ಸಿದ್ದರಾಮಯ್ಯ ಹಿಂದು ವಿರೋಧಿ ನೀತಿ, ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ಜನಾಂದೋಲನ ; ಶಾಸಕ ಭರತ್ ಶೆಟ್ಟಿ

15-06-23 10:16 pm       Mangalore Correspondent   ಕರಾವಳಿ

​​​​​​​ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಸಿದ್ದರಾಮಯ್ಯ ಇದೀಗ ಮುಖ್ಯಮಂತ್ರಿ ಪದವಿಗೇರುತ್ತಲೇ ಹಿಂದು ವಿರೋಧಿ ನೀತಿಯನ್ನು ತೋರಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡುವ ಮೂಲಕ ಹಿಂದುಗಳ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ.

ಮಂಗಳೂರು, ಜೂನ್ 15:  ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಸಿದ್ದರಾಮಯ್ಯ ಇದೀಗ ಮುಖ್ಯಮಂತ್ರಿ ಪದವಿಗೇರುತ್ತಲೇ ಹಿಂದು ವಿರೋಧಿ ನೀತಿಯನ್ನು ತೋರಿದ್ದಾರೆ. ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡುವ ಮೂಲಕ ಹಿಂದುಗಳ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ. ಇದಕ್ಕೆದುರಾಗಿ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲನ ಮಾದರಿ ಹೋರಾಟ ನಡೆಸಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭಾರತ್ ಶೆಟ್ಟಿ ಹೇಳಿದ್ದಾರೆ.

Eddelu Karnataka Urges Siddaramaiah Govt to Repeal Unjust Laws, Combat Hate  Politics, Address Inflation/Unemployment | SabrangIndia

ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ನಿರ್ಧಾರಕ್ಕೆ ಬಂದಿರುವುದನ್ನು ವಿರೋಧಿಸಿ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.‌ ಬಿಜೆಪಿ ಸರ್ಕಾರ ಮತಾಂತರ ಹಾವಳಿಯನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಬಹಳಷ್ಟು ವಿರೋಧ ಕೇಳಿಬಂದಿದ್ದರೂ ಲೆಕ್ಕಿಸದೆ, ಹಿಂದೂ ಸಮಾಜದ ರಕ್ಷಣೆಗಾಗಿ ಬಿಜೆಪಿ ಸರಕಾರ ಗಟ್ಟಿ ನಿರ್ಧಾರ ತಳೆದಿತ್ತು. ಇದೀಗ  ಒಂದೆರಡು ಸಮುದಾಯಗಳ ಓಲೈಕೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ

ಕಾಂಗ್ರೆಸ್ ಸರ್ಕಾರ, ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ. ಇದು ಮುಂದೆ ಬೃಹತ್ ಆಂದೋಲನ ಒಂದಕ್ಕೆ ನಾಂದಿ ಹಾಡಿದೆ ಎಂದು ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.

ಲವ್ ಜಿಹಾದ್, ಮತಾಂತರ ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ಕೇರಳವನ್ನ ಕೂಡ ಬಾಧಿಸುತ್ತಿದ್ದು ನೂರಾರು ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದೆ. ಇದರ ನಡುವೆ ಕಾಯಿದೆ ಬಲಪಡಿಸುವ ಬದಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಣಯ ಮತಾಂತರವಾದಿ ಸಂಘಟನೆಗಳಿಗೆ ಹೊಸ ಹುಮ್ಮಸ್ಸು ನೀಡಿದೆ ಎಂದು ಭರತ್ ಶೆಟ್ಟಿ ವೈ ಟೀಕಿಸಿದ್ದಾರೆ.

ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯತೆ, ದೇಶಪ್ರೇಮ ಬಿಂಬಿಸುವ ಪಠ್ಯಕ್ರಮ ಹಿಂಪಡೆದಿರುವುದು ದೇಶದಲ್ಲಿ ಮತ್ತೆ ಮತಾಂಧ ಶಕ್ತಿಗಳು ವಿಜೃಂಭಿಸುವಂತೆ ಮಾಡುವಲ್ಲಿ ಸಂಶಯವಿಲ್ಲ. ಮತದಾರ ಕೇವಲ ಒಂದು ತಿಂಗಳಲ್ಲಿ ಕಾಂಗ್ರೆಸ್  ಸರಕಾರ ಮಾಡುತ್ತಿರುವ ಎಡವಟ್ಟುಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಸೂಕ್ತ ಉತ್ತರ ನೀಡಲಿದ್ದಾನೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Siddaramaiah is a Anti Hindu slams MLA Bharath Shetty after Karnataka Cabinet decides to repeal anti conversion law introduced by BJP. Mangalore North Mla has warned of Massive protest in Mangalore.