ಬ್ರೇಕಿಂಗ್ ನ್ಯೂಸ್
24-06-23 09:34 pm Mangalore Correspondent ಕರಾವಳಿ
ಉಳ್ಳಾಲ, ಜೂ.24: ಕಾಮತೃಷೆ ತಣಿಸಲೆಂದೇ ಬೀಚ್ ಗೆ ಬರುವ ಯುವ ಜೋಡಿಗಳಿಂದಾಗಿ ಉಳ್ಳಾಲದಲ್ಲಿ ಕೋಮು ಸಂಘರ್ಷಗಳು ನಡೆಯುತ್ತಿವೆ ಎಂದು ಮೀನುಗಾರ ಮುಖಂಡರೊಬ್ಬರು ಪೊಲೀಸ್ ಕಮಿಷನರ್ ಗಮನಕ್ಕೆ ತಂದಿದ್ದಾರೆ. ಕಡಲ ತೀರದಲ್ಲಿ ಕಾಮ ಕೇಳಿಯಲ್ಲಿ ತೊಡಗುವ ಜೋಡಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರನ್ನ ಒತ್ತಾಯಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ನೇತೃತ್ವದಲ್ಲಿ ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಇಂದು ನಡೆದ ಕುಂದುಕೊರತೆ ಸಭೆಯಲ್ಲಿ ಮೊಗವೀರ ಪಟ್ಣದ ಮೀನುಗಾರ ಗಣೇಶ್ ಉಳ್ಳಾಲ್ ಎಂಬವರು ಬೀಚ್ ನಲ್ಲಿ ಆಗುತ್ತಿರುವ ಕಾಮಕೇಳಿ ಬಗ್ಗೆ ದೂರು ಹೇಳಿದ್ದಾರೆ.
ಉಳ್ಳಾಲ, ಸೋಮೇಶ್ವರ ಕಡಲ ತೀರಕ್ಕೆ ಬರುವ ಯುವ ಜೋಡಿಗಳು ಎಲ್ಲರ ಎದುರೇ ಕಾಮ ಕೇಳಿಯಲ್ಲಿ ತೊಡಗಿ ಕಾಮತೃಷೆ ತಣಿಸಿಕೊಳ್ಳುತ್ತಾರೆ. ಭಿನ್ನ ಕೋಮಿನ ಜೋಡಿಗಳಂತೂ ಈ ರೀತಿ ಕಾಮ ಕೇಳಿಯಲ್ಲಿ ತೊಡಗಿದರೆ ಸಂಘರ್ಷ ಉಂಟಾಗಿ ಪ್ರದೇಶದಲ್ಲಿ ಕೋಮು ಸಾಮರಸ್ಯ ಹದಗೆಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಬೀಚಲ್ಲಿ ಬಹಿರಂಗವಾಗಿ ಕಾಮ ಕೇಳಿಯಲ್ಲಿ ತೊಡಗುವ ಯುವಕ, ಯುವತಿಯರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.
ಉಳ್ಳಾಲ,ಸೋಮೇಶ್ವರ ಬೀಚ್ಗೆ ದಿನ ನಿತ್ಯವೂ ರಾಜ್ಯ, ದೇಶದ ಬೇರೆ ಬೇರೆ ಕಡೆಯ ಪ್ರವಾಸಿಗರು ಬರುತ್ತಿದ್ದು ಇಲ್ಲಿನ ಕಡಲಬ್ಬರ ತಿಳಿಯದೆ ಸಮುದ್ರ ಪಾಲಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರವಾಸಿಗರನ್ನ ಎಚ್ಚರಿಸಲು ಬೀಚ್ ಗಳಲ್ಲಿ ಖಾಯಂ ಪೊಲೀಸ್ ಸಿಬ್ಬಂದಿಗಳನ್ನ ನೇಮಿಸುವಂತೆ ಸಲಹೆ ನೀಡಿದರು.
ಮಾಜಿ ಸೈನಿಕರೋರ್ವರು ಮಾತನಾಡಿ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಅಪಘಾತಗಳು ನಿರಂತರ ನಡೆಯುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಕೋಟೆಕಾರಿನ ಗಟ್ಟಿ ಬಿತ್ತಿಲು ರಸ್ತೆ ಬದಿಯಲ್ಲಿ ಪೋಲಿ ಯುವಕರು ಸಾರ್ವಜನಿಕವಾಗಿಯೇ ಮದ್ಯಪಾನ ಮಾಡಿ ಬಿಯರ್ ಬಾಟಲಿಗಳನ್ನ ರಸ್ತೆಗೆಸೆಯುತ್ತಿದ್ದಾರೆ, ಪ್ರಶ್ನಿಸಿದವರನ್ನ ಗುರಾಯಿಸಿ ಥಳಿಸಲು ಮುಂದಾಗುತ್ತಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಯುಕ್ತರಲ್ಲಿ ಹೇಳಿದ್ದಾರೆ. ಕೆಲವರು ಪ್ರದೇಶದಲ್ಲಿ ನಡೆಯುತ್ತಿರೋ ಗಾಂಜಾ ಮಾಫಿಯಾದ ವಿರುದ್ಧ ಕಮೀಷನರ್ ಮುಂದೆ ಧ್ವನಿ ಎತ್ತಿದ್ದಾರೆ.
ಸಭೆ ವಿಳಂಬ, ಜನರಿಂದ ಅಸಂಬದ್ಧ ಪ್ರಶ್ನೆಗಳು
ಪೊಲೀಸ್ ಆಯುಕ್ತರ ಸಾರ್ವಜನಿಕರ ಅಹವಾಲು ಸ್ವೀಕಾರದ ಸಭೆ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಸಭೆ ವಿಳಂಬವಾಗಿದ್ದು 11.40ಕ್ಕೆ ಆರಂಭವಾಗಿತ್ತು. ಇದರಿಂದ ಅಹವಾಲು ನೀಡಲು ಬಂದಿದ್ದ ಕೆಲವು ಜನರು ಎದ್ದು ಹೋಗಿದ್ದಾರೆ. ಸಭೆಯಲ್ಲಿದ್ದ ಕೆಲವರು ಪೊಲೀಸ್ ಇಲಾಖೆಗೆ ಸಂಬಂಧ ಪಡದ ಚರಂಡಿ, ತ್ಯಾಜ್ಯ, ಬೀಚಲ್ಲಿ ಶೌಚಾಲಯದ ಸಮಸ್ಯೆಗಳನ್ನ ಕೇಳಿದ್ದಾರೆ. ಪೊಲೀಸ್ ಇಲಾಖೆಗೆ ಒಳಪಡುವ ಅಹವಾಲನ್ನ ಮಂಡಿಸಿ ಎಂದು ಹೇಳಿದರೂ ಕೆಲವರು ಮತ್ತದೇ ಕಸ, ಚರಂಡಿ, ಶೌಚಾಲಯದ ಸಮಸ್ಯೆಗಳನ್ನೇ ಹೇಳಿಕೊಂಡಿದ್ದಾರೆ.
ಜನಸಮಾನ್ಯರಿಗೆ ಪೊಲೀಸರು ಸಮರ್ಪಕ ಮಾಹಿತಿ ನೀಡದೆ ಸಭೆ ಆಯೋಜಿಸಿದ್ದರಿಂದಲೇ ಆಯುಕ್ತರಿಗೆ ಅಸಂಬದ್ಧ ಪ್ರಶ್ನೆಗಳು ಎದುರಾಗಿದ್ದವು. ಆದರೂ ಜನರ ಅಹವಾಲು ಆಲಿಸಿದ ಕಮಿಷನರ್ ಕುಲದೀಪ್ ಜೈನ್, ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನ ಹರಿಸಲಾಗುವುದು ಎಂದರು.
Public grievances meeting held at Ullal by Police Commissioner Kuldeep Kumar Jain, fishermen raise various issues.
20-05-25 10:49 pm
Bangalore Correspondent
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
Shashi Kumar IPS, Corruption, Hubballi, polic...
19-05-25 04:00 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm