ಬ್ರೇಕಿಂಗ್ ನ್ಯೂಸ್
05-07-23 10:41 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ನಗರದ ಕೊಟ್ಟಾರದಲ್ಲಿ ಪ್ರತಿ ಬಾರಿ ಜೋರು ಮಳೆಯಾದರೂ, ಹೆದ್ದಾರಿಯಲ್ಲಿ ನೀರು ನಿಲ್ಲುವುದು, ಅಲ್ಲಿನ ಆಸುಪಾಸಿನ ಮನೆಗಳಿಗೆ ನೀರು ನುಗ್ಗುವುದು ಮಾಮೂಲಿಯಾಗಿದೆ. ಎರಡು ದಿನಗಳ ಹಿಂದೆ ಸೋಮವಾರ ಸಂಜೆ 4ರಿಂದ 5 ಗಂಟೆ ವರೆಗೆ ಧಾರಾಕಾರ ಮಳೆಯಾಗಿದ್ದಕ್ಕೆ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಗೆ ಕೊಟ್ಟಾರ ಮುಳುಗಡೆಯಾಗಿತ್ತು. ಎರಡು ದಿನಗಳ ನಿರಂತರ ಸುರಿದ ಮಳೆಗೆ ಮತ್ತೆ ಮತ್ತೆ ಅಲ್ಲಿನ ಮನೆಗಳಿಗೆ ಚರಂಡಿ ನೀರು ಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಮಧ್ಯಾಹ್ನ ಸುರಿದ ಮಳೆಗೆ ಮತ್ತೆ ಕೊಟ್ಟಾರ ಭಾಗದಲ್ಲಿ ಕೃತಕ ನೆರೆ ಉಂಟಾಗಿತ್ತು. ಕೆಪಿಟಿ ಕಡೆಯಿಂದ ತೆರಳುವ ಹೆದ್ದಾರಿಯ ಕೊಟ್ಟಾರ ಫ್ಲೈಓವರ್ ಮುಂಭಾಗದಲ್ಲಿಯೇ ರಸ್ತೆಯಲ್ಲೇ ನೀರು ನಿಂತಿತ್ತು. ಇದರಿಂದಾಗಿ ವಾಹನಗಳು ನೀರಿನಲ್ಲೇ ತೇಲುತ್ತಾ ಸಾಗುವ ಸ್ಥಿತಿ ಉಂಟಾಗಿತ್ತು. ಇದು ಪ್ರತಿ ದಿನವೂ ಅಲ್ಲಿನ ದೈನೇಸಿ ಸ್ಥಿತಿ. ರಸ್ತೆಯಲ್ಲಿ ಬಿದ್ದ ಮಳೆನೀರು ಹರಿದು ಹೋಗಲು ವ್ಯವಸ್ಥೆಯೇ ಇಲ್ಲದಿರುವುದು ಅಲ್ಲಿನ ದುಸ್ಥಿತಿಗೆ ಕಾರಣ.
ಬುಧವಾರ ಮಧ್ಯಾಹ್ನ ಕೊಟ್ಟಾರ ಜಂಕ್ಷನ್ ಬಳಿಯಲ್ಲೇ ಮನೆಯೊಳಗೆ ಚರಂಡಿ ಬ್ಲಾಕ್ ಆಗಿ ಮಳೆ ನೀರು ನುಗ್ಗಿತ್ತು. ಅಲ್ಲಿನ ನಿವಾಸಿಗಳ ಪ್ರಕಾರ, ಮೊನ್ನೆಯಿಂದ ಇಡೀ ದಿನ ಇದೇ ಸ್ಥಿತಿಯಂತೆ. ಜೋರು ಮಳೆ ಬಂದ ಕೂಡಲೇ ನೀರು ಉಕ್ಕೇರುತ್ತಾ ಬಂದು ಮನೆಯೊಳಕ್ಕೆ ನುಗ್ಗುತ್ತದೆ. ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಇಂಥ ಸ್ಥಿತಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯೊಳಗೆ ಮೊಣಕಾಲು ಮುಳುಗುವಷ್ಟು ಮಳೆ ನೀರು ನಿಂತಿದ್ದರಿಂದ ಸೋಫಾ ಇನ್ನಿತರ ಪೀಠೋಪಕರಣಗಳು, ಇಲೆಕ್ಟ್ರಾನಿಕ್ ವಸ್ತುಗಳು ತೋಯ್ದು ಹೋಗಿದ್ದವು. ಅವೈಜ್ಞಾನಿಕ ಕಾಮಗಾರಿ, ಕಾಲುವೆ ಒತ್ತುವರಿ, ಜನಪ್ರತಿನಿಧಿಗಳು ಮತ್ತು ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸ್ಥಿತಿಯಾಗಿದೆ ಎಂದು ಹಿಡಿಶಾಪ ಹಾಕಿದ್ದಾರೆ.
ಕೊಟ್ಟಾರದ ಮಹೇಶ್ ಕಾಲೇಜು ಆವರಣದ ಮನೆಗಳ ಸ್ಥಿತಿಯೂ ಇದರಿಂದ ಭಿನ್ನವಾಗಿಲ್ಲ. ಅಡ್ಡಲಾಗಿದ್ದ ತೋಡಿಗೆ ಮಣ್ಣು ಹಾಕಿ ಮಹೇಶ್ ಕಾಲೇಜು ಕ್ಯಾಂಪಸ್ ಮಾಡಿದ್ದರಿಂದ ಪರಿಸರದ ನಿವಾಸಿಗಳ ಮನೆಗಳು ತಗ್ಗಿನ ಪ್ರದೇಶದಲ್ಲಿದ್ದು ನೀರು ನುಗ್ಗುವ ಸ್ಥಿತಿಯಾಗಿದೆ. ಇದರ ಬಗ್ಗೆ ಪಾಲಿಕೆಯ ಕಾರ್ಪೊರೇಟರ್, ಅಧಿಕಾರಿಗಳಿಗೆ ಎಷ್ಟು ಹೇಳಿದರೂ ಕ್ಯಾರ್ ಇಲ್ಲವಂತೆ. ಮತ್ತೊಂದು ಕಡೆ, ಕೊಟ್ಟಾರದಲ್ಲಿ ಮಾಲೆಮಾರ್, ಉರ್ವಾ ಸ್ಟೋರ್ ಮತ್ತು ಹೆದ್ದಾರಿ ಉದ್ದಕ್ಕೂ ಬರುವ ಹೀಗೆ ಮೂರು ಕಾಲುವೆಗಳ ನೀರು ಒಂದೆಡೆ ಸೇರುತ್ತದೆ. ಅಲ್ಲಿಂದ ಕುಳೂರು ವರೆಗೆ ಸಾಗಿ ಹೆದ್ದಾರಿಯಿಂದ ಪಶ್ಚಿಮಕ್ಕೆ ಸಾಗುತ್ತದೆ. ಹೆದ್ದಾರಿ ಬದಿಯಿಂದ ಕುಳೂರು ವರೆಗೆ ಸಾಗುವಲ್ಲಿ ಬಹಳಷ್ಟು ಹಳೆಕಾಲದ ತಗ್ಗಿನ ಸೇತುವೆಗಳಿದ್ದು, ನೀರಿನ ಪ್ರಮಾಣ ಹೆಚ್ಚಿದ ಕೂಡಲೇ ಕೊಟ್ಟಾರದಲ್ಲಿ ಹೆದ್ದಾರಿಗೆ ನೀರು ನುಗ್ಗುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಯದ ವಿಚಾರ ಅಲ್ಲ. ನಿರ್ಲಕ್ಷ್ಯಕ್ಕೆ ಮದ್ದಿಲ್ಲ ಅನ್ನಬೇಕಷ್ಟೆ.
ಹೀಗಾಗಿ ಅಲ್ಲಿನ ನಿವಾಸಿಗಳು ಪ್ರತಿ ಮಳೆಗಾಲದಲ್ಲೂ ಪ್ರಾಣ ಸಂಕಟ ಅನುಭವಿಸುತ್ತಾರೆ. ಜಾಗ ಬಿಟ್ಟು ಹೋಗುವುದಕ್ಕೂ ಆಗಲ್ಲ. ಮನೆಗಳನ್ನು ಬಾಡಿಗೆ ಕೊಟ್ಟರೂ, ಈ ಭಾಗದಲ್ಲಿ ಬೇಡ ಎಂದು ಯಾರೂ ಬಾರದ ಸ್ಥಿತಿ ಇದೆ. ಪಾಲಿಕೆಯವರು, ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಬುಧವಾರ ಮಧ್ಯಾಹ್ನ ಸ್ಥಳೀಯ ಕಾರ್ಪೊರೇಟರನ್ನು ಅಲ್ಲಿನ ನಿವಾಸಿಗಳು ಹಿಗ್ಗಾಮುಗ್ಗಾ ಜಾಡಿಸಿದ್ದೇ ಅಲ್ಲಿನ ಜನರ ಆಕ್ರೋಶವನ್ನು ತೋರಿಸಿತ್ತು.
House submerged due to heavy rains in Mangalore, residents demand action, slam MLA over negligence. The family has been living in this house for the past 26 years, and they have been facing waterlogging issues for the last 10 years.
29-11-24 05:01 pm
Bangalore Correspondent
Belagavi, Malamaruthi police station, Pooja:...
29-11-24 04:12 pm
BK HariPrasad Congress: ಸಚಿವ ಸ್ಥಾನಕ್ಕೇರುತ್ತಾರ...
28-11-24 10:41 pm
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
29-11-24 10:09 pm
HK News Desk
Heart Attack, Hyderabad: 10 ವರ್ಷದ ಬಾಲಕಿಗೆ ಹೃದ...
29-11-24 10:04 pm
ಮಹಾರಾಷ್ಟ್ರದಲ್ಲಿ ಮುಂದುವರಿದ ಬಿಕ್ಕಟ್ಟು ; ಪ್ರಮುಖ...
29-11-24 06:26 pm
Sambhal Mosque, Fight: ಸಂಭಾಲ್ ಮಸೀದಿ ಸರ್ವೆ ಆದೇ...
29-11-24 06:22 pm
Raj Kundra Raid, Shilpa Shetty: ಬೆತ್ತಲೆ ಜಗತ್ತ...
29-11-24 02:32 pm
29-11-24 11:09 pm
Udupi Correspondent
VHP protest, Bangladesh violence, Mangalore:...
29-11-24 06:19 pm
Babu Pilar, U T Khader, Mangalore: ತೊಕ್ಕೊಟ್ಟಿ...
28-11-24 09:58 pm
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
29-11-24 10:49 pm
Bangalore Correspondent
Dharmasthala Robbery, Mangalore crime: ಧರ್ಮಸ್...
29-11-24 12:20 pm
Mangalore Mukka Srinivas College, Ragging: ಮು...
29-11-24 12:02 pm
Murder, Mulki, Mangalore Crime: ಮುಲ್ಕಿಯಲ್ಲಿ ಬ...
27-11-24 03:36 pm
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm