ಬ್ರೇಕಿಂಗ್ ನ್ಯೂಸ್
23-06-23 06:10 pm Udupi Correspondent ಕರಾವಳಿ
ಉಡುಪಿ, ಜೂನ್ 23: ಉಡುಪಿಯ ಸಿಟಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಡಿಪ್ಲೊಮಾ ಕಲಿಯುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಗಿ ಆರೋಪ ಕೇಳಿಬಂದಿದೆ. ಮಂಗಳೂರಿನ ಕೆಪಿಟಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯಾಗಿದ್ದ ಕಾಪು ಪಡುಬಿದ್ರೆಯ ಕೆಮ್ಮುಂಡೇಲು ನಿವಾಸಿ ನಿಕಿತಾ(18) ಮೃತ ಯುವತಿ.
ಯುವತಿ ತಾಯಿ ತನ್ನ ಮಗಳನ್ನು ಆಸ್ಪತ್ರೆ ವೈದ್ಯರೇ ಕೊಂದು ಮುಗಿಸಿದ್ರು ಎಂದು ಹೇಳುವ ಆಡಿಯೋ ಎರಡು ದಿನಗಳಿಂದ ವೈರಲ್ ಆಗಿತ್ತು. ಆದರೆ ಯುವತಿ ಮನೆಯವರ ಬಗ್ಗೆ ಮಾಹಿತಿ ಇರಲಿಲ್ಲ. ಜಸ್ಟಿಸ್ ಫಾರ್ ನಿಕಿತಾ ಎನ್ನುವ ಹ್ಯಾಶ್ ಟ್ಯಾಗಲ್ಲಿ ಯುವಕ- ಯುವತಿಯರು ನ್ಯಾಯಕ್ಕಾಗಿ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು. ಅಭಿಯಾನ ಗಂಭೀರ ಸ್ವರೂಪ ಪಡೆಯುತ್ತಲೇ ಉಡುಪಿಯಲ್ಲಿ ಗುರುವಾರ ಬೆಳಗ್ಗೆ ಎಬಿವಿಪಿ ವಿದ್ಯಾರ್ಥಿಗಳು ಸಿಟಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.




ನಿಕಿತಾ ಕಳೆದ ಬುಧವಾರ ಜೂನ್ 14ರಂದು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೊಟ್ಟೆ ನೋವು, ಬೆನ್ನು ನೋವೆಂದು ಆಸ್ಪತ್ರೆಗೆ ತೆರಳಿದ್ದ ಯುವತಿಯನ್ನು ವೈದ್ಯರು ಸಿಟಿ ಸ್ಕ್ಯಾನ್, ಎಂಡೋಸ್ಕೋಪಿ ಎಂದು ವಿವಿಧ ರೀತಿಯ ತಪಾಸಣೆ ನಡೆಸಿದ್ದರು. ಕೊನೆಗೆ ಅಪೆಂಡಿಕ್ಸ್ ಇದೆಯೆಂದು ಆಪರೇಶನ್ ನಡೆಸಿದ್ದರು. ಆಪರೇಶನ್ ಬಳಿಕ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಶ್ವಾಸಕೋಶದಲ್ಲಿ ನೀರು ಶೇಖರಗೊಂಡು ಭಾನುವಾರ ಬೆಳಗ್ಗೆ ಸಾವು ಕಂಡಿದ್ದಾಳೆ. ವೈದ್ಯರು ಹೃದಯಾಘಾತ ಆಗಿದೆಯೆಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಒಬ್ಬಳೇ ಮಗಳ ಸಾವಿನಿಂದ ಧೃತಿಗೆಟ್ಟ ಕುಟುಂಬಸ್ಥರು ರೋದಿಸತೊಡಗಿದ್ದರು. ವೈದ್ಯರು, ಆಸ್ಪತ್ರೆ ಬಿಲ್ ಬೇಡ ಎನ್ನುತ್ತಲೇ ಯುವತಿ ಶವವನ್ನು ಕಳಿಸಿಕೊಟ್ಟಿದ್ದರು ಎನ್ನಲಾಗಿತ್ತು.




ಗುರುವಾರ ಬೆಳಗ್ಗೆ ಆಸ್ಪತ್ರೆ ಮುಂಭಾಗದಲ್ಲಿ ಸೇರಿದ ವಿದ್ಯಾರ್ಥಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಆಸ್ಪತ್ರೆ ವೈದ್ಯರು ಬಂದು ತಮ್ಮಿಂದ ತಪ್ಪಾಗಿಲ್ಲ, ಕುಟುಂಬಸ್ಥರ ಅನುಮತಿ ಪಡೆದುಕೊಂಡೇ ಶಸ್ತ್ರ ಚಿಕಿತ್ಸೆ ನಡೆಸಿದ್ದೆವು ಎಂದು ಹೇಳಿದ್ದಾರೆ. ಆದರೆ ವೈದ್ಯರ ಮಾತನ್ನು ಒಪ್ಪದ ವಿದ್ಯಾರ್ಥಿಗಳು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿದ್ದ ನಿಕಿತಾ ತಾಯಿ, ವೈದ್ಯರ ಬೇಜವಾಬ್ದಾರಿಯಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳಿಗೆ ಒಂದು ವಾರದೊಳಗೆ ತನಿಖೆ ನಡೆಸಬೇಕು. ಯುವತಿ ಮನೆಯವರಿಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
College Student Nikitha Suspicious death in city hospital at Udupi, massive protest held by students. Nikithas mother alleges that Doctors have killed her daughter after she was admitted with stomach pain. Nikitha mothers audio had gone viral on social media asking for justice.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm