Mangalore Rains, School College Holiday: ಭಾರೀ ಮಳೆ ಹಿನ್ನೆಲೆ ; ಮಂಗಳೂರು, ಬಂಟ್ವಾಳ, ಮೂಡುಬಿದ್ರೆ ತಾಲೂಕಿನಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

04-07-23 09:36 am       Mangaluru Correspondent   ಕರಾವಳಿ

ಕರಾವಳಿಯಲ್ಲಿ ಮುಂಗಾರು ಬಿರುಸುಗೊಂಡಿದ್ದು ಹವಾಮಾನ ಇಲಾಖೆ ವ್ಯಾಪಕ ಮಳೆಯಾಗುವ ಎಚ್ಚರಿಕೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ತಾಲೂಕು ತಹಸೀಲ್ದಾರ್ ಮತ್ತು ಶಿಕ್ಷಣಾಧಿಕಾರಿಗಳಿಗೆ ನೀಡಿದ್ದಾರೆ.

ಮಂಗಳೂರು, ಜುಲೈ 4: ನಿನ್ನೆ ರಾತ್ರಿಯಿಡೀ ಭಾರೀ ಮಳೆಯಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕು ವ್ಯಾಪ್ತಿಯಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು, ಮುಲ್ಕಿ- ಮೂಡುಬಿದ್ರೆ, ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಎಲ್ಲ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆ, ಕಾಲೇಜುಗಳಿಗೆ ಇಂದು ಜುಲೈ 4ರಂದು ರಜೆ ನೀಡಲಾಗಿದೆ.

ಮಂಗಳೂರು ತಾಲೂಕು ವ್ಯಾಪ್ತಿಯ ಉಳ್ಳಾಲ, ಮಂಗಳೂರು, ಸುರತ್ಕಲ್, ಮುಲ್ಕಿ ವರೆಗೂ ರಜೆ ಇರುತ್ತದೆ. ಇದೇ ವೇಳೆ, ಪುತ್ತೂರು, ಸುಳ್ಯದಲ್ಲಿಯೂ ಭಾರೀ ಮಳೆಯಾಗಿದೆ. ಅಲ್ಲಿ ಮಳೆ ವಿಕೋಪ ಹೆಚ್ಚಿದ್ದರೆ ಆಯಾ ತಾಲೂಕು ವ್ಯಾಪ್ತಿಯ ತಹಸೀಲ್ದಾರ್, ಶಿಕ್ಷಣಾಧಿಕಾರಿ ಶಾಲೆ, ಕಾಲೇಜಿಗೆ ರಜೆ ನೀಡಲು ಮುಕ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ. 

ಜುಲೈ 3ರಿಂದ 5ರ ವರೆಗೆ ಕರಾವಳಿ ಭಾಗದಲ್ಲಿ ಮಳೆ ಹೆಚ್ಚಿರಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ನೀಡಿದೆ. ಮಕ್ಕಳು, ಪ್ರವಾಸಿಗರು ಈ ವೇಳೆ ನದಿ, ಸಮುದ್ರ ಬಳಿ ಹೋಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ

Heavy rains in Mangalore, schools and colleges declared holidays by Dakshina Kannada DC. In an order taken out by District Disaster Management Authority and authorised by DC Mugilan holiday is declared for all Anganwadi centres, primary and high schools, pre-university, government aided and private educational institutions on July 4.