ಬ್ರೇಕಿಂಗ್ ನ್ಯೂಸ್
03-07-23 03:41 pm Mangalore Correspondent ಕರಾವಳಿ
ಮಂಗಳೂರು, ಜುಲೈ 3: ಲೋಕಾಯುಕ್ತದಿಂದ ಬಂಧನಕ್ಕೊಳಗಾಗಿರುವ ತಹಸೀಲ್ದಾರ್ ಅಜಿತ್ ಕುಮಾರ್ ರೈ ಅಕ್ರಮ ಆಸ್ತಿ ಪ್ರಕರಣದಲ್ಲಿ ಅಂಡರ್ ವರ್ಲ್ಡ್ ಲಿಂಕ್ ಇದ್ಯಾ ಎನ್ನುವ ಅನುಮಾನ ಕೇಳಿಬಂದಿತ್ತು. ವಿದೇಶದಲ್ಲಿ ನೆಲೆಸಿರುವ ದಿ. ಮುತ್ತಪ್ಪ ರೈ ಬಂಟ ಮನ್ವಿತ್ ರೈ ಜೊತೆ ಸೇರಿ ಅಕ್ರಮ ಆಸ್ತಿ ಮಾಡಿದ್ದಾರೆಂಬ ಆರೋಪದ ಬಗ್ಗೆ ಸ್ವತಃ ಮನ್ವಿತ್ ರೈ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಮನ್ವಿತ್ ರೈ, ತನ್ನ ಮೇಲೆ ಬಂದ ಆರೋಪವನ್ನ ಅಲ್ಲಗೆಳೆದಿದ್ದಾರೆ. ನಾನು ಮತ್ತು ಅಜಿತ್ ರೈ ಒಂದೇ ಊರಿನವರು ಅಷ್ಟೇ. ಅದು ಬಿಟ್ಟು ನಮ್ಮ ವ್ಯವಹಾರದಲ್ಲಿ ಯಾವುದೇ ಸಂಬಂಧಗಳಿಲ್ಲ. ಮೊದಲಿನಿಂದಲೂ ಅಜಿತ್ ರೈ ನನಗೆ ಒಳ್ಳೆಯ ಫ್ರೆಂಡ್ ಅಷ್ಟೇ ಆಗಿದ್ದಾರೆ.
ನನ್ನ ಹೆಸರಲ್ಲಿ ಯಾವುದಾದ್ರೂ ಒಂದು ಹತ್ತು ಎಕರೆ ಆಸ್ತಿ ಇದ್ರೆ ತೋರಿಸಿ. ಬೆಂಗಳೂರು ಅಥವಾ ಎಲ್ಲೇ ಆಗಲಿ ನನ್ನ ಹೆಸರಲ್ಲಿ ಯಾವುದಾದ್ರು ಆಸ್ತಿ ಅಥವಾ ಡಾಕ್ಯುಮೆಂಟ್ ಇದ್ರೆ ಹೇಳಲಿ. ಎರಡು ದಿನಗಳಲ್ಲಿ ಬಂದು ನಾನೇ ಸರೆಂಡರ್ ಆಗ್ತೀನಿ.
ನನಗೆ ಅಂತಹ ಯಾವುದೇ ವ್ಯವಹಾರಗಳಿಲ್ಲ. ನಾನು ಥಾಯ್ಲೆಂಡ್ ಗೆ ಬಂದು ಒಂದೂವರೆ ವರ್ಷ ಆಗಿದೆ. ಥಾಯ್ಲೆಂಡ್ ನಲ್ಲಿಯೇ ನನಗೆ ಸಂಬಂಧಪಟ್ಟ ವ್ಯವಹಾರಗಳನ್ನ ಮಾಡ್ತಾ ಇದ್ದೇನೆ. ಒಂದು ವರ್ಷದ ಹಿಂದೆಯೂ ನನ್ನ ಮೇಲೆ ಕೆಲವು ಆರೋಪಗಳನ್ನ ಮಾಡಿದ್ರು. ಗುಣರಂಜನ್ ಶೆಟ್ಟಿಗೆ ಮನ್ವಿತ್ ರೈಯಿಂದ ಬೆದರಿಕೆ ಇದೆ ಅಂತ ಸುದ್ದಿ ಹಬ್ಬಿಸಿದ್ದರು.
ಈ ಬಗ್ಗೆ ತನಿಖೆ ಆದಮೇಲೆ ಮನ್ವಿತ್ ರೈ ಪಾತ್ರ ಇಲ್ಲ ಅಂತ ಮಂಗಳೂರಿನ ಪೊಲೀಸರೇ ಹೇಳಿದ್ದಾರೆ. ಇದೀಗ ಅಜಿತ್ ರೈ ಪ್ರಕರಣದಲ್ಲಿ ನನ್ನ ಹೆಸರನ್ನ ಬಳಕೆ ಮಾಡ್ತಾ ಇದ್ದಾರೆ. ನನಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ ನನ್ನ ಬಗ್ಗೆ ವಿನಾಕಾರಣ ಸುದ್ದಿ ಹಬ್ಬಿಸಿದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ವಿಡಿಯೋದಲ್ಲಿ ಮನ್ವಿತ್ ರೈ ಹೇಳಿದ್ದಾರೆ.
ಲೋಕಾಯುಕ್ತ ಬಂಧಿಸಿರುವ ಅಜಿತ್ ರೈ ಮತ್ತು ಮನ್ವಿತ್ ರೈ ಪುತ್ತೂರಿನ ಕೆಯ್ಯೂರು ಗ್ರಾಮದವರು. ಹೀಗಾಗಿ ಇವರಿಗೆ ಲಿಂಕ್ ಇದೆಯೆಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
#Tahsildar #AjithKumarRai arrest by #Lokayukta, #ManvithRai says i am no where connected to Ajith rai shares video from Thailand pic.twitter.com/fr2WO7lMma
— Headline Karnataka (@hknewsonline) July 3, 2023
Tahsildar Ajith Kumar Rai arrest by Lokayukta, Manvith Rai says i am no where connected to Ajith rai shares video from Thailand.
02-03-25 10:24 pm
Bangalore Correspondent
DK Shivakumar, Kannada film industry: ಸಿನಿಮಾ...
02-03-25 09:39 pm
Channagiri Mla Shivaganga, D K Shivakumar: ರಕ...
02-03-25 09:22 pm
Bird Flu, Ballari: ಬಳ್ಳಾರಿಯಲ್ಲಿ ಹಕ್ಕಿಜ್ವರ ಹಾವ...
02-03-25 02:10 pm
ಕಾಂಗ್ರೆಸ್ನಲ್ಲಿ ಯಾವ ಕ್ಷಿಪ್ರ ಕ್ರಾಂತಿಯೂ ನಡೆಯುವು...
01-03-25 11:01 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
02-03-25 11:08 pm
Udupi Correspondent
Puttur Bus Auto Accident: ಪತಿಯ ಆಟೋದಲ್ಲಿ ತೆರಳು...
02-03-25 11:01 pm
CM Siddaramaiah, BJP BY Vijayendra, Udupi: ರಾ...
02-03-25 09:36 pm
Dk Shivakumar, Udupi: ತ್ರಿವೇಣಿ ಸಂಗಮದಲ್ಲಿ ನೀರಿ...
02-03-25 06:10 pm
Mp Brijesh Chowta, Highway: 26 ಕೋಟಿ ವೆಚ್ಚದಲ್ಲ...
01-03-25 10:52 pm
02-03-25 06:37 pm
Bangalore Correspondent
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm
5 ವರ್ಷದ ಹೆಣ್ಣು ಮಗುವಿಗೆ ಕ್ರೂರ ಹಿಂಸೆ ನೀಡಿ ಅತ್ಯಾ...
28-02-25 02:37 pm
Bidar Murder, Crime: ಬೀದರ್ ; ಕುಡಿದು ಬಂದು ಕಿರು...
26-02-25 10:48 pm