ಬ್ರೇಕಿಂಗ್ ನ್ಯೂಸ್
19-06-23 05:24 pm Mangalore Correspondent ಕರಾವಳಿ
ಉಳ್ಳಾಲ, ಜೂ.19: ವಿಧಾನಸಭೆ ಅಧ್ಯಕ್ಷರಾಗಿರುವ ಶಾಸಕ ಯು.ಟಿ.ಖಾದರ್ ಅವರು ಅರೋಗ್ಯ ಸಚಿವರಾಗಿದ್ದ ವೇಳೆ ಆರೋಗ್ಯ ವಿಜ್ಞಾನ ಸಂಬಂಧಿ ಕಡತಗಳನ್ನ ವಿಲೇವಾರಿ ಮಾಡಲು ನಮ್ಮಲ್ಲಿ ಚಿಕ್ಕಾಸಿನ ಬೇಡಿಕೆಯನ್ನೂ ಇಟ್ಟಿಲ್ಲ. ಆದರೆ ಅವರಿಗಿಂತ ಮೊನ್ನೆಯಷ್ಟೆ ಮಾಜಿಯಾದ ಆರೋಗ್ಯ ಸಚಿವರ ಆಡಳಿತಾವಧಿಯಲ್ಲಿ ಎಷ್ಟು ಭ್ರಷ್ಟಾಚಾರ ಇತ್ತೆಂದು ನನಗೂ ಗೊತ್ತು. ಕಣಚೂರು ಆಸ್ಪತ್ರೆಯ ಮೋನು ಅವರಿಗೂ ಗೊತ್ತೆಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೆಸರೆತ್ತದೆ ನೇರವಾಗಿ ಕುಟುಕಿದ್ದಾರೆ.
ನಾಗರಿಕ ಸನ್ಮಾನ ಸಮಿತಿ ಮುಡಿಪು ಇದರ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಮುಡಿಪು ಅಡಿಟೋರಿಯಂನಲ್ಲಿ ಭಾನುವಾರ ನಡೆದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದ ಎಲ್ಲ ಕ್ಷೇತ್ರ ಹಾಳಾಗಿದ್ದರೂ ರಾಜಕೀಯದಷ್ಟು ಹಾಳಾದ ಕ್ಷೇತ್ರ ಬೇರೊಂದು ಇಲ್ಲ. ಇಂದು ನಾವು ಎಂಥವರಿಗೆ ಓಟ್ ಹಾಕಿದೇವಪ್ಪಾ ಎಂದು ಪರಿತಪಿಸುವ ಕಾಲ ಘಟ್ಟದಲ್ಲಿದ್ದೇವೆ. ಈ ದೇಶ ಜಾತಿ, ಮತಕ್ಕೆ ಸೀಮಿತವಾಗಿರಲು ಸಾಧ್ಯವೇ ಇಲ್ಲ. ಯು.ಟಿ.ಖಾದರ್ ರಂತವರು ಉಳ್ಳಾಲದಂತಹ ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆಗೆ ಒತ್ತು ಕೊಟ್ಟ ವ್ಯಕ್ತಿ. ಕ್ಷೇತ್ರದ ಎಲ್ಲಾ ಜನಾಂಗದ ಪ್ರೀತಿ ಗಳಿಸಿ ಅಜಾತ ಶತ್ರುವಾಗಲು ಅಷ್ಟು ಸುಲಭವಲ್ಲ. ಇಂದು ರಾಜಕೀಯ ನಾಯಕರುಗಳು ತಮ್ಮ ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡಿ ಹಾಲಿನಂತಹ ಸಮಾಜಕ್ಕೆ ಹುಳಿ ಹಿಂಡೋ ಕೆಲಸ ಮಾಡ್ತಿದ್ದಾರೆ. ಆದರೆ ಖಾದರ್ ಅವರ ಬಾಯಲ್ಲಿ ಅಂತಹ ಮಾತುಗಳು ಎಂದಿಗೂ ಬಂದಿಲ್ಲ. ಅವರು ಜನಾಂಗ, ಜಾತಿ, ಧರ್ಮಕ್ಕೆ ಸೀಮಿತರಾಗದೆ ಪಕ್ಷ ನಿಷ್ಠರಾಗಿದ್ದಾರೆ. ಅವರಿಗೆ ದೇವರು ಮುಂದಕ್ಕೆ ಅತ್ಯುನ್ನತ ಸ್ಥಾನ ಕಲ್ಪಿಸಿ ಕೊಡಲಿ ಎಂದು ಆಶಿಸಿದರು.
ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಅವರ ಕಾರ್ಯವೈಖರಿ ಎಲ್ಲರೂ ಮೆಚ್ಚುವಂತಿತ್ತು. ಅವರಿಗಿಂತ ಮೊನ್ನೆಯಷ್ಟೆ ಅಧಿಕಾರದಿಂದ ತೊಲಗಿದ ಆರೋಗ್ಯ ಸಚಿವರ ಆಡಳಿತಾವಧಿಯಲ್ಲಿ ಎಷ್ಟು ಭ್ರಷ್ಟಾಚಾರ ಇತ್ತೆಂದು ನನಗೂ ಮತ್ತು ವೇದಿಕೆಯಲ್ಲಿದ್ದ ಕಣಚೂರು ಆಸ್ಪತ್ರೆಯ ಸ್ಥಾಪಕ ಮೋನು ಅವರಿಗೆ ಚೆನ್ನಾಗಿ ಗೊತ್ತಿದೆಯೆಂದು ಹೇಳಿ ಮಾಜಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಬಗ್ಗೆ ಮೋಹನ್ ಆಳ್ವ ಟಾಂಗ್ ಇಟ್ಟಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಟಿ.ಖಾದರ್ ಅವರು, ನನ್ನ ಮತ್ತು ಜನರ ಸಂಬಂಧ ಅದು ನಿಕಟವಾದ ಸಂಪರ್ಕ. ಸಭಾಧ್ಯಕ್ಷ ಸ್ಥಾನ ಇದ್ದರೂ ಅದು ನಿರಂತರವಾಗಿರುತ್ತದೆ. ಸಂವಿಧಾನ ಬದ್ಧ ಕಾರ್ಯವನ್ನು ನಡೆಸುವುದರೊಂದಿಗೆ ಇಡೀ ನಮ್ಮ ಜಿಲ್ಲೆಗೆ ಘನತೆ, ಗೌರವ ತರುವ ಕಾರ್ಯ ಮಾಡುತ್ತೇನೆ ಎಂಬ ವಿಶ್ವಾಸ, ನಂಬಿಕೆ ನಾನು ಇಟ್ಟುಕೊಂಡಿದ್ದೇನೆ. ಇದಕ್ಕೆಲ್ಲ ನಿಮ್ಮಲ್ಲರ ಆಶೀರ್ವಾದ ಇರಲಿ ಎಂದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಕೆ.ಮೋನು, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮೊದಲಾದವರು ಉಪಸ್ಥಿತರಿದ್ದರು.
Mangalore Dr Mohan Alva slams former Karnataka Health Minister Sudhakar over corruption.He also praised speaker UT khader for his service while he was the health minister in Karnataka. Mohan alwa spoke during a honorary ceremony held at mudipu for UT Khader
15-02-25 01:18 pm
Bangalore Correspondent
COVID 19 scam, CBI: ಬಿಜೆಪಿ ಸರ್ಕಾರದ ಕೋವಿಡ್ ಅಕ್...
15-02-25 12:52 pm
Bangalore ACP Govardhan Gopal, Love story: ಎಸ...
15-02-25 12:26 pm
Solider assisted, Athani, Belagavi: ಅಥಣಿ ಪಟ್ಟ...
14-02-25 10:48 pm
Home Minister Parameshwara, Udayagiri, Mysur...
14-02-25 08:44 pm
15-02-25 12:32 pm
HK News Desk
ಉಚಿತ ಯೋಜನೆಗಳ ಕಾರಣದಿಂದಾಗಿ ಕಾರ್ಮಿಕರು ಕೆಲಸಕ್ಕೆ ಹ...
13-02-25 02:45 pm
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm