ಬ್ರೇಕಿಂಗ್ ನ್ಯೂಸ್
30-06-23 10:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 30: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಿಐಡಿ ಮತ್ತು ಸಿಬಿಐ ಅಧಿಕಾರಿಗಳ ತನಿಖೆಗೆ ಒಳಪಟ್ಟಿದ್ದೇವೆ. ಅವರು ನಡೆಸಿರುವ ಎಲ್ಲ ರೀತಿಯ ತನಿಖೆಗೂ ಸಹಕರಿಸಿದ್ದೇವೆ. ನಮ್ಮನ್ನು ಸಿಬಿಐ ಅಧಿಕಾರಿಗಳು ಆರೋಪಿಗಳಲ್ಲ ಎಂದು ಹೇಳಿದ್ದರೂ, ತಿಮರೋಡಿ ಮಹೇಶ್ ಶೆಟ್ಟಿ ಮಾತ್ರ ನಮ್ಮನ್ನೇ ಆರೋಪಿಗಳೆಂದು ಹೇಳುತ್ತಿದ್ದಾರೆ. ಅವರೇ ಹೇಳಿದಂತೆ, ನಾವು ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಕರೆಯುತ್ತೇವೆ. ತಿಮರೋಡಿ ಮತ್ತು ಅವರ ತಂಡದವರು ದೈವದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಧರ್ಮಸ್ಥಳದ ಧೀರಜ್ ಕೆಲ್ಲ ಸವಾಲು ಹಾಕಿದ್ದಾರೆ.
ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಮ್ಮ ಮೂವರ ಹೆಸರನ್ನು ತಿಮರೋಡಿಯವರು ಹೇಳುತ್ತಿದ್ದಾರೆ. ನಮ್ಮನ್ನು ತನಿಖೆ ಮಾಡಿಸಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಪಾಲಿಗ್ರಾಫ್, ಮಂಪರು ಪರೀಕ್ಷೆಗೂ ಒಳಪಟ್ಟಿದ್ದೇವೆ. ಅದರ ಕುರಿತು ಎಲ್ಲ ಸಾಕ್ಷ್ಯವನ್ನೂ ತೋರಿಸುತ್ತೇವೆ. ತಿಮರೋಡಿಯವರು ಬಾಯಿಗೆ ಬಂದ ರೀತಿ ಹೇಳುತ್ತಿದ್ದಾರೆ. ಇದಕ್ಕೊಂದು ಫುಲ್ ಸ್ಟಾಪ್ ಕೊಡಬೇಕು. ನಾವು ಬಹು ಕಾರಣಿಕದ ಸ್ಥಳ ಕಾನತ್ತೂರಿಗೆ ಹೋಗಿ ದೈವದ ಮುಂದೆ ಪ್ರಮಾಣ ಮಾಡುತ್ತೇವೆ. ತಿಮರೋಡಿ ಅಪ್ಪನಿಗೆ ಹುಟ್ಟಿದ್ದರೆ, ಅಲ್ಲಿ ಬಂದು ನಾವೇ ಈ ಕೃತ್ಯ ಮಾಡಿದ್ದೆಂದು ಹೇಳಲಿ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್, ತಿಮರೋಡಿ ಮಹೇಶ್ ಶೆಟ್ಟಿ ನಮ್ಮ ಜೈನ ಸಮಾಜದ ಮೇಲೆ ಪ್ರಶ್ನೆ ಮಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ನಮ್ಮ ಮೇಲೆ ಹೊರಿಸಿದ ಕಳಂಕ. ಜೈನ ಸಮಾಜ ಮತ್ತು ಹಿಂದು ಸಮಾಜದ ಶ್ರೇಷ್ಠ ವ್ಯಕ್ತಿಯ ಪರವಾಗಿ ಧ್ವನಿ ಎತ್ತಲು ಬಂದಿದ್ದೇನೆ. ಆ ಸಂದರ್ಭದಲ್ಲಿ ಊರಿನಲ್ಲೇ ಇಲ್ಲದ ವ್ಯಕ್ತಿಯ ಮೇಲೆ ಆರೋಪ ಹೊರಿಸಿದ್ದಾರೆ. ತಿಮರೋಡಿ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಇದರ ಹಿಂದೆ ಸೌಜನ್ಯಾ ಹೆಸರಲ್ಲಿ ಹಣ ಮಾಡುವ ಹುನ್ನಾರ ಇದೆ. ಸೌಜನ್ಯಾ ಹೆಸರೇಳಿದರೆ, ಹಣ ಕೊಡುವ ಮಂದಿ ಇದ್ದಾರೆ. ಅದಕ್ಕಾಗಿ ತಿಮರೋಡಿ 12 ವರ್ಷದ ಬಳಿಕ ಸೌಜನ್ಯಾ ಪ್ರಕರಣವನ್ನು ಮತ್ತೆ ಕೆದಕುತ್ತಿದ್ದಾರೆ ಎಂದರು.
ಮರು ತನಿಖೆಗೆ ಸಿಬಿಐ ಕೋರ್ಟ್ ಆದೇಶ ಮಾಡಿದಾಗ ನೀವು ಯಾಕೆ ಹೈಕೋರ್ಟಿನಲ್ಲಿ ಸ್ಟೇ ತಗೊಂಡ್ರಿ ಎಂದು ಕೇಳಿದ ಪ್ರಶ್ನೆಗೆ, ಅದಾಗಲೇ ನಮ್ಮನ್ನು ತನಿಖೆ ಮಾಡಿದ್ದರು. ಮತ್ತೆ ತನಿಖೆ ಹೆಸರಲ್ಲಿ ಹಿಂಸೆ ಕೊಡುವುದು ಬೇಡವೆಂದು ತಡೆ ತಂದಿದ್ದೆವು ಎಂದು ಧೀರಜ್ ಜೈನ್ ಹೇಳಿದರು. ತಿಮರೋಡಿಯವರು ಅಣ್ಣಪ್ಪನ ಎದುರಲ್ಲೇ ಪ್ರಮಾಣಕ್ಕೆ ಕರೆದಿದ್ದರು. ನೀವು ಯಾಕೆ ಕಾನತ್ತೂರಿಗೆ ಹೋಗುತ್ತೀರಿ ಎಂಬ ಪ್ರಶ್ನೆಗೆ, ಅವರಿಗೆ ಧರ್ಮಸ್ಥಳಕ್ಕೆ ಬರುವ ಯೋಗ್ಯತೆ ಇಲ್ಲ. ಅಂಥವರನ್ನು ಅಲ್ಲಿಗೆ ಕರೆಯುವುದೇ ಅಪಚಾರ ಎಂದರು.
ಇದೇ ವೇಳೆ, ಆರೋಪ ಹೊತ್ತಿರುವ ಮತ್ತೊಬ್ಬ ಉದಯ್ ಜೈನ್, ನಾವು ಈ ಪ್ರಕರಣದಲ್ಲಿ ತುಂಬ ಹಿಂಸೆಗೆ ಒಳಗಾಗಿದ್ದೇವೆ. ಎಲ್ಲ ಜನರಿಂದ ದೂಷಣೆಗೊಳಗಾಗಿದ್ದೇವೆ. ಈಗ ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಈಗ ನಾವು ಕೂಡ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಾ ಮಾವ ವಿಠಲ ಗೌಡನ ಮೇಲೆ ಶಂಕೆಯಿದೆ ಎಂದು ಹೇಳುತ್ತೇವೆ. ಅವರನ್ನೂ ನಮ್ಮ ರೀತಿಯಲ್ಲೇ ತನಿಖೆಗೆ ಒಳಪಡಿಸಿ ಎಂದರು ಹೇಳಿದರು. ನಾವು ನಮ್ಮದೇ ದುಡಿದ ಹಣದಲ್ಲಿ ಕೋರ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇವೆ. ನಮಗೆ ಯಾರಿಗೂ ಹಣ ಫಂಡಿಂಗ್ ಮಾಡಿಲ್ಲ. ಇಲ್ಲ ಸಲ್ಲದ ಆರೋಪಗಳನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ. ಖಾವಂದರು ನಮಗೆ ಸಪೋರ್ಟ್ ಇದ್ದಾರೆ ಎಂದು ಹೇಳುತ್ತಾರೆ. ಅದೆಲ್ಲ ಸುಳ್ಳು ಎಂದು ಮಲ್ಲಿಕ್ ಜೈನ್ ಹೇಳಿದರು.
“Dheeraj Jain, Mallik Jain and Uday Jain, who are the suspects in the Soujanya murder case have said that they are ready to come at Kanathur temple within 10 days to prove their innocence. They have challenged Mahesh Shetty Thimarodi to come to Kanathur temple,” said former MLA Abhayachandra Jain.
21-05-25 11:33 am
HK News Desk
Darshan, Pavitra, Court case: ರೇಣುಕಾಸ್ವಾಮಿ ಹತ...
20-05-25 10:49 pm
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm