Talapady Accident: ಹೆದ್ದಾರಿ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಆ್ಯಂಬುಲೆನ್ಸ್ ! ಖಾಲಿ ವಾಹನದ ಅತಿವೇಗಕ್ಕೆ ಸ್ಥಳದಲ್ಲೇ ಬಲಿಯಾದ ಬಡ ಜೀವ

02-07-23 09:27 pm       Mangalore Correspondent   ಕರಾವಳಿ

ಖಾಲಿ ಆಂಬುಲೆನ್ಸ್ ವಾಹನ ಹರಿದು ಪಾದಚಾರಿ ಸಾವನ್ನಪ್ಪಿದ ಘಟನೆ ಕೆಳಗಿನ ತಲಪಾಡಿಯ ಮರೋಳಿ ಬಾರ್ ಎದುರುಗಡೆ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ. 

ಉಳ್ಳಾಲ, ಜು.2: ಖಾಲಿ ಆಂಬುಲೆನ್ಸ್ ವಾಹನ ಹರಿದು ಪಾದಚಾರಿ ಸಾವನ್ನಪ್ಪಿದ ಘಟನೆ ಕೆಳಗಿನ ತಲಪಾಡಿಯ ಮರೋಳಿ ಬಾರ್ ಎದುರುಗಡೆ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ. 

ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ, ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಅಪರಿಮಿತ ವೇಗದಲ್ಲಿ ಧಾವಿಸುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಫ್ರಾನ್ಸಿಸ್ ದೂರ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ತಕ್ಷಣ ಆಂಬ್ಯುಲೆನ್ಸ್ ಚಾಲಕ ಅದೇ ವಾಹನದಲ್ಲಿ ಫ್ರಾನ್ಸಿಸ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accident, 62 year old man dies after Ambulance rams on him at Talapady in Mangalore. The deceased has been identified as Fransis Dsouza.