ಬ್ರೇಕಿಂಗ್ ನ್ಯೂಸ್
14-02-26 01:51 pm Supritha Jain ದೇಶ - ವಿದೇಶ
ತಿರುವನಂತಪುರಂ, ಫೆ 14: ಕೇರಳದಲ್ಲಿ ಅಪರೂಪದ ಘಟನೆ ನಡೆದಿದ್ದು, ಇದು ದೇಶದ ಗಮನ ಸೆಳೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ ಕಳೆದುಕೊಂಡ ದಂಪತಿ ಇದೀಗ ಐದು ಮಕ್ಕಳ ಜೀವ ಉಳಿಸಲು ಅತ್ಯಂತ ಧೈರ್ಯಶಾಲಿ ನಿರ್ಧಾರ ಕೈಗೊಂಡಿದ್ದಾರೆ. ಅರುಣ್ ಮತ್ತು ಶೆರಿನ್ ಅವರ ಈ ಸಾಹಸದಿಂದ 10 ತಿಂಗಳ ಅಲಿನ್ ಶೆರಿನ್ ಅಬ್ರಹಂ ಅವಳನ್ನು ಅಮರವಾಗಿ ಉಳಿಸಿಕೊಂಡಿದ್ದಾರೆ.
ಅಲಿನ್ ಶೆರಿನ್ ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗಗಳನ್ನ ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಈ ಮೂಲಕ 10 ತಿಂಗಳ ಅಲಿನ್ ಶೆರಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ದಾನ ಕಾರ್ಯದಿಂದ ಅನೇಕ ಜೀವ ಉಳಿಯುವ ಅವಕಾಶ ದೊರೆತಿದ್ದು, ಇದು ಮಾನವೀಯತೆ ಮತ್ತು ಸಮಾಜ ಸೇವೆಯ ಮಹತ್ವವನ್ನು ಮತ್ತೆ ಒತ್ತಿ ತೋರಿಸಿದೆ.
ಫೆಬ್ರವರಿ 5ರಂದು ಮಧ್ಯಾಹ್ನ ಅಲಿನ್ ಶೆರಿನ್ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದಾಗ, ಪಲ್ಲಂ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಲಿನ್‌ಳನ್ನು ತಕ್ಷಣ ತಿರುವನಂತಪುರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಬಳಿಕ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದ ಸುದ್ದಿಯನ್ನು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು. ಅಪಘಾತದಲ್ಲಿ ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು.


ಅತೀವ ದುಃಖದ ನಡುವೆಯೂ, ಪೋಷಕರು ಅರುಣ್ ಮತ್ತು ಶೆರಿನ್ ಅವರ ಒಪ್ಪಿಗೆ ಮೇರೆಗೆ, ತಮ್ಮ ಪುತ್ರಿಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತು ಇತರ ಉಪಯುಕ್ತ ಅಂಗಾಂಗಗಳು ತಿರುವನಂತಪುರಂ ಮತ್ತು ಕೊಚ್ಚಿಯ ವಿವಿಧ ಆಸ್ಪತ್ರೆಗಳಿಗೆ ರವಾನಿಸಲ್ಪಟ್ಟವು. ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಹಾಕಿ ಸುರಕ್ಷತೆ ಖಚಿತಪಡಿಸಿದರು.
ಈ ಮೂಲಕ ಅಲಿನ್ ಶೆರಿನ್ ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಹೆಸರು ಪಡೆದಿದ್ದಾರೆ ಮತ್ತು ಅವರ ಈ ಮಹತ್ವದ ಕೊಡುಗೆ ಸಮಾಜಕ್ಕೆ ಪ್ರೇರಣೆಯಾಗಿದೆ.
In a rare and deeply moving incident from Kerala, a 10-month-old baby girl has become one of the youngest organ donors in the country, offering new hope to five children even in death.
Aline Sherin Abraham, the only daughter of Arun and Sherin, tragically lost her life following a road accident. In an extraordinary act of courage amid unbearable grief, her parents consented to donate her organs, ensuring that their daughter’s short life would leave behind a lasting legacy.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am