Sharan Pumpwell, VHP: ಬಜರಂಗದಳ ಸಂಘಟನೆ ಮತ್ತು ನಾಯಕರ ಬಗ್ಗೆ ಅವಹೇಳನಕಾರಿ ಚಿತ್ರಿಸಿ ವಿಡಿಯೋ ; ಕದ್ರಿ ಠಾಣೆಗೆ ದೂರು

04-07-23 08:58 pm       Mangalore Correspondent   ಕರಾವಳಿ

ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮತ್ತು ಬಜರಂಗದಳ ಸಂಘಟನೆಯ ಬಗ್ಗೆ ದ್ವೇಷ ಭಾವನೆ ಮೂಡಿಸುವ ರೀತಿ ವಿಡಿಯೋ ಒಂದನ್ನು ಎಡಿಟ್ ಮಾಡಿ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದು ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು, ಜುಲೈ 4: ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮತ್ತು ಬಜರಂಗದಳ ಸಂಘಟನೆಯ ಬಗ್ಗೆ ದ್ವೇಷ ಭಾವನೆ ಮೂಡಿಸುವ ರೀತಿ ವಿಡಿಯೋ ಒಂದನ್ನು ಎಡಿಟ್ ಮಾಡಿ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದು ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ನಡೆದ ಹನಿಟ್ರಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಬಜರಂಗದಳ ಕಾರ್ಯಕರ್ತರೆಂದು ಬಿಂಬಿಸಿದ್ದಲ್ಲದೆ, ಇದಕ್ಕೆಲ್ಲ ಸಂಘಟನೆಯ ಮುಖಂಡರೇ ಕಾರಣ ಎಂದು ಹೇಳಿ ವಿಡಿಯೋ ರಚಿಸಲಾಗಿದೆ. ಅದನ್ನು ಕರಾವಳಿ ರಶೀದ್ ಎನ್ನುವ ಹೆಸರಿನ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಷೇರ್ ಮಾಡಲಾಗಿತ್ತು. ಅಲ್ಲದೆ, ವಿಡಿಯೋವನ್ನು ವಾಟ್ಸಪ್ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಜರಂಗದಳ ಕಾರ್ಯಕರ್ತ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ದೂರು ನೀಡಲಾಗಿದೆ.

ಶರಣ್ ಪಂಪ್ವೆಲ್ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿ ಮಾನಹಾನಿ ಮಾಡಲಾಗಿದ್ದು, ಇದು ಸಮಾಜದಲ್ಲಿ ಸಾಮರಸ್ಯ ಕೆಡಿಸಲು ಮಾಡಿರುವ ಹುನ್ನಾರ. ನಮ್ಮ ಸಂಘಟನೆಯ ಬಗ್ಗೆ ದ್ವೇಷಪೂರಿತ ಭಾವನೆ ಹರಡುವಂತೆ ವಿಡಿಯೋದಲ್ಲಿ ಚಿತ್ರಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದ್ದು ಹಿಂದು- ಮುಸ್ಲಿಂ ದ್ವೇಷ ಬಿತ್ತುವ ರೀತಿ ವಿಡಿಯೋವನ್ನು ಷೇರ್ ಮಾಡುತ್ತಿದ್ದಾರೆ. ಕರಾವಳಿ ರಶೀದ್ ಎನ್ನುವ ಪೇಜ್ ಅಡ್ಮಿನ್ ಸೇರಿದಂತೆ ಈ ವಿಡಿಯೋವನ್ನು ಹಂಚಿಕೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Derogatory video against Vhp Sharan Pumpwell and Bajarang dal, complaint filed by VHP at Kadri Police Station in Mangalore.