ಬ್ರೇಕಿಂಗ್ ನ್ಯೂಸ್
05-07-23 09:24 pm Mangalore Correspondent ಕರಾವಳಿ
ಉಳ್ಳಾಲ, ಜು.5: ಸೋಮೇಶ್ವರದ ಪಿಲಾರು ಎಂಬಲ್ಲಿ ನಿನ್ನೆ ಸಂಜೆ ಸುರೇಶ್ ಗಟ್ಟಿ ಎಂಬವರು ಕಾಲು ಜಾರಿ ಕಾಲುವೆಗೆ ಬಿದ್ದು ಅಕಾಲಿಕ ಸಾವನ್ನಪ್ಪಿದ್ದರು. ಮಳೆಯಿಂದಾಗಿ ಸಾವು ಆಗಿದ್ದರಿಂದ ಮೃತರ ಕುಟುಂಬಕ್ಕೆ ಜಿಲ್ಲಾಡಳಿತ ತುರ್ತಾಗಿ 5 ಲಕ್ಷ ರೂ. ಪರಿಹಾರ ಒದಗಿಸಿದೆ.
ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ (52) ಅವರು ನಿನ್ನೆ ಸಂಜೆ ಮನೆಯ ಮುಂದಿನ ಮೋರಿಗೆ ಬಿದ್ದು ಮೃತ ಪಟ್ಟಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತ್ತು. ಅಂತ್ಯ ಸಂಸ್ಕಾರ ನಡೆದು ಬೂದಿಯ ಬಿಸಿ ಆರುವ ಮುನ್ನವೇ ಮೃತರ ಕುಟುಂಬಸ್ಥರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರ ನೀಡಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ, ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಹೆಚ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವ ಮಹಜರು ವರದಿಯನ್ನು ಸಂಗ್ರಹಿಸಿ, ಮೃತಪಟ್ಟ ಬಗ್ಗೆ ಪ್ರಮಾಣ ಪತ್ರವನ್ನು ಸರಕಾರಕ್ಕೆ ತಲುಪಿಸಿದ್ದಲ್ಲದೆ, ಒಂದೇ ದಿನದಲ್ಲಿ ಪರಿಹಾರ ಧನವನ್ನು ಮೃತ ಸುರೇಶ್ ಗಟ್ಟಿಯವರ ಪತ್ನಿ ಶಾಂಭ ಅವರಿಗೆ ನೀಡಲಾಗಿದೆ.
HK ಸುದ್ದಿ ಇಂಫ್ಯಾಕ್ಟ್ ; ತಕ್ಷಣವೇ ಪರಿಹಾರ
ಬಡ ಕುಟುಂಬದ ಮೃತ ಸುರೇಶ್ ಗಟ್ಟಿ ಅವರು ಪೈಂಟರ್ ವೃತ್ತಿ ಮಾಡುತ್ತಿದ್ದರು. ಅವರ ಪತ್ನಿ ಶಾಂಭ ಅವರು ಬೀಡಿ ಕಟ್ಟುತ್ತಿದ್ದಾರೆ. ದಂಪತಿಯ ಇಬ್ಬರು ಹೆಣ್ಮಕ್ಕಳಲ್ಲಿ ಹಿರಿಯವಳಿಗೆ ಕಳೆದ ವರ್ಷ ಮದುವೆಯಾಗಿತ್ತು. ಕಿರಿಯ ಮಗಳು ಅವಿವಾಹಿತಳಾಗಿದ್ದು ವಿದ್ಯಾಭ್ಯಾಸ ಮೊಟಕುಗೊಳಿಸಿ ಸಣ್ಣ ಕೆಲಸ ಕೆಲಸಕ್ಕೆ ತೆರಳುತ್ತಿದ್ದಾಳೆ. ಬಾಡಿಗೆ ಮನೆಯಲ್ಲಿ ವಾಸಿಸುವ ಈ ಕುಟಂಬದ ಸಂಕಷ್ಟದ ಬಗ್ಗೆ ನಿನ್ನೆ ಹೆಡ್ ಲೈನ್ ಕರ್ನಾಟಕ ವರದಿ ಮಾಡಿತ್ತು. ನಂತರ ಈ ವರದಿ ರಾಜ್ಯವಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಅಶಕ್ತ ಕುಟುಂಬಕ್ಕೆ ತ್ವರಿತವಾಗಿ ಕಂದಾಯ ಇಲಾಖೆ ಪರಿಹಾರ ಘೋಷಿಸಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
Mangalore Heavy Rain: ಮುಂದುವರಿದ ಮಳೆಯಾರ್ಭಟ ; ಉಳ್ಳಾಲದಲ್ಲಿ ಮನೆ ಬಳಿಯೇ ಮೋರಿಗೆ ಬಿದ್ದು ವ್ಯಕ್ತಿ ಸಾವು
Mangalore Rs 5 lacs paid as compensation to rain victim Suresh gatty family who fell into hole of rain water in Someshwara. The department of revenue has paid Rs 5 lacs as compensation under the National Calamity Fund from the department's treasury No. two to his family members.
21-05-25 05:42 pm
Bangalore Correspondent
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
Accident in Vijaypura, 5 Killed, VRL volvo bu...
21-05-25 11:33 am
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 07:17 pm
Mangalore Correspondent
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm