ಬ್ರೇಕಿಂಗ್ ನ್ಯೂಸ್
22-06-23 02:39 pm Mangalore Correspondent ಕರಾವಳಿ
ಮಂಗಳೂರು, ಜೂನ್ 22: ಮೋದಿ ಸರ್ಕಾರ ಬರೋದಕ್ಕು ಮುನ್ನ ಹಗರಣಗಳೇ ಸುದ್ದಿಯಾಗುತ್ತಿದ್ದವು. ಯುಪಿಎ ಸರ್ಕಾರ ಹಗರಣಗಳಿಗೆ ಹೆಸರಾಗಿತ್ತು. ಮೋದಿ ಸರ್ಕಾರ ಜನರ ಪರವಾಗಿ ನೂರಾರು ಯೋಜನೆಗಳನ್ನು ತಂದಿದೆ. 9 ವರ್ಷದಲ್ಲಿ 30 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಜನರಿಗೆ ತಲುಪಿಸಿದೆ. ಮೋದಿ ನೇತೃತ್ವದಲ್ಲಿ ದೇಶ ಬದಲಾಗಿರುವುದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಪ್ರತಿ ಮನೆಗೂ ತೆರಳಿ ಜುಲೈ 30ರ ವರೆಗೂ ಅಭಿಯಾನ ನಡೆಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಹಿಂದಿನ ಸರ್ಕಾರಕ್ಕೂ ಮೋದಿ ಸರ್ಕಾರಕ್ಕೂ ಹೋಲಿಕೆ ಮಾಡಿದರೆ ಸ್ಕ್ಯಾಮ್ ವರ್ಸಸ್ ಸ್ಕೀಮ್ ಎನ್ನಬಹುದು. ಒಂಬತ್ತು ವರ್ಷದಲ್ಲಿ ಇಡೀ ಜಗತ್ತಿನಲ್ಲಿ ಭಾರತದ ಸ್ಥಾನ ಬದಲಾಗಿದೆ. ಮೋದಿಯವರಿಗೆ ಅಮೆರಿಕದ ಅಧ್ಯಕ್ಷರೂ ಗೌರವ ನೀಡುತ್ತಿದ್ದಾರೆ. ಕೋವಿಡ್ ನಂತರ ಜಗತ್ತಿನ ಬಹುತೇಕ ದೇಶಗಳ ಜಿಡಿಪಿ ಕುಸಿಯುತ್ತಿದ್ದರೆ, ಭಾರತದ ಜಿಡಿಪಿ ಏರುಗತಿಯಲ್ಲಿದೆ. ದೇಶದ ಜಿಡಿಪಿ 7.2 ರಲ್ಲಿದ್ದು ಇದು ಮುಂಚೂಣಿಯ ಬಿಂದು. ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ಚೀನಾ ಸೇರಿ ಉಳಿದೆಲ್ಲ ದೇಶಗಳ ಮೈನಸ್ ಹಂತಕ್ಕೆ ಹೋಗುತ್ತಿದೆ.
ದೇಶದಲ್ಲಿ ಜಿಎಸ್ಟಿ ಮೂಲಕ ತೆರಿಗೆ ಸುಧಾರಣೆ ತರಲಾಗಿದ್ದು, ಒಂದೇ ತಿಂಗಳಲ್ಲಿ 1.86 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸಿ ದಾಖಲೆ ಬರೆಯಲಾಯಿತು. ದೇಶದಲ್ಲಿ ವನ್ ನೇಶನ್ - ವನ್ ರೇಶನ್ ಹೆಸರಲ್ಲಿ ಪಡಿತರ ವ್ಯವಸ್ಥೆ ತಂದಿದ್ದು ಮೋದಿ ಸರ್ಕಾರ. ದೇಶದಲ್ಲಿ ಎರಡು ಕಾನೂನಿಗೆ ಅವಕಾಶ ನೀಡಿದ್ದ 370ನೇ ವಿಧಿಯ ರದ್ದು ಕ್ರಾಂತಿಕಾರಿ ನಡೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ರೇರಾ ಯೋಜನೆ ತರಲಾಗಿತ್ತು.
ದೇಶದಲ್ಲಿ 12 ಕೋಟಿ ಶೌಚಾಲಯಗಳ ನಿರ್ಮಾಣ, 12 ಕೋಟಿ ಬಡವರಿಗೆ ಗ್ಯಾಸ್ ಕನೆಕ್ಷನ್, 2014 ರಲ್ಲಿ 74 ಏರ್ಪೋರ್ಟ್ ಇದ್ದುದನ್ನು 150ಕ್ಕೆ ಏರಿಸಿದ್ದು ಮೋದಿ ಸರ್ಕಾರ. ಹೊಸದಾಗಿ ಏಳು ಐಐಟಿ ಸ್ಥಾಪಿಸಲಾಗಿದ್ದು ಈಗ ಒಟ್ಟು 15 ಐಐಟಿ ಆಗಿದೆ. ಹೊಸತಾಗಿ ಏಳು ಐಐಎಂ ಮಾಡಿದ್ದು ಈಗ ಒಟ್ಟು 14 ಐಐಎಂ ಆಗಿದೆ. 229 ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗಿದೆ. ಏಮ್ಸ್ ಆಸ್ಪತ್ರೆಗಳ ಸಂಖ್ಯೆ ಡಬಲ್ ಆಗಿದೆ. ದೇಶಾದ್ಯಂತ ಮೂಲಸೌಕರ್ಯ ಕ್ಷೇತ್ರದಲ್ಲಿ ಬದಲಾವಣೆ ಆಗಿರುವುದನ್ನು ಕಂಡಿದ್ದೇವೆ.
ಜಾಗತಿಕ ನೆಲೆಯಲ್ಲಿ ಭಾರತದ ಸ್ಥಾನ ಬದಲಾಗಿದ್ದು ಆರ್ಥಿಕತೆಯಲ್ಲಿ ಇಂಗ್ಲೆಂಡನ್ನು ಹಿಂದಕ್ಕಟ್ಟಿ ಐದನೇ ಸ್ಥಾನಕ್ಕೆ ಹೋಗಿದೆ. ಇದೇ ರೀತಿ ಹೋದರೆ ಭಾರತ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಇದು ಒಂಬತ್ತು ವರ್ಷದಲ್ಲಿ ಭಾರತ ಬದಲಾಗಿರುವುದರ ಸಂಕೇತ. ಮೋದಿಯಿಂದಾಗಿ ಜಗತ್ತಿನಲ್ಲಿ ಎತ್ತರಕ್ಕೇರಿದೆ ಎಂದು ಸಿಟಿ ರವಿ ಹೇಳಿದರು.
ವೆಬ್ ಸೈಟ್ ಹ್ಯಾಕ್ ಮಾಡಿದ್ದಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ, ಇನ್ನೊಂದು ಸ್ವಲ್ಪ ಮುಂದೆ ಹೋದರೆ ನಮ್ಮ ಮೈಂಡನ್ನೂ ಅವರು ಹ್ಯಾಕ್ ಮಾಡಿದ್ದಾರೆಂದು ಹೇಳಬಹುದು ಎಂದು ವ್ಯಂಗ್ಯವಾಡಿದರು. ವಿಪಕ್ಷ ನಾಯಕ ಯಾವಾಗ ಎಂಬ ಪ್ರಶ್ನೆಗೆ, ನೋ ಕಮೆಂಟ್ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಯಾಕಾಯ್ತು, ಮೋದಿಯೇ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಿದ್ದರಲ್ಲಾ ಎಂಬ ಪ್ರಶ್ನೆಗೆ, ಹೀನಾಯ ಸೋಲು ಎನ್ನುವುದನ್ನು ಒಪ್ಪಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 387 ಸ್ಥಾನಕ್ಕೆ ಸ್ಪರ್ಧಿಸಿ ಎರಡು ಕಡೆ ಗೆದ್ದಿದೆ ಎಂದರು.
Congress is a Scam, fighting against Modi Scheme slams CT Ravi in Mangalore. We will be presenting 9 years of Modi Development Campaign in Karnataka he added.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm