ದಾರೆ. 20ಕ್ಕೂ ಹೆಚ್ಚು ಬ್ರಾಹ್ಮಣರು ಸೇರಿಕೊಂಡು ಈ ಯಾಗ ನಡೆಸುತ್ತಿದ್ದಾರೆ. ಆದರೆ ಯಾಗದ ಹೆಸರೇನು, ಇದರ ಉದ್ದೇಶ ಏನೆಂಬುದು ತಿಳಿದುಬಂದಿಲ್ಲ.
ನಳಿನ್ ಕುಮಾರ್ ಹಿಂದೆ ಸಂಸದರಾಗಿ ಆಯ್ಕೆಯಾಗೋದಕ್ಕೂ ಮೊದಲು 2008ರಲ್ಲಿ ಪಾವಂಜೆಯಲ್ಲಿ ಸೌತ್ರಾಮಣಿ ಗವಾಮಯನ ಯಾಗ ನಡೆದಿತ್ತು. ಚಿಕ್ಕಮಗಳೂರಿನ ಕೆಎಸ್ ನಿತ್ಯಾನಂದ ನೇತೃತ್ವದಲ್ಲಿ ವಿಶೇಷ ಯಾಗ ನಡೆದಿದ್ದು, ಯಾಗದ ದೀಕ್ಷೆಯನ್ನು ನಳಿನ್ ಕುಮಾರ್ ಪಡೆದಿದ್ದರು. ಅದರ ಪ್ರಕಾರ, ಅವರಿಗೆ ವಿಶೇಷ ರಾಜಯೋಗ ಸಿಕ್ಕಿತ್ತು ಎನ್ನುವ ಮಾತನ್ನು ನಳಿನ್ ಆಪ್ತರು ಹೇಳುತ್ತಿದ್ದರು. ಸಂಸದರಾಗಿ ಕಳಪೆ ಸಾಧನೆ ಮಾಡಿದ್ದರೂ, ಕಳೆದ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನವಿರೋಧ ಎದುರಾಗಿದ್ದರೂ ಪ್ರಧಾನಿ ಮೋದಿ ಹೆಸರಲ್ಲಿ ಗೆಲವು ಸಾಧಿಸಿದ್ದರು. ಆನಂತರ, ರಾಜ್ಯಾಧ್ಯಕ್ಷ ಪದವಿಯೂ ಇವರಿಗೆ ಸಿಕ್ಕಿತ್ತು. ರಾಜ್ಯಾಧ್ಯಕ್ಷ ಹುದ್ದೆಯ ಅವಧಿ 2022ರ ಆಗಸ್ಟ್ ನಲ್ಲಿ ಕೊನೆಗೊಂಡಿದ್ದರೂ, ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದ್ದುದರಿಂದ ಅವರನ್ನೇ ಮುಂದುವರಿಸಲಾಗಿತ್ತು.
ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದ್ದರಿಂದ ಕಾರ್ಯಕರ್ತರು ರಾಜ್ಯಾಧ್ಯಕ್ಷರ ರಾಜಿನಾಮೆಗೆ ಆಗ್ರಹ ಮಾಡಿದ್ದರು. ಸೋಲಿನ ಬಳಿಕ ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆಯಾಗುತ್ತೆ ಎನ್ನುವ ಸುದ್ದಿ ಒಂದು ತಿಂಗಳಿನಿಂದ ಕೇಳಿಬರುತ್ತಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಕುಳಿತಿರುವ ಕೆಲವು ವ್ಯಕ್ತಿಗಳು ನಳಿನ್ ಕುಮಾರ್ ಅವರನ್ನು ಬದಲಿಸುವ ಮನಸ್ಸು ಹೊಂದಿಲ್ಲ. ಹೀಗಾಗಿ ಸ್ಥಾನಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಈ ವಾರಾಂತ್ಯದಲ್ಲಿ ಹೊಸ ಅಧ್ಯಕ್ಷರ ನೇಮಕ ಆಗುತ್ತೆ ಎನ್ನುವ ವದಂತಿ ಹಬ್ಬಿದ್ದರೂ, ಅಧಿಕೃತ ಆಗಿಲ್ಲ. ಬಿಜೆಪಿ ಕೆಲವು ಮೂಲಗಳ ಪ್ರಕಾರ, ನಳಿನ್ ಕುಮಾರ್ ಯಾಗ ಶತ್ರುಸಂಹಾರದ ಗುರಿ ಹೊಂದಿದೆ ಎನ್ನಲಾಗುತ್ತಿದೆ. ವಿರೋಧಿ ಪಡೆಯನ್ನು ಶಕ್ತಿ ಕುಂದಿಸುವ ನಿಟ್ಟಿನಲ್ಲಿ ಮತ್ತು ಮತ್ತೆ ರಾಜಯೋಗ ಪಡೆಯುವುದು ಯಾಗದ ಗುರಿಯಂತೆ.
Mangalore Bjp Nalin Kateel holds special Yaga at Puttur at his new residence, prayers not to loose his President post as the legislative session in July approaching, the BJP is likely to finalise the names for leader of opposition and party state president by the end of this week. The high command is in favour of a Lingayat-Vokkaliga combination for the top posts, party sources said.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm