ಬ್ರೇಕಿಂಗ್ ನ್ಯೂಸ್
29-06-23 04:23 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಸೂಕ್ತ ತರಬೇತಿ ಕೇಂದ್ರಗಳು ಇಲ್ಲ. ಹಾಗಾಗಿ ರಾಜಕೀಯ ಕ್ಷೇತ್ರದ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ. ಸದ್ಯ ಪುಣೆಯಲ್ಲಿ ಮಾತ್ರ ಈ ರೀತಿಯ ತರಬೇತಿ ಸಂಸ್ಥೆ ಇದೆ, ಅವರ ಜೊತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು, ರಾಜಕೀಯ, ಸರಕಾರಿ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಮತ್ತು ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗುವುದು. ಪದವಿ ಮುಗಿಸಿದವರು ಆರು ತಿಂಗಳು ತರಬೇತಿ, ನಂತರದ ಆರು ತಿಂಗಳು ಇಂಟರ್ನ್ ಶಿಪ್ ಪಡೆಯಲು ಅವಕಾಶ ಇರುತ್ತದೆ. ಕೇವಲ ಎಂಎಲ್ ಎ, ಎಂಪಿ ಆಗೋದಷ್ಟೇ ಮುಖ್ಯ ಅಲ್ಲ. ರಾಜಕೀಯ ಕ್ಷೇತ್ರಕ್ಕೆ ಬರುವವರು ಮೊದಲಾಗಿ ಈ ತರಬೇತಿ ಪಡೆದಲ್ಲಿ ಸುಲಭವಾಗಿ ಮೇಲಕ್ಕೇರಲು ಸಾಧ್ಯವಾಗುತ್ತದೆ.
ನಾವು ರಾಜಕೀಯಕ್ಕೆ ಬರುವಾಗ ಇಂತಹ ತರಬೇತಿಗೆ ಅವಕಾಶ ಇರಲಿಲ್ಲ. ಇಂತಹ ತರಬೇತಿ ಪಡೆದಲ್ಲಿ ಸರ್ಕಾರೇತರ ಎನ್ ಜಿಓ ಸಂಸ್ಥೆ ಆರಂಭಿಸಬಹುದು. ಸರ್ಕಾರಿ ನೌಕರನಾಗಿ ಸೇರಬಹುದು. ಶಾಸಕರ ಜೊತೆಗೆ ಕೆಲಸ ಮಾಡಬಹುದು. ಮುಂದಿನ ದಿನಗಳಲ್ಲಿ ಇದರಿಂದ ಬಹಳಷ್ಟು ಪ್ರಯೋಜನ ಸಿಗಲಿದೆ ಎಂದು ಹೇಳಿದ ಖಾದರ್, ರಾಜ್ಯದ ಪ್ರಮುಖ ಕೇಂದ್ರದಲ್ಲೇ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಇದಕ್ಕೆ ಸಿಲೇಬಸ್ ಇರಲಿದೆ, ಫುಲ್ ಟೈಮ್ ಉಪನ್ಯಾಸಕರು ಇರ್ತಾರೆ. ಮಧ್ಯೆ ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ಕೊಡ್ತಾರೆ. ತರಬೇತಿ ಪಡೆದವರು ಮುಂದೆ ಒಳ್ಳೆಯ ನಾಯಕನಾಗಲು ಅವಕಾಶ ಇರುತ್ತದೆ ಎಂದು ಹೇಳಿದರು.
“Youth who have completed degree courses and are interested in politics will be trained through a one-year course at Karnataka Political Training Institute”, said the Speaker of Karnataka Legislative Assembly U T Khader during a press meet held at the Eden Club here, on June 29.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm