ಬ್ರೇಕಿಂಗ್ ನ್ಯೂಸ್
20-06-23 10:32 am Mangalore Correspondent ಕರಾವಳಿ
ಉಳ್ಳಾಲ, ಜೂ.20: ಪಂಚಾಯತ್ ಆಡಳಿತದ ಗಮನಕ್ಕೆ ತರದೆ ಚರಂಡಿ ಅಗೆಯೋ ನೆಪದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರೋರ್ವರು ಮೋರಿಗಳನ್ನೇ ಒಡೆದು ಬಿಸಾಕಿದ್ದು ಮಕ್ಕಳು, ವೃದ್ಧರು ಚರಂಡಿ ದಾಟಲು ಬವಣೆ ಪಡುತ್ತಿದ್ದು ಜನರು ಸದಸ್ಯನಲ್ಲಿ ಈ ಬಗ್ಗೆ ಕೇಳಿದರೆ ಧಮ್ಕಿ ಹಾಕಿದ ಘಟನೆ ಸಾಯಿನಗರ ಎಂಬಲ್ಲಿ ನಡೆದಿದೆ.
ಕೋಟೆಕಾರು ಪಟ್ಟಣ ಪಂಚಾಯತ್ 11ನೇ ವಾರ್ಡ್ ಸದಸ್ಯ ಹರೀಶ್ ರಾವ್ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಎಂತದ್ದು ನೋಡಿ. ಕಳೆದ ಹತ್ತು ದಿವಸಗಳ ಹಿಂದೆ ಸಾಯಿನಗರಕ್ಕೆ ಬಂದ ಹರೀಶ್ ಚರಂಡಿ ಕಾಮಗಾರಿ ನಡೆಸಲಿಕ್ಕಿದೆ ಎಂದು ಹೇಳಿ ಇಲ್ಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಯವರು ಸ್ವಂತ ಖರ್ಚಲ್ಲಿ ನಿರ್ಮಿಸಿದ್ದ ಮೋರಿಗಳನ್ನ ಜೆಸಿಬಿಯಲ್ಲಿ ಒಡೆದು ಬಿಸಾಕಿದ್ದಾರಂತೆ. ಏನೋ ಸದಸ್ಯರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆಂದು ಸುಮ್ಮನಿದ್ದ ಸ್ಥಳೀಯರು ಹತ್ತು ದಿವಸಗಳಾದರೂ ಕಾಮಗಾರಿಯೇ ನಡೆಯದ್ದನ್ನು ಕಂಡು ಕೆರಳಿದ್ದಾರೆ.
ಮೋರಿಗಳನ್ನ ಬಿಸಾಕಿದ ಕೌನ್ಸಿಲರ್ ಹರೀಶ್ ಅವರು ಚರಂಡಿ ದಾಟಲು ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡಿಲ್ಲವಂತೆ. ಸ್ಥಳೀಯರೇ ಸೆಂಟ್ರಿಗ್ ಹಲಗೆಗಳನ್ನ ತಂದು ಚರಂಡಿ ದಾಟಲು ವ್ಯವಸ್ಥೆ ಮಾಡಿದ್ದಾರೆ. ಮೋರಿಗಳಿಲ್ಲದೆ ಮನೆ ಮಂದಿ ತಮ್ಮ ವಾಹನಗಳನ್ನ ಮನೆಯೊಳಗೆ ಕೊಂಡೊಯ್ಯಲು ಸಾಧ್ಯವಾಗದೆ, ಚರಂಡಿ ದಾಟಲು ಬವಣೆ ಪಡುತ್ತಿದ್ದಾರೆ. ಕಳೆದ ವಾರ ಸುರಿದ ಮಳೆಗೆ ವೃದ್ಧರು ಹಲಗೆಯಲ್ಲಿ ಚರಂಡಿ ದಾಟುತ್ತಿದ್ದ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಪಟ್ಟಣ ಸದಸ್ಯರು ಕೈಗೊಂಡಿರುವ ಕಾಮಗಾರಿ ಬಗ್ಗೆ ಪಂಚಾಯತ್ ಅಧಿಕಾರಿಗಳಲ್ಲಿ ಸ್ಥಳೀಯರು ಕೇಳಿದ್ದು ಚರಂಡಿ ಅಗೆಯಲು ಯಾವುದೇ ಅನುದಾನ, ಟೆಂಡರ್ ಆಗಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರಂತೆ.
ಕೌನ್ಸಿಲರ್ ಹರೀಶ್ ಸ್ವಯಂ ಹಿತಾಸಕ್ತಿಯಿಂದ ಮನೆಗಳ ಸಂಪರ್ಕದ ಮೋರಿಗಳನ್ನ ಒಡೆದು ಹಾಕಿದ್ದು ಕೇಳಲು ಹೋದವರಲ್ಲಿ ನಿಮ್ಮನ್ನ ನೋಡಿ ಕೊಳ್ಳುತ್ತೇನೆಂದು ಧಮ್ಕಿ ಹಾಕುತ್ತಿದ್ದು , ನಮ್ಮ ಸಮಸ್ಯೆ ಬಗೆ ಹರಿಸದಿದ್ದರೆ ನಾವೆಲ್ಲರೂ ಪಟ್ಟಣ ಪಂಚಾಯತ್ಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆಂದು ಸ್ಥಳೀಯ ನಿವಾಸಿ ಬಿಜು ಜಾರ್ಜ್ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ರಾತ್ರಿಯೂ ಕೌನ್ಸಿಲರ್ ಹರೀಶ್ ಸ್ಥಳಕ್ಕೆ ಬಂದು ಚರಂಡಿ ದಾಟಲು ಹಾಕಿದ್ದ ಸೆಂಟ್ರಿಗ್ ಹಲಗೆಗಳನ್ನು ಕೊಂಡೊಯ್ದಿದ್ದು ಮನೆ ಮಂದಿ ಕುರ್ಚಿ, ಸ್ಟೂಲ್, ಏಣಿಗಳನ್ನು ಇಟ್ಟು ಚರಂಡಿ ದಾಟುವ ಸ್ಥಿತಿಯಾಗಿದೆ.
Mangalore Kotekaru residents in trouble after Panchyath digs canal attached to homes at Sainagar. Old aged are feeling much difficult as there is no passage or way to get out of the house. Many have used ladder as passage.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm