ಬ್ರೇಕಿಂಗ್ ನ್ಯೂಸ್
03-07-23 10:31 pm Mangalore Correspondent ಕರಾವಳಿ
ಮಂಗಳೂರು, ಜುಲೈ 3: ನೂರಾರು ಬೀದಿ ನಾಯಿಗಳಿಗೆ ಊಟ ಹಾಕುವ ಮಂಗಳೂರಿನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಅವರ ಮೇಲೆ ನೆರೆಮನೆಯ ನಿವಾಸಿ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.
ಮಂಜುಳಾ ಶೆಟ್ಟಿ ಎಂಬ ಮಹಿಳೆ ರಜನಿ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ. ಹಲ್ಲೆಗೀಡಾದ ರಜನಿ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ. ರಜನಿ ಅವರು ತನ್ನ ಬಾಡಿಗೆ ಮನೆಯಲ್ಲಿದ್ದುಕೊಂಡೇ ದಿನವೂ ನೂರಾರು ಬೀದಿ ನಾಯಿಗಳಿಗೆ ಅನ್ನ ಬೇಯಿಸಿ ಹಾಕುತ್ತ ಬಂದಿದ್ದಾರೆ.


ಬೀದಿ ನಾಯಿಗಳು ಮನೆಯ ಸುತ್ತ ಸೇರುತ್ತಿದ್ದ ವಿಚಾರದಲ್ಲಿ ರಜನಿ ಮತ್ತು ಮಂಜುಳಾ ನಡುವೆ ಜಗಳ ಆಗುತ್ತಿತ್ತು. ಇಂದು ಬೆಳಗ್ಗೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎನ್ನಲಾಗುತ್ತಿದೆ. ರಜನಿ ಶೆಟ್ಟಿಯವರ ಕೈಗೆ ಗಾಯವಾಗಿದೆ. ಎರಡು ವರ್ಷಗಳಿಂದ ನನ್ನ ಜೊತೆ ಜಗಳ ಮಾಡುತ್ತಿದ್ದಾಳೆ. ನೀರಿನ ಬಳಕೆ ವಿಚಾರದಲ್ಲೂ ಬೈಯುತ್ತಿದ್ದಳು. ಪ್ರತಿ ಬಾರಿ ಎಲ್ಲ ನಾಯಿಗಳಿಗೆ ಮತ್ತು ತನಗೆ ವಿಷ ಹಾಕಿ ಕೊಂದು ಹಾಕುವುದಾಗಿ ಬೆದರಿಸುತ್ತಿದ್ದಳು. ಇವತ್ತು ನನ್ನ ಮೇಲೆ ಕಲ್ಲು ತೂರಿದ್ದಾಳೆ. ನಾನು ನಾಯಿಗಳನ್ನು ಪೋಷಣೆ ಮಾಡುವುದನ್ನು ಬಿಡಬೇಕು ಮತ್ತು ಆ ಸ್ಥಳದಿಂದ ಎದ್ದು ಹೋಗಬೇಕು ಎಂಬುದು ಆಕೆಯ ಬಯಕೆ. ನಾನು 22 ವರ್ಷಗಳಿಂದ ನಾಯಿಗಳ ಜೊತೆಗಿದ್ದು ನನಗೆ ಯಾವುದೇ ಆರೋಗ್ಯ ತೊಂದರೆ ಆಗಿಲ್ಲ ಎಂದು ರಜನಿ ಶೆಟ್ಟಿ ತಿಳಿಸಿದ್ದಾರೆ.
ಹಲ್ಲೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಜನಿ ತನ್ನ ಮನೆಯಲ್ಲಿ ತೊಂದರೆಗೊಳಗಾದ ಬೀದಿ ನಾಯಿಗಳು, ಬೆಕ್ಕು, ಪಕ್ಷಿಗಳನ್ನು ಆರೈಕೆ ಮಾಡಿ ಸಾಕುತ್ತಿದ್ದಾರೆ.
Mangalore stray animal caretaker Rajani Shetty assaulted by neighbour over looking after dogs.Rajani was hit with a stone by her neighbour Manjula Shetty injuring her in the process. Rajani will file a complaint against Manjula
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm