ಬ್ರೇಕಿಂಗ್ ನ್ಯೂಸ್
02-07-23 10:34 pm Mangalore Correspondent ಕರಾವಳಿ
ಮಂಗಳೂರು, ಜುಲೈ 2: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ನೀಡಿದ್ದ ಅರುಣ್ ಪುತ್ತಿಲ ಬೆಂಬಲಿಗರು ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೂ ಅರುಣ್ ಪುತ್ತಿಲ ಅವರನ್ನೇ ಕಣಕ್ಕಿಳಿಸುವ ಸೂಚನೆಯನ್ನೂ ಕೊಟ್ಟಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಇದ್ದರೆ, ಬಂಡಾಯ ಖಚಿತ ಎನ್ನುವ ಮಾತನ್ನು ಪುತ್ತೂರಿನ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಸಂಘ ಪರಿವಾರಕ್ಕೆ ಶಾಕ್ ಮೇಲೆ ಶಾಕ್ ಕೊಟ್ಟಿರುವ ಸಂಗತಿ.
ಈ ನಡುವೆ, ಪುತ್ತಿಲ ಪರಿವಾರ ಹೆಸರಲ್ಲಿ ಜಿಲ್ಲೆಯಾದ್ಯಂತ ಓಡಾಟ ನಡೆಸುತ್ತ ಜನಬೆಂಬಲ ಪಡೆಯುತ್ತಿರುವ ಅರುಣ್ ಪುತ್ತಿಲರಿಗೆ ಠಕ್ಕರ್ ಕೊಡುವುದಕ್ಕಾಗಿಯೇ ಹಾಲಿ ಸಂಸದ ನಳಿನ್ ಕುಮಾರ್ ಜೊತೆಗಿದ್ದವರು ಹೊಸ ಅಸ್ತ್ರ ಹೆಣೆದಿದ್ದಾರೆ. ಪುತ್ತೂರಿನವರೇ ಆಗಿರುವ ಮತ್ತೊಬ್ಬ ಬ್ರಾಹ್ಮಣ, ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಎಂಬ ಹೊಸ ಮುಖವನ್ನು ಪುತ್ತಿಲ ಪರಿವಾರಕ್ಕೆ ಪ್ರತಿಯಾಗಿ ಛೂಬಿಟ್ಟಿದ್ದಾರೆ. ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರು ಹೆಚ್ಚಿನವರು ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಬ್ರಾಹ್ಮಣರೇ. ಜೊತೆಗೆ, ಬಿಜೆಪಿ ಮತ್ತು ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇತರೇ ಹಿಂದುಳಿದ ಸಮುದಾಯದ ಕಾರ್ಯಕರ್ತರ ಪೈಕಿ ಬಹುತೇಕರು ಅರುಣ್ ಪುತ್ತಿಲ ಜೊತೆಗಿದ್ದಾರೆ. ಇದೀಗ ಅರುಣ್ ಪುತ್ತಿಲ ಎಂಬ ಬ್ರಾಹ್ಮಣ ವ್ಯಕ್ತಿಗೆದುರಾಗಿ ಎಜುಕೇಟೆಡ್ ಅನ್ನುವ ನೆಲೆಯಲ್ಲಿ ಮತ್ತೊಬ್ಬ ಬ್ರಾಹ್ಮಣ ಅರುಣ್ ಶ್ಯಾಮ್ ಅವರನ್ನು ಛೂಬಿಡಲಾಗಿದ್ದು, ಇದರ ಹಿಂದೆ ಪುತ್ತಿಲ ಪರಿವಾರವನ್ನೇ ಒಡೆಯುವ ಹುನ್ನಾರ ಇದೆಯೆಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ಪುತ್ತೂರಿನ ಪುತ್ತಿಲ ಪರಿವಾರದ ಕಾರ್ಯಕರ್ತರು ನಮ್ಮನ್ನು ಒಡೆಯುವ ಯತ್ನ ಬೇಡ ಎನ್ನುವ ಸಂದೇಶವನ್ನು ಜಾಲತಾಣದಲ್ಲಿ ನೀಡಿದ್ದಾರೆ. ಇದಲ್ಲದೆ, ಹಾಲಿ ಸಂಸದ ನಳಿನ್ ಕುಮಾರ್ ಅವರನ್ನು ಈ ಬಾರಿ ಬದಲಿಸಬೇಕು, ಅರುಣ್ ಪುತ್ತಿಲರಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಮಾಡುತ್ತಿದ್ದಾರೆ. ಇದರ ನಡುವಲ್ಲೇ ಅರುಣ್ ಶ್ಯಾಮ್ ಅವರನ್ನು ಮಂಗಳೂರಿನಲ್ಲಿ ಕಾರ್ಯಕ್ರಮ ಒಂದಕ್ಕೆ ಕರೆಸಿ ಹೈಲೈಟ್ ಮಾಡುವ ಯತ್ನ ನಡೆದಿದೆ. ಅಲ್ಲದೆ, ಸಂಸದ ಸ್ಥಾನಕ್ಕೆ ಹೊಸ ಅಭ್ಯರ್ಥಿ ಎನ್ನುವ ರೀತಿ ಬಿಂಬಿಸುವ ಪ್ರಯತ್ನವೂ ಮತ್ತೊಂದು ಕಡೆ ನಡೆದಿದೆ. ಆಮೂಲಕ ನಳಿನ್ ಕುಮಾರ್ ಜಾಗಕ್ಕೆ ತಮ್ಮದೇ ಮತ್ತೊಬ್ಬ ವ್ಯಕ್ತಿಯನ್ನು ಹಾಲಿ ಸಂಸದರ ಆಪ್ತ ಬಳಗ ರೆಡಿ ಮಾಡುತ್ತಿದ್ದಾರೆಯೇ ಅನ್ನುವ ಅನುಮಾನ ಉಂಟಾಗಿದೆ.
ಅರುಣ್ ಶ್ಯಾಮ್ ವಿಟ್ಲ ಮೂಲದವರಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದರೂ ಹೈಕೋರ್ಟ್ ವಕೀಲರಾದ ಬಳಿಕ ಬಿಜೆಪಿ ಪರವಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಹೈಕೋರ್ಟಿನಲ್ಲಿ ಸರಕಾರದ ಪರ ವಾದಿಸಲು ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಅರುಣ್ ಶ್ಯಾಮ್ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ನಳಿನ್ ಕುಮಾರ್ ಆಪ್ತರೇ ಅರುಣ್ ಶ್ಯಾಮ್ ಹೆಸರನ್ನು ತೇಲಿ ಬಿಟ್ಟಿದ್ದು, ಸಂಸದ ಸ್ಥಾನಕ್ಕೆ ಅಭ್ಯರ್ಥಿ ಎನ್ನುವ ರೀತಿ ಬಿಂಬಿಸಿದ್ದಾರೆ. ಸಂಸದರ ಖಾಸಾ ಬಳಗವೇ ಹೀಗೆ ಬಿಂಬಿಸಿರುವುದರಿಂದ ಈ ಬಾರಿ ನಳಿನ್ ಬದಲಾವಣೆ ಅಂತೂ ಖಚಿತ ಅನ್ನುವ ಸಂದೇಶ ಸಿಕ್ಕಂತಾಗಿದೆ. ಇದೇ ವೇಳೆ, ಪುತ್ತಿಲ ಪರಿವಾರದ ಹೆಸರಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿ ಓಡಾಡುತ್ತಿರುವ ಅರುಣ್ ಪುತ್ತಿಲರ ವೇಗಕ್ಕೆ ಬ್ರೇಕ್ ಹಾಕಲು ಹೊಸ ಹೆಸರನ್ನು ತೇಲಿ ಬಿಡಲಾಗಿದ್ಯಾ ಅನ್ನುವ ಶಂಕೆಯೂ ಮೂಡಿದೆ. ಏನಿದ್ದರೂ, ಪುತ್ತೂರಿನದ್ದೇ ಮತ್ತೊಬ್ಬ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಮುಂದಿಟ್ಟು ಪುತ್ತಿಲ ಪರಿವಾರವನ್ನು ಒಡೆಯುವ ಪ್ಲಾನ್ ಇದರ ಹಿಂದಿದೆ ಅನ್ನುವ ಮಾತಂತೂ ಕೇಳಿಬಂದಿದೆ. ಟಿಕೆಟ್ ವಿಚಾರದಲ್ಲಿ ಕೊನೆಕ್ಷಣದಲ್ಲಿ ಏನೂ ಆಗಬಹುದು, ಅದನ್ನು ಆಗಷ್ಟೇ ನೋಡಿಕೊಂಡರಾಯ್ತು ಅನ್ನುವ ಪ್ಲಾನ್ ಖಾಸಾ ಬಳಗದ್ದು ಎನ್ನಲಾಗುತ್ತಿದೆ.
BJP makes plan to get in Advocate Arun Shyam as MP candidate against Puttur Arun Puthila in Mangalore. Arun Shyam is a high court lawyer and hails from Brahmin Community.
05-04-25 12:21 pm
HK News Desk
Ankola Robbery, Talat gang: ಅಂಕೋಲಾದಲ್ಲಿ ನಗದು...
04-04-25 10:54 pm
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 01:16 pm
Mangaluru Staff
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm