ಬ್ರೇಕಿಂಗ್ ನ್ಯೂಸ್
03-07-23 10:04 pm Mangalore Correspondent ಕರಾವಳಿ
ಪುತ್ತೂರು, ಜುಲೈ 3: ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಖದರು ಹೆಚ್ಚುತ್ತಿದ್ದಂತೆ ಅದರಲ್ಲಿ ಗುರುತಿಸಿಕೊಂಡವರನ್ನು ಸಂಘ ಪರಿವಾರದಿಂದ ಹೊರಗಿಡುವ ಯತ್ನ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವೈಭವದ ಗಣೇಶೋತ್ಸವ ಎಂದು ಕರೆಯಲ್ಪಡುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಸಮಿತಿಯಿಂದ ಅರುಣ್ ಪುತ್ತಿಲ ಮತ್ತು ಅವರ ಜೊತೆಗೆ ಗುರುತಿಸಿರುವ ಮಂದಿಯನ್ನು ಪದಾಧಿಕಾರಿ ಸ್ಥಾನದಿಂದ ಹೊರಗಿಡಲಾಗಿದೆ.
ಬಿಜೆಪಿ ವಿರುದ್ಧವೇ ಪಕ್ಷೇತರ ಸ್ಪರ್ಧಿಸಿ, ಗೆಲುವಿನಿಂದ ಸಣ್ಣ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಅರುಣ್ ಕುಮಾರ್ ಪುತ್ತಿಲರಿಂದಾಗಿ ಪುತ್ತೂರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿತ್ತು. ಈ ನಡುವೆ, ಚುನಾವಣೆ ಬಳಿಕವೂ ಪುತ್ತಿಲ ಪರಿವಾರದ ಹೆಸರಲ್ಲಿ ಛಾಪು ಮೂಡಿಸುತ್ತಿರುವ ಅರುಣ್ ಪುತ್ತಿಲರನ್ನು ಸೈಡ್ ಲೈನ್ ಮಾಡುವುದಕ್ಕಾಗಿಯೇ ಅವರನ್ನು ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ಹೊರಗಿಡಲಾಗಿದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅರುಣ ಪುತ್ತಿಲ ಅವರು ಕಳೆದ ಹತ್ತು ವರ್ಷಗಳಿಂದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿದ್ದರು.
ಇದಲ್ಲದೆ, 18 ವರ್ಷ ಅಧ್ಯಕ್ಷರಾಗಿ ಪುತ್ತೂರಿನ ಗಣೇಶೋತ್ಸವನ್ನು ಜಿಲ್ಲೆಯಲ್ಲೇ ಗುರುತಿಸುವಂತೆ ಮಾಡಿದ್ದ ಉದ್ಯಮಿ ಶಶಾಂಕ್ ಕೋಟೆಚಾ ಅವರನ್ನೂ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ. ಪುತ್ತೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದ ಚುನಾವಣೆ ಸಮಯದಲ್ಲಿ ಪುತ್ತಿಲ ಪರ ದುಡಿದ ಬಹುತೇಕ ಎಲ್ಲರನ್ನೂ ಹೊಸ ಸಮಿತಿಯಿಂದ ದೂರವಿಡಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಮುನ್ನ ಪುತ್ತಿಲ ಪರಿವಾರ ಹಾಗೂ ಬಿಜೆಪಿಯನ್ನು ಒಗ್ಗೂಡಿಸಲು ದೆಹಲಿ ಮಟ್ಟದಿಂದಲೇ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಪುತ್ತೂರಿನಲ್ಲಿ ಈ ಎರಡು ಬಣ ಒಟ್ಟಿಗಿರಲೇಬಾರದು ಎನ್ನುವ ಬಿಜೆಪಿ ಒಳಗಿನ ಕೆಲವರ ನಿರ್ಧಾರಗಳಿಂದಾಗಿ ಈ ರೀತಿಯ ಬೆಳವಣಿಗೆ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಲಕ್ಷಣ ಕಾಣುತ್ತಿದೆ.
ಜುಲೈ 2ರಂದು ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಗಮನಕ್ಕೆ ತರದೆ ಗಣೇಶೋತ್ಸವ ಸಮಿತಿಯ ಸಭೆ ನಡೆದಿದ್ದು ಸಮಿತಿ ಗೌರವ ಅಧ್ಯಕ್ಷರಾಗಿ ಈ ಹಿಂದೆ ಇದ್ದಂತಹ ಡಾ.ಎಂ.ಕೆ ಪ್ರಸಾದ್ ಭಂಡಾರಿ ಅವರನ್ನೆ ಮುಂದುವರಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಕುಂಬ್ಳೆ, ಖಜಾಂಜಿ ಶ್ರೀನಿವಾಸ ಮೂಲ್ಯ, ಜತೆ ಕಾರ್ಯದರ್ಶಿಯಾಗಿ ನೀಲಂತ್, ಉಪಾಧ್ಯಕ್ಷರುಗಳಾಗಿ ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು, ರವೀಂದ್ರ ರೈ ನುಳಿಯಾಲು, ಸುಧೀರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಅರುಣ್ ಪುತ್ತಿಲ ಮತ್ತು ಶಶಾಂಕ್ ಕೊಟೇಚಾ ನೇತೃತ್ವದಲ್ಲಿ ಪುತ್ತೂರಿನ ಗಣೇಶೋತ್ಸವ ಎರಡು ಜಿಲ್ಲೆಗಳಲ್ಲಿ ಅತ್ಯಂತ ವೈಭವದ ಉತ್ಸವವಾಗಿ ಹೊರಹೊಮ್ಮಿತ್ತು. ಉಡುಪಿ, ಮಂಗಳೂರಿನಿಂದ ಸ್ತಬ್ಧಚಿತ್ರಗಳು ಬರುತ್ತಿದ್ದವು. ಈಗ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಬಿಕ್ಕಟ್ಟಿನ ಕಾರಣಕ್ಕೆ ಸಂಘ ಪರಿವಾರದಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಇದೇ ರೀತಿ ಹೋದಲ್ಲಿ ಲೋಕಸಭೆ ಚುನಾವಣೆ ಹೊತ್ತಿಗೆ ಇದರ ಬಿಸಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
Arun Puthila and his close followers removed from Mahalingeshwara Temple committee.
20-05-25 10:49 pm
Bangalore Correspondent
Speaker UT Khader: ವಿಧಾನಸಭೆ ಗ್ರೂಪ್ ಸಿ, ಡಿ ಹುದ...
20-05-25 08:22 pm
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
Shashi Kumar IPS, Corruption, Hubballi, polic...
19-05-25 04:00 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 11:12 pm
Mangalore Correspondent
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm