ಬ್ರೇಕಿಂಗ್ ನ್ಯೂಸ್
19-06-23 11:05 pm Mangalore Correspondent ಕರಾವಳಿ
ಉಳ್ಳಾಲ, ಜೂ.19: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಸಿದ್ಧರಾಮಯ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿ ರಾಜ್ಯವನ್ನ ಶ್ರೀಲಂಕಾದ ಮಾದರಿಯಲ್ಲಿ ದಿವಾಳಿ ಮಾಡುತ್ತೆ. ಆ್ಯಂಟಿ ಕಮ್ಯುನಲ್ ಪೋರ್ಸ್ ಹೆಸರಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನ ಮುಟ್ಟಿದ್ರೆ ನಾವು ಸಮ್ನೆ ಇರಲ್ಲ ಹುಷಾರ್ ಎಂದು ಬಿಜೆಪಿ ನಾಯಕರಾದ ಸತೀಶ್ ಕುಂಪಲ ಮತ್ತು ಸಂತೋಷ್ ಬೋಳಿಯಾರ್ ಎಚ್ಚರಿಸಿದ್ದಾರೆ.
ತೊಕ್ಕೊಟ್ಟಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಜಾರಿ ಮಾಡುವಲ್ಲಿ ಗೊಂದಲಕ್ಕೆ ಸಿಲುಕಿದೆ. ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಮೇಲೆ ಪರಿಣಾಮ ಬೀರಿದೆ. ಉಚಿತ ಪ್ರಯಾಣ ಘೋಷಣೆ ಮಾಡಿದ ಸರ್ಕಾರ ಕೆಎಸ್ಸಾರ್ಟಿಸಿ ಸಿಬ್ಬಂದಿ ವೇತನ ಹೇಗೆ ನೀಡುವುದು ಎಂಬ ಚಿಂತೆಯಲ್ಲಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರೆಂಟ್ ಫ್ರೀ ನಮಗೂ ಫ್ರೀ ನಿಮಗೂ ಫ್ರೀ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಈಗ ಅದನ್ನು ಜಾರಿ ಮಾಡುವ ಉದ್ದೇಶದಿಂದ ಇನ್ನೊಂದೆಡೆ ವಿದ್ಯುತ್ ಬಿಲ್ ಗಗನಕ್ಕೇರಿಸಿದ್ದಾರೆ.10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಈಗ ಮೋದಿ ಕಡೆ ಬೆರಳು ತೋರಿಸುತ್ತಿದೆ. ಮೋದಿ ಸರಕಾರ ಈಗಲೂ ರಾಜ್ಯಕ್ಕೆ ಐದು ಕೆ.ಜಿ ಅಕ್ಕಿ ಕೊಡುತ್ತಿದೆ. ಇದಕ್ಕೆ ರಾಜ್ಯ 10 ಕೆ.ಜಿ ಅಕ್ಕಿ ಸೇರಿಸಿ ಕೊಡಬೇಕು. ಕೊಟ್ಟ ಗ್ಯಾರಂಟಿಯನ್ನ ಕೈ ಸರಕಾರ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಮಾತನಾಡಿ ಸಿದ್ಧರಾಮಯ್ಯ ಸರಕಾರ ಯಾವುದೇ ಷರತ್ತಿಲ್ಲದೆ ಟ್ಯಾಕ್ಸಿ, ಇನ್ನಿತರ ಚಾಲಕರಿಗೆ ತಿಂಗಳಿಗೆ 5000 ಮಾಶಾಸನ ಕೊಡುವ ಕಾರ್ಯ ಮಾಡಲಿ. ಸರಕಾರವು ಓಲೈಕೆ ರಾಜಕಾರಣಕ್ಕೆ ಮಣಿದು ಮತಾಂತರ ನಿಷೇಧ ಕಾಯ್ದೆಯನ್ನ ವಾಪಸ್ ತೆಗೆಯುವುದರ ಮೂಲಕ ರಾಜ್ಯದ ಶಾಂತಿ ಸುವ್ಯವಸ್ಥೆಯನ್ನ ಕದಡುವ ಕಾರ್ಯ ಮಾಡುತ್ತಿದೆ. ಆ್ಯಂಟಿ ಕಮ್ಯುನಲ್ ಪೋರ್ಸ್ ಮಾಡಿರುವುದೇ ಹಿಂದುತ್ವದ ಹೋರಾಟಗಾರರನ್ನ ಹತ್ತಿಕ್ಕಲು. ಇದನ್ನ ನಾವು ಖಂಡಿಸುತ್ತೇವೆ. ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದರೆ ಸುಮ್ನೆ ಬಿಡಲ್ಲ ಎಂದು ಎಚ್ಚರಿಸಿದರು.
Mangalore Dare to touch Hindus in the name of Anti Communial Wing, warns Satish Kumpala in Ullal. Recently Home Minister had launched Anti communial wing to avoid Moral Policing.
20-05-25 10:49 pm
Bangalore Correspondent
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
Shashi Kumar IPS, Corruption, Hubballi, polic...
19-05-25 04:00 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm